ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩ ಶ್ರೀಮದ್ಭಾಗವತವು [ಅಧ್ಯಾ. ೭. ರವಾಗಿ ತಿಳಿಸಬೇಕೆಂದು ಪ್ರಾರ್ಥಿಸುವೆನು, ಆ ಭಗವಂತನು ಭೂಲೋಕ ದಲ್ಲಿ ಹುಟ್ಟಿ, ಮನುಷ್ಯ ಸ್ವಭಾವವನ್ನನುಕರಿಸುವಾಗ, ನಡೆಸಿದ ಅದ್ಭುತ ಕಾರಗಳೆಲ್ಲವನ್ನೂ ಕೇಳಬೇಕೆಂಬ ಕುತೂಹಲವು ನನ್ನನ್ನು ಬಹಳವಾಗಿ ಉತ್ಸಾಹಗೊಳಿಸುತ್ತಿರುವುದು. ಆ ಚರಿತ್ರಗಳಲ್ಲಿ, ಯಾವಯಾವುದನ್ನು ನೀನು ನನಗೆ ತಿಳಿಸಬಹುದೋ ಅವೆಲ್ಲವನ್ನೂ ತಿಳಿಸಬೇಕು” ಎಂದನು. ಅದ ಆ ಕುಕಮುನಿಯು 14 ಓ ರಾಜಾ, ಕೇಳು : ಶ್ರೀಕೃಷ್ಣನಿಗೆ ಕ್ರಮಕ್ರಮ ವಾಗಿ ದಿನಗಳು ಕಳೆದು, ಅಂಬೆಗಾಲಿಂದ ನಡೆಯುವ ಶಕ್ತಿಯುಂಟಾಯಿತು. ಸಣ್ಣ ಮಕ್ಕಳು ಮೊದಲು ಹೊಸ್ತಿಲನ್ನು ದಾಟುವಾಗ, ಅದಕ್ಕಾಗಿ ಮನೆ ಯಲ್ಲಿ ಹೆಂಗಸರು ಹಬ್ಬವನ್ನು ಮಾಡುವ ಪದ್ಧತಿಯುಂಟು. ಅದರಂತೆಯೇ ಶ್ರೀಕೃಷ್ಣನು ಮೊದಲು ಹೊಸ್ತಿಲನ್ನು ದಾಟಿ ಹೊರಗೆ ತಿರುಗಾಡುವ ಪ್ರಯತ್ನದಲ್ಲಿರುವುದನ್ನು ನೋಡಿ, ಯಶೋದೆಯು, ಆ ಮಹೋತ್ಸವವನ್ನು ಕೊಂಡಾಡುವುದಕ್ಕಾಗಿ, ಒಮ್ಮೆ ಆ ತಿರುವಿನ ಜನ್ಮನಕ್ಷತ್ರ ರೋಹೀಗೇನ ಕ್ಷತ್ರ ದೊಡಗೂಡಿದ ಶುಭದಿನದಲ್ಲಿ, ಸುಮಂಗಲಿಯರನ್ನು ಕರೆದು, * ತವಾದ್ಯಗಳೊಡನೆ ಆ ಕೃಷ್ಣನಿಗೆ ಮಗಳ ಸ್ಥಾನವನ್ನು ಆಡಿಸಿದಳು. ಅದೇ ಕಾಹ್ಮಣರನ್ನು ಕರೆಸಿ, ಅವರನ್ನು ಚಿನ್ನ ಬಾನ, ವಸ್ತ್ರದನ ಗೋವಿನ ನಾ ದಿಗಳಿಂದಲೂ, ಪ್ರಚಂಡನಾಬಗಳಿಂದಲೂ, ಅವರವರು ಕೋರಿದ ಇತ ವಸ್ತುಗಳಿಂದಲ, “ ಸಂತೋಷಪಡಿಸಿ, ಅವರಿಂದ ಸ್ಪಸಿವಾಚನವನ್ನು ಮಾಡಿಸಿದಳು. ಈ ಆತ ವವವೂ ನಡೆದಮೇಲೆ, ಆ ಕಿವಿಗೆ ಬರುವ ಖಾಗೆ ತೋರಲು,ಹಾಸಿಗೆಯಮೇಲೆ ಮಲಗಿಸಿಟ್ಟು,ತನ ಇತರಕಾರಿಗಳನ್ನು ನೆಡುವುದಾಗಿ ಹೋದಳು. ಈ ಮಹೋತ್ಸವಕಾಲದಲ್ಲಿ ಮನೆಗೆ ಬಂ ದ ಮುತ್ತೈದೆಯರನ್ನಾ ದುಸುವ ಕಾಲ್ಯದಲ್ಲಿ ಆ ಯಶೋದೆಗೆ, ಒಹಳ ಹೊತ್ತಿನವರೆಗೆ ಮಗುವಿನ ಸ್ಮರಣೆಯೇ ಬಾರದೆ ಹೋಯಿತು. ಅವ ಳು ಆ ಉತ್ಸವಸಂಭ್ರಮದಲ್ಲಿಯೇ ಇರುತ್ತಿದ್ದಳು. ಇತ್ತಲಾಗಿ ಹಾಸಿಗೆ ಯಲ್ಲಿ ಮಲಗಿದ್ದ ಮಗುವು ಹಸಿವಿನಿಂದ, ಹಾಲು ಕುಡಿಯುವುದಕ್ಕಾಗಿ ಅಳತೊಡಗಿತು. ಈ ಧ್ವನಿಯೂ ಅವಳ ಕಿವಿಗೆ ಬೀಳಲಿಲ್ಲ. ಶಿಶುವು ಕ್ರಮಕ್ಕೆ ಮವಾಗಿ ತನ್ನ ರೋದನವನ್ನು ಬಲಪಡಿಸಿ, ಕೈಕಾಲುಗಳನ್ನೊದರುವುದ