ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಶ್ರೀಮದ್ಭಾಗವತವು [ಅಧಾ ದರೂ, ಆ ಶ್ರೀಹರಿಯಲ್ಲಿ ಬದ್ಧವೈರವನ್ನಿಟ್ಟು, ಆ ಕೃಷ್ಣನನ್ನು ಕೊಲ್ಲಬೇ ಕೆಂಬ ಕೊರಬುದ್ಧಿಯಿಂದ, ಅವನಿಗೆ ಮೊಲೆಯೂಡಿಸುವುದಕ್ಕೆ ಬಂದಳಲ್ಲ ವೆ? ಇಷ್ಟು ಮಾತ್ರದಿಂದಲೇ ಅವಳ ಪ್ರಾರಬ್ಯಪಾಪಗಳೆಲ್ಲವೂ ನೀಗಿ ಮು ಕೈಯುಂಟಾಯಿತು ಇನ್ನು ಭಕ್ತಿಗಳಿಂದ ಆ ಪರಮಾತ್ಮನನ್ನು ಪಾಸ ನೆಮಾಡುತ್ತ, ಅವನಿಗೆ ಪ್ರಿಯವಾದ ಪತ್ರಷ್ಟಾಟಗಳನ್ನೇ ಅರ್ಪಿಸತಕ್ಕೆ ಭಕ್ತರಿಗೆ, ಯಾವ ಸದ್ದತಿಯುಂಟಾಗುವುದೆಂಬುದನ್ನು ನೀವೇ ಊಹಿಸಿನೋ ಡು: ಭಗವದ್ಭಕ್ತರಾದ ಯೋಗಿಗಳಿಗೆ ಧ್ಯಾನಗೋಚರಗಳಾಗಿಯೂ, ಯಾ ವಾಗಲೂ ಅವರ ಹೃದಯಲ್ಲಿ ನೆಲೆಗೊಂಡಿರತಕ್ಕವುಗಳಾಗಿಯೂ, ಲೋಕಪೂ ಜ್ಯರಾದ ಬ್ರಹ್ಮರುರಾಜ ದೇವತೆಗಳಿಗೂ ಪೂಜಾರ್ಹಗಳಾಗಿಯೂ ಇರುವ ತನ್ನ ಪಾದಾರವಿಂದಗಳಿಂದ ಶ್ರೀ ಕೃಷ್ಣನು, ಯಾವಳ ಎದೆಯನ್ನೋ ತ್ರಿ, ಕಣಗಾಲದವರೆಗೆ ಅವಳ ಸ್ತನ್ಯಪಾನವನ್ನೂ ಮಾಡುತಿದ್ದನೋ, ಅಂತ ವಳಿಗೆ ಸದ್ದತಿಯುಂಟಾಗುವುದೇ ನಶ್ವರವು ? ಪರಮಪಾಸಿಸಿಯಾದ ಈ ರಾಕಸಿಯೇ, ಆತನ ಕ್ಷಣಮಾತ್ರಸಂಬಂಧಬಂದ ಹೀಗೆ, ಆ ಲೋಕನಾಥನ ಸಾನ್ನಿಧ್ಯವನ್ನು ಹೊಂದಿರುವಗ, ಯಾವಾಗಲೂ ಆ ಮುದ್ದು ಕೃಷ್ಣನ ನ್ನು ತೊಡೆಯಮೇಲೆ ಮಲಗಿಸಿಕೊಂಡು, ಮೊಲೆಯೂಡಿಸುತ್ತಿರುವ ಯ ಶೋದೆ ಮೊದಲಾದ ಜನ್ಮಸಿಯರೂ, ಆ ಕೃಷ್ಣನಿಗಾಗಿ ದಿನದಿನವೂ ಸತ್ಯ ದ್ಯವಾದ ಹಾಲನ್ನು ಕರೆಯುತ್ತಿರುವ ಗೋವುಗಳೂ ಎಕ್ಕು ಭಾಗ್ಯ ಶಾಲಿಗಳೆಂಬುದನ್ನು ಕೇಳಬೇಕೆ ? ಕೈವಲ್ಯಾಟಸಕಲಪುರುಷಾರಪ್ರದ ನಾದ ಭಗವಂತನು, ಇತರರಿಂದ ತಾನು ಪಡೆದ ಉಪಕಾರಕ್ಕೆ ಯಾವ ಪ್ರ ತ್ಯುಪಕಾರವನ್ನು ಮಾಡುವನೆಂಬುದನ್ನು ಕೇಳಬೇಕೆ ? ಆ ಸಾಕ್ಷಾದ್ಭಗವಂತ ನನ್ನೇ ತಮ್ಮ ಮುದ್ದು ಮಗುನೆಂದು ಯಾವಾಗಲೂ ಪ್ರೇಮದಿಂದ ಲಾಲಿ ಸುತ್ತಿರುವ ಗೋಪಸ್ತ್ರೀಯರನ್ನು, ಆಜ್ಞಾನಜನ್ಯವಾದ ಸಂಸಾರವೆಂಬುದು ಇನ್ನೆಂದೆಂದಿಗೂ ಕಟ್ಟಿಡಲಾರದು. ಇತ್ತಲಾಗಿ ಗೋಪಾಲಕರೆಲ್ಲರೂ, ಪೂತ ನೆಯ ದಹನಕಾಲದಲ್ಲಿ ಚಿತೆಯಿಂದ ಹೊರಟ ಸುಗಂಧ ವಿಶಿಷ್ಟವಾದ ಹೊ ಗೆಯನ್ನು ನೋಡಿ, ಇದೇನಾಶ್ಚದ್ಯವೆಂದು ವಿಷಯವನ್ನೇ ಮಾತಾ ಡಿಕೊಳ್ಳುತ್ತ, ಊರಿಗೆ ಬಂದು ಸೇರಿದರು. ಅತ್ತಲಾಗಿ ಮಧುರೆಗೆ ಹೋಗಿ