ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯ ೬.] ದಶಮಸ್ಕಂಧವ್ರ NELT ಅತ್ಯ, ಒಮ್ಮೆ ನಂದನ ಮನೆಗೂ ಪ್ರವೇತಿಸಿದಳು. ಅಲ್ಲಿ ಇವಳನ್ನು ನೋ ಡಿದ ಗೋಪಸಿಯರೆಲ್ಲರೂ, ಅವಳ ನಿಜವನ್ನು ತಿಳಿಯಲಾರದೆ, ಆಕೆಯನ್ನು ಸಾಧುಸ್ಸಿಯೆಂದೇ ನಂಬಿ ಸುಮ್ಮನಿರುತ್ತಿದ್ದುದರಿಂದ, ಈ ರಾಕ್ಷಸಿಯು, ಅಲ್ಲಲ್ಲಿ ಯಥೇಚ್ಛವಾಗಿ ತಿರುಗಿ ನೋಡುವುದಕ್ಕೆ ಅವಕಾಶವಾಯಿತು. ಹೀಗೆ ಪೂತನೆಯು ಅಲ್ಲಲ್ಲಿ ಹುಡುಕುತ್ತಬರುವಾಗ, ಆ ನಂದಗೃಹದಲ್ಲಿ, ಬು ಮುಚ್ಚಿದ ಕೆಂಡದಃ ತನ್ನ ಸವತೇಜಸ್ಸನ್ನು ಮರೆಸಿಕೊಂಡು, ಸಣ್ಣ ಶಿಶು ವಾಗಿ ಹಾಸಿಗೆಯಲ್ಲಿ ಮಲಗಿದ್ದ ಶ್ರೀಕೃಷ್ಣನು ಕಂಡಳು. ಸಕಲ ಚರಾ ಚರಗಳಿಗೂ ಅ೦ತಾಮಿಯಾದ ಶ್ರೀಕೃಷ್ಣನು, ಆ ಪೊತನೆಯು ಮಕ್ಕಳ ಮಾರಿಯೆಂಬುದನ್ನು ತಿಳಿದಿದ್ದರೂ, ತನ್ನ ಸತ್ವರತ್ವವನ್ನು ಹೊರಪಡಿ ಸದೆ, ಆಗಲೂ ಬಾಲಭಾವವನ್ನೆ ನಟಿಸುತ್ತ, ನಿದ್ರೆ ಮಾಡುವಂತೆ ಕಣ್ಣುಗ ಇನ್ನು ಮುಚ್ಚಿಕೊಂಡು ಸುಲ್ಲದೆ ಮಲಗಿದ್ದನು. ತನ್ನ ಮೃತ್ಯವೇ ಆತನೆಂಬುದನ್ನು ತಿಳಿಯದೆ ಆ ರಾಕ್ಷಸಿಯ, ಮೆಲ್ಲಗೆ ಮುಂದೆ ಹೋಗಿ, ಮಲ ಗಿದ ಹಾವನ್ನು ಹೆಗ್ಯವೆಂದು ತಿಳಿದು ಕೈಗೆತ್ತಿಕೊಳ್ಳುವ ಮೂಢರಂತೆ, ತನಗೆ ಮೃತ್ಯುರೂಪಿಯಾ" ಹುಟ್ಟಿರುವ ಆ ಶಿಶುವತಿ ತನ್ನ ತೊಡೆಯಮೇಲೆ ಮಲಗಿಸಿಕೊಂಡಳು ಮೃದುವಾದ ಚರ್ಮದ ಒರೆಯಲ್ಲಿ ಮುಚ್ಚಿಟ್ಟ ಖಡ್ಗ ಧಾರೆಯಂತೆ, ಮೆಂತಿ ಮಾತ್ರ ಸಾಧುಸ್ವಭಾವವನ್ನು ನಟಿಸುತ್ತ, ಅ೦ತರಂ ಗದಲ್ಲಿ ಅತಿಕೊರಕೃದಯೆಯಾದ ಆ ರಾಕ್ಷಸಿಯ, ಹೀಗೆ ಸ್ವತಂತ್ರಿಸಿ, ಷ್ಣ ಯರಿಬ್ಬರೂ, ತಮ್ಮ ಕಣ್ಣಾರೆ ಅದನ್ನು ನೋಡುತಿದ್ದಾಗಲೂ, ಆ ರಾಕ್ಷ ಸಿಯ ಮುಖಕಾಂತಿಗೆ ಮರುಳಾಗಿ, ಅವಳನ್ನು ಸಾಧುಯೆಂದೇ ತಿಳಿದು. ಬಾಯೆತ್ತದೆ ಸುಮ್ಮನೆ ನಿಂತಿದ್ದರು. ಕ್ರಸ್ಯಭಾವವುಳ್ಳ ರಾಕ್ಷಸಿಯು, ಆ ಶಿಶುವನ್ನು ತೊಡೆಯ ಮೇಲೆ ಮಲಗಿಸಿಕೊಂಡು, ಜೀರ್ಣವಾಗದುಬಾ ಗಿಯೂ, ಪ್ರಾಣಯಾರಕವಾಗಿಯೂ ಇರುವ ಕೂಸಿಷದಿಂದ ತುಂಬಿದ ತನ್ನ ಸ್ತನವನ್ನು ಆ ಶಿಶುವಿನ ಬಾಯಲ್ಲಿಟ್ಟು, ಅದಕ್ಕೆ ಸ್ತನ್ಯಪಾನಮಾಡಿಸ ತೊಡಗಿದಳು. ಭಗವಂತನಾದ ಶ್ರೀಕೃಷ್ಣನು ಮಕ್ಕಳ ಸ್ವಭಾವಕ್ಕೆ ತಕ್ಕಂತೆ, ಆಕೆಯ ಸ್ತನಗಳನ್ನು ತನ್ನ ಎರಡುಕೈಗಳಿಂದ ಹಿಡಿದು, ಸಂ