ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೮ ಶ್ರೀಮದ್ಭಾಗವತವು [ಅಧ್ಯಾ. ೬. ಗ್ರಾಮಗಳಲ್ಲಿಯೂ, ಸಣ್ಣ ಹಳ್ಳಿಗಳಲ್ಲಿಯೂ ಪ್ರವೇತಿಸಿ, ಕಂಡಕಂಡ ಮಕ್ಕಳನ್ನು ಕೊಲ್ಲುತ್ತ ಅಲ್ಲಲ್ಲಿ ಸುತ್ತುತಿದ್ದಳು. ಆದರೇನು? ಭಕ್ತ ಪಾಲಕ ನಾದ ಆ ಭಗವಂತನ ಗುಣಶ್ರವಣಕೀರ್ತನಾದಿಗಳಿಂದಲೇ ಸಮಸ್ತಭೂ ತ ಬೇತಾಳಾದಿಗ್ರಹಗಳೂ, ರಾಕ್ಷಸರೂ ನಾಶಹೊಂದುವರು. ಯಾವ ದೇಶ ದಲ್ಲಿ ಜನರು ತಮ್ಮ ತಮ್ಮ ಇತರಕಾರಗಳಡನೆ, ಆ ಭಗವಂತನ ಗುಣಕೀ ರ್ತನಗಳನ್ನೂ ಒಂದು ನಿಯತಕಾಲ್ಯವನ್ನಾಗಿ ನಡೆಸದಿರುವರೋ, ಅಂತಹ ಸ್ಥಳಗಳಲ್ಲಿ, ರಾಕ್ಷಸರು ಸುಲಭವಾಗಿ ಪ್ರವೇಶಿಸಬಲ್ಲರು. ಹೀಗಿರುವಾಗ ಭ ಗವಂತನು ಕೃಷ್ಣರೂಪದಿಂದ ತಾನೆ: ಸಾಕ್ಷಾತ್ತಾಗಿ ವಾಸಮಾಡುತ್ತಿರು ವ ನಂದಗೋಕುಲದಲ್ಲಿ, ಅಂತಹ ರಾಕ್ಷಸಿಯರು ಏನುಮಾಡಬಲ್ಲರು.? ಆದ ರೆ ಪೂತನೆಯು ಅಲ್ಲಿಯೂ ತನ್ನ ಚೇಷ್ಟೆಯನ್ನು ತೋರಿಸದೆ ಬಿಡಲಿಲ್ಲ. ಆ ಕೂರರಾಕ್ಷಸಿಯು, ಒಮ್ಮೆ ಮಾಯೆಯಿಂದ ತನ್ನ ನಿಜಸ್ವರೂಪವನ್ನು ಮ ರೆಸಿಕೊಂಡು, ಸಾಮಾನ್ಯ ಗೋಪಸ್ತಿಯಂತೆ ಆಕಾರವನ್ನು ತಾಳಿ, ನಂದ ಗೋಕುಲವನ್ನು ಪ್ರವೇತಿಸಿದಳು. ಈ ಕಪಟವೇಷದಲ್ಲಿ ಅವಳು ತೋರಿಸು ತಿದ್ದ ಬೆಡಗನ್ನು ಕೇಳಬೇಕೆ ? ಅಂದವಾದ ತಲೆತುರುಬು ! ಆದರಮೇಲೆ ಮಲ್ಲಿಗೆ ಹೂವಿನ ಬಂಡೆ ? ಉಬ್ಬಿದ ನಿತಂಬಗಳು ! ಬುಗುರಿಯಂತಿರು ವ ಸ್ತನಗಳು ! ಈ ಸ್ವನಸಿತಂಬಗಳ ಭಾರದಿಂದ ಬಳಕುವಂತಿರುವ ಸಣ್ಣ ನಡು ! ಅಂದವಾದ ಸೀರೆ ! ಕರ್ಣಾಭರಣಗಳ ಕಾಂತಿಯಿಂದ ಕಳೆ ಯೇರಿದ ಮುಖದ ಸೊಗಸು ! ಇಂತಹ ಸುಂದರಾಕಾರವನ್ನು ತಾಳಿ ಆ ರಾಕ್ಷಸಿಯು, ಅಂದವಾದ ತನ್ನ ಮುಗುಳಗೆಯಿಂದಲೂ, ಓರೆನೋ ಟಂದಲೂ, ಆ ಗೋಕುಲದಲ್ಲಿ ಗೋಪಸಿಯರೆಲ್ಲರ ಮನಸ್ಸನ್ನೂ ಆಕರ್ಷಿಸುವಂತೆ ಅವರ ಮುಂದೆ ಅಲ್ಲಲ್ಲಿ ನಲಿದಾಡುತ್ತಿದ್ದಳು. ಕೈಯಲ್ಲಿ ಶೀಲಾ ರವಾದ ಕಮಲವನ್ನು ಹಿಡಿದು ಅಲ್ಲಲ್ಲಿ ಸುತ್ತುತ್ತಿದ್ದ ಈ ರಾಕ್ಷಸಿಯನ್ನು ನೋಡಿ ಗೋಪಸ್ತ್ರೀಯರು, ಗೋಕುಲದಲ್ಲಿ ಕೃಷ್ಣರೂಪದಿಂದ ಅವತರಿಸಿದ ತನ್ನ ಪತಿಯನ್ನು ನೋಡುವುದಕ್ಕಾಗಿ, ಸಾಕ್ಷಾಕ್ಷಿ ದೇವಿಯೇ ಆ ರೂಪದಿಂ ದ ಬಂದಿರಬಹುದೆಂದು ಭಾವಿಸುತಿದ್ದರು. ಮಕ್ಕಳಿಗೆ ಕೂರಗ್ರಹದಂತಿದ್ದ ಆ ಪೂತನೆಯು, ಹೀಗೆ ಕಪಟವೇಷದಿಂದ ಅಲ್ಲಲ್ಲಿ ಮಕ್ಕಳನ್ನು ಹಿಡಿದು