ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C೬೩೬ ಅಧ್ಯಾ. ೬.] ದಶಮಸ್ಕಂಧವು. ನು. ಆಗ ನಂದನು ವಸುದೇವನನ್ನು ಕುರಿತು. (ಆರ್ ವಸುದೇವಾ ! ನಮ್ಮ ನಮ್ಮ ಅದೃಷ್ಟಕ್ಕೆ ಯಾರೇನು ಮಾಡಬಲ್ಲರು? ನಿನ್ನ ವೃತ್ತಾಂತವು ನನಗೆ ಬಹಳ ಸಂಕಟಕರವಾಗಿದೆ! ನಿನಗೆ ದೇವಕಿಯಲ್ಲಿ ಹುಟ್ಟಿದ ಗಂಡುಮಕ್ಕಳೆಲ್ಲ ರನ್ನೂ ಕಂಸನು ಕೊಂದುಬಿಟ್ಟನು. ಕೂಸಿಗಾಲಕ್ಕೆ ಒಂದು ಹೆಣ್ಣು ಕೂಸು ಹಟ್ಟಿ,ಆದಾದರೂ ನಿನ್ನ ಕೈಗೆ ದಕ್ಕಿತ?ಹುಟ್ಟಿದಾಗಲೇ ಗಾಳಿಯಂ ತೆ ಆಕಾಶಕ್ಕೆ ಹಾರಿಹೋಯಿತು. ಲೋಕದ ಜನವೆಲ್ಲವೂ ಅದೃಷ್ಟಾನುಸಾ ರವಾಗಿ ಸುಖದುಃಖಗಳನ್ನು ಅನುಭವಿಸದೆ ತೀರದು! ವಿವೇಕಿಗಳು ಇದನ್ನು ತಿಳಿದೇ.ಸುಖದುಃಖಗಳೆರಡನ್ನೂ ಸಮವಾಗಿ ಭಾವಿಸಿ, ಅವುಗಳಿಂದ ಮನಸ್ಸು ಕಲಗದಿರುವರು” ಎಂದನು. ತಿರುಗಿ ವಸುದೇವನು ನಂದನನ್ನು ಕುರಿತು, ನಂದಾ! ಅವೆಲ್ಲವೂ ಹಾಗಿರಲಿ' ನೀನು ರಾಜನಿಗೆ ಸಲ್ಲಿಸಬೇಕಾದ ಪೊಗು ಯನ್ನು ಸಲ್ಲಿಸಿದುದಾಯಿತಷ್ಟೆ! ಭಾಗ್ಯವಶದಿಂದ ನಾವಿಬ್ಬರೂ ಸೇರಿ ಪರಸ್ಪ ರಯೋಗಕ್ಷೇಮಗಳನ್ನೂ ತಿಳಿದಂತಾಯಿತು! ಇನ್ನು ಬಹಳದಿನಗಳವರೆಗೆ ನೀನು ಇಲ್ಲಿರಬಾರದು. ಈಗ ಗೋಕುಲದಲ್ಲಿ ಉತ್ಪಾತಗಳ ತೋ ರುತ್ತಿರುವಹಾಗಿದೆ!ನೀನು ಅಲ್ಲಿನ ಯೋಗಕ್ಷೇಮವನ್ನು ಕೊಡು ಹೋಗು!” ಎಂದನು. ವಸುದೇವನು ಈ ಮಾತನ್ನು ಹೇಳಿದೊಡನೆ, ನಂದನೇ ಮೊದ ಲಾಗಿ ಅಲ್ಲಿಗೆ ಬಂದಿದ್ದ ಗೋಪಾಲಕರೆಲ್ಲರೂ, ತಾವು ತಂದಿದ್ದ ಎತ್ತಿನ ಬಂಡಿಗಳನ್ನೇರಿ, ವಸುದೇವನ ಅನುಮತಿಯನ್ನು ಪಡೆದು, ಗೋಕುಲದಕಡೆಗೆ ಹೊರಟರು. ಇದು ಐದನೆಯ ಅಧ್ಯಾಯವು. ~- - w+Kಪೂತನಾವಧನ •w.. ನಂದನು ಹಿಂತಿರುಗಿ ಬರುವಾಗ ದಾರಿಯಲ್ಲಿ, ಕೆಲವು ಉ ಶಾತಗಳು ಕಂಡು ಬಂದುವು. ಆದರಿಂದ, ವಸುದೇವನ ಮಾತು ಸುಳ್ಳಲ್ಲ ಎಂದೆಣಿಸಿ, ಅನಿವಾರಣೆಗಾಗಿ ತನಗೆ ಕುಲದೈವವಾದ ಶ್ರೀಹರಿಯನ್ನು ಧ್ಯಾನಮಾಡುತ್ತಲೇ ಬಂದನು. ನಂದನ ಗೋಕುಲಕ್ಕೆ ಬಂದು ಸೇರುವಷ್ಟರಲ್ಲಿ, ಇತ್ತಲಾಗಿ ಕರಸ್ವಭಾವವನ್ನ ಪೂತನಿಯೆಂಬ ಘೋ ರಾಕ್ಷಸಿಯೊಬ್ಬಳು, ಕಂಸನಿಂದ ಪ್ರೇರಿತಳಾಗಿ, ಪಟ್ಟಣಗಳಲ್ಲಿಯೂ,