ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಅಧ್ಯಾ. ೭.] ದಶಮಸ್ಕಂಧವು. ಕ್ರಾರಂಭಿಸಿತು. ಈ ಸಮಯಕ್ಕೆ ಸರಿಯಾಗಿ, ಕಂಸನಿಂದ ಪ್ರೇರಿತನಾದ ಒಬ್ಬಾನೊಬ್ಬ ರಾಕ್ಷಸನು, ಬಂಡಿಯ ಆಕಾರದಲ್ಲಿ ಆಕಾಶದಿಂದ ಕೆಳಕ್ಕಿ ಳಿದು, ತನ್ನ ಚಕ್ರಗಳಿಂದ ಆ ಶಿಶುವನ್ನು ಅರೆದು ಕೊಲ್ಲಬೇಕೆಂಬ ಉದ್ದೇಶ ದಿಂದ ಮುಂದೆ ಬಂದನು. ಮಲ ದ ಕೃಷ್ಣನು ತನ್ನ ಕೈ ಕಾಲುಗಳನ್ನೂ ದರುತಿದ್ದಾಗ, ಎಳಚಿಗುರಿನಂತ ಕೋಮಲವಾದ ಅವನ ಪಾದವು ತರು ಅದೊಡನೆ, ಆ ಬಂಡಿಯು ಭಿನ್ನ ಭಿನ್ನವಾಗಿ ಮುರಿದು ಚೂರ್ಣವಾಯಿತು. ಆ ಬಂಡಿಯಲ್ಲಿ ನಾನಾವಿಧರಸಗಳಿಂದ ತುಂಬಿದ, ಕಂಚು, ಹಿತ್ತಾಳೆ,ಮೊದ ಲಾದ ಲೋಹಪಾತ್ರಗಳೆಲ್ಲವೂ ಒಡೆದುಬಿದುವು. ಆ ಬಂಡಿಯ ಅಚ್ಚು, ನೊಗ, ಮೂತಿ, ಚಕ್ರ, ಇವೆಲ್ಲವೂ ತುಂಡುತುಂಡಾಗಿ ಕಳಚಿಬಿದ್ದುವು. ಆ ಬಂಡಿಯು ಮುರಿದು ಬಿಳುವವyವಾದ ಮಹಾನ್ವಸಿಯು ಗೋಕುಲ ವೆಲ್ಲವನ್ನೂ ವ್ಯಾಪಿಸಿತು. ಆಗ ಯಶೋದೆ ಮೊದಲಾದವರಿಗೆ ಮಗು ವಿನ ನೆನಪುಂಟಾಯಿತು. ಆ ಉತ್ಸವಕ್ಕಾಗಿ ಬಂದಿದ್ದ ಗೋಪಾಂಗನೆ ಯರೂ, ಯಶೋದೆ ಮುಂತಾದವರೂ, ಭಯಸಂಭ್ರಮಗಳyದ ಕೃಷ್ಟ ನು ಮಲಗಿದ್ದಕಡೆಗೆ ಬಂದು ನೋಡಿದರು. ಅಲ್ಲಿ ಮಗುವಿನ ಕಾಲಿನ ಕೆಳಗೆ ಒಂದು ದೊಡ್ಡ ಬಂಡಿಯ ಚೂರುಚೂರಾಗಿ ಮುರಿದುಬಿರಲು, 14 ಆ ಬ್ಯಾ! ಈ ಬಂಡಿಯು ಇಲ್ಲಿಗೆ ಹೇಗೆ ಬಂತು! ಇದು ಹೇಗೆ ಮುರಿಯಿತು” ಎಂದು ಎಲ್ಲರೂ ಆಶ್ಚರದಿಂದ ಬೆರಗಾಗಿದ್ದರು. ಮಗುವಿಗೆ ಆನರ್ಧವೇ ನಾದರೂ ಆಗಿರುವುದೋ ಎಂಬ ಭಯದಿಂದಲೂ, ದುಃಖದಿಂದಲೂ,ನಿ ಜಸ್ಥಿತಿಯನ್ನು ತಿಳಿಯದೆ, ಅವರು ಕಳವಳಿಸುತ್ತಿದ್ದಾಗ,ಸಮೀಪದಲ್ಲಿದ್ದ ಕೆಲವು ಬಾಲಕರು(ಆವಾಈ ಕೃಷ್ಣನು ಅಳುತ್ತ ಕೈಕಾಲುಗಳನ್ನೋ ದರತಿದ್ಧನು. ಅವನ ಕಾಲಿಗೆ ತಗುಲಿ ಈ ಬಂಡಿಯ ಮುಬರಬೇಕು. ಇದರಲ್ಲಿ ಸಂದೇಹ ವಿಲ್ಲ” ಎಂದರು. ಬಾಲರೂಪಿಯಾದ ಭಗವಂತನ ಅಪ್ರಮೇಯಪರಾಕ್ರ ಮವನ್ನು ತಿಳಿಯದ, ಆ ಗೋಪಸಿಯರಿಗೆ ಅವರ ಮಾತಿನಲ್ಲಿ ನಂಬಿಕೆ ಹುಟ್ಟಲಿಲ್ಲ! ಆ ಬಾಲಕರು ಹೇಳಿದುದು ಕೇಲಹುಡಗುತನದ ಮಾತೆಂದು ತಿಳಿದು ಅಕ್ಷಮಾಡದಿದ್ದರು. ಕೊನೆಗೆ ಯಶೋದೆಯು, ಹಸಿವಿನಿಂದ ಬಿಕ್ಕಿಬಿಕ್ಕಿ ಆಳುತ್ತಿದ್ದ ಆ ಶಿಶುವನ್ನು ಕೈಗೆತ್ತಿಕೊಂಡು, ಯಾವುದೋ 112 B