ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀಮದ್ಭಾಗವತವು [ಅಧ್ಯಾ, ೭, ರು ಆ ಧೂಳಿಯು ತನ್ನು ವಷ್ಟರೊಳಗಾಗಿ, ತೃಣಾವರ್ತನು, ಶ್ರೀ ಕೃಷ್ಣ ನನ್ನು ಮಹಾಪ್ರಯತ್ನ ದಿಂದ ಅಂತರಿಕ್ಷದಲ್ಲಿ ಬಹಳದೂರಕ್ಕೆ ಎತ್ತಿಕೊಂ ಡು ಹೋಗಿದ್ಧನು. ಕೊನೆಕೊನೆಗೆ ಅವನಿಗೆ ಆ ಕೃಷ್ಣನ ಭಾರವನ್ನು ತಡೆ ಯಲು ಸಾಧ್ಯವಿಲ್ಲದೆ, ಅವನ ವೇಗವು ತಗ್ಗಿತು, ಮುಂದೆ ಹೋಗುವುದ ಕೈ ಶಕ್ತಿಯಿಲ್ಲದೆ, ಅಸ್ಲಿಯೇ ತೂಗಾಡುತ್ತಿದ್ದನು. ತನಗಿಂತ ಆ ಶಿಶುವು ಭಾರವಾಗಿದ್ದುದನ್ನು ನೋಡಿ ಆನಂದ ತನ್ನ ತಾನು. ( ಆಹಾ ! ಇ ದು ಸಾಮಾನ್ಯತಿ ಕುವಲ್ಲ! ಇದೊಂದು ದೊಡ್ಡ ಕಲ್ಲುಗುಂಡಾಗಿರಬೇಕು ” ಎಂದು ತಿಳಿದು, ಕಳಗೆ ಬಿಸಾಡುವುದಕ್ಕೆ ಯತ್ನಿಸಿದನು. ಇಷ್ಟರಲ್ಲಿ ಕೃಷ್ಣನು ಆ ರಾಕ್ಷಸನ ಕಂಠಖ್ಯಾನವನ್ನು ದೃಢವಾಗಿ ಹಿಡಿದುಬಿಟ್ಟುದರಿಂದ, ಆ ರಾಕ್ಷ ಸಸಿಗೆ ತಾನು ತಿಶುವಿನ ಕೈಯಿಂದ ಬಿಡಿಸಿಕೊಳ್ಳುವುದೇ ಅಸಾಧ್ಯವಾಯಿತು. ಕೊನೆಗೆ ಆ ರಾಕ್ಷಸನಿಗೆ ಉಸಿರಾಡುವುದಕ್ಕೂ ಅವಕಾಶವಿಲ್ಲದಂತಾಗಿ, ಅವನ ಅಂಗ ವ್ಯಾಪಾರವೆಲ್ಲವೂ ಅಡಗಿಹೋಯಿತು ಕಣ್ಣಾಲೆಗಳು ಹೊರಕ್ಕೆ ಕಿತ್ತು ಬಂದುವು. ಕೂಗಿಕೊಳ್ಳುವುದಕ್ಕೂ ಅವಕಾಶವಿಲ್ಲದೆ, ಕಂಠಧ್ವನಿಯು ಅಡಗಿಹೋಯಿತು. ಗತಪ್ಪಾಣನಾಗಿ ಆ ಶಿಶುವಿನೊಡನೆ ಕೆಳಗೆಬಿದ್ದನು.ಅವ ನು ಅಂತರಿಕ್ಷದಿಂದ ಗೋಕುಲದಲ್ಲಿ ಬಿದ್ದಾಗ, ಒಂದಾನೊಂದು ಕಲ್ಲುಬಂಡೆಗೆ ತಗ,ಲಿ, ಅವನ ಅವಯವಗಳೆಲ್ಲವೂ ಭಿನ್ನ ಭಿನ್ನ ವಾದುವು. ರುದ್ರನಿಂದ ಹತನಾದ ತ್ರಿವರನಂತೆ, ಭಯಂಕಸ್ವರೂಪದಿಂದ ಕೆಳಗೆ ಬಿದ್ದನು. ಆ ರಾ ಕ್ಷಸಾಕೃತಿಯನ್ನು ನೋಡಿದಾಗ, ಅಲ್ಲಿ ಕೃಷ್ಣನನ್ನು ಕಾಣದೆ ಅಳುತಿ ಗೋ ಪಸಿಯರೆಲ್ಲರಿಗೂ ಅತ್ಯಾಕ್ಷರವೂ, ಭಯವೂ ಉಂಟಾಯಿತು. ಒಡನೆ ಯೇ ಕೆಲವು ಸ್ತ್ರೀಯರು, ದೈನಂದ ಮುಂದೆ ಹೋಗಿ, ರಾಕ್ಷಸರ ಎದೆಯ ಮೇಲೆ ನಲಿವಾಡುತಿದ್ದ ಕಷ್ಟನನ್ನು ಎತ್ತಿಕೊಂಡು ಬಂದು, ತಾಯಿ ಯ ವಶಕ್ಕೆ ಒಪ್ಪಿಸಿದರು.ಮೃತ್ಯುವಿನ ಬಾಯಿಂದ ತಪ್ಪಿ ಬಂದಂತೆ, ರಾಕ್ಷಸನ ಕೈಯಿಂದ ಬದುಕಿಬಂದ ಆ ಶಿಶುವನ್ನು ಕಂಡು, ನಂದಾದಿಗೂ ಪಾಲಕರೆಲ್ಲರೂ ಪರಮಾನಂದಭರಿತರಾಗಿ ತಮ್ಮೊಳಗೆ ತಾವು ಹೀಗೆಂದು ಹೇಳುವು 14 ಆಹಾ ! ಈ ಘೋರರಾಕ್ಷಸನ ಕೈಗೆ ಸಿಕ್ಕಿಯೂ, ಈ ಶಿಶುವು ಬದುಕಿ ಬಂದುದು ಪರಿಮಾ ಕ್ಷರವು! ಅಥವಾ ಲೋಕದಲ್ಲಿ ಕುಳಿತುಕರು