ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮೨ ೧೬೮೨ ಶ್ರೀಮದ್ಭಾಗವತವು [ಅಧ್ಯಾ, ಆ. ಪರತಗಳು' ಆ ಪರತದಿಂದ ಹುಟ್ಟಿದ ಮಹಾನದಿಗಳು! ಸಮಸ್ತಚರಾ ಚರಗಳು! ಇವೆಲ್ಲವೂ ಏಕಕಾಲದಲ್ಲಿ ಅವಳ ಕಣ್ಣಿಗೆ ಗೋಚರಿಸಿದುವು. ಹೀಗೆ ಯಶೋದೆಯು, ಆ ಸಣ್ಣ ಮಗುವಿನ ಬಾಯಲ್ಲಿ ಭೂಮ್ಯಾಕಾಶಗಳೂ ಡಗೂಡಿದ ಸಮಸ್ತಪ್ರಪಂಚವನ್ನೂ ಕಂಡೊಡನೆ, ಅವಳ ಮೈಯೆಲ್ಲವೂ ನಡುಗಲಾರಂಭಿಸಿದವು. ಅವಳ ಕಣ್ಣುಗಳು ಮುಚ್ಚಿ ಹೋದುವು! ಆಶ್ಚರ ದಿಂದಲೂ, ಭಯದಿಂದಲೂ ಕ್ಷಣಕಾಲದವರೆಗೆ ಸ್ವಳಾಗಿದ್ದಳು. ಇದು ಏಳನೆಯ ಅಧ್ಯಾಯವು. ( ಯಾದವಪುರೋಹಿತನಾದ ಗರ್ರನು, ರಹಸ್ಯವಾಗಿ) ...... * ಗಮಕೃಷ್ಣರಿಗೆ ನಾಮಕರಣ ಮಾಡಿದುದು. ಓ ಪಕ್ಷಿವಾಜಾ' ಹೀಗೆ ಕೃಷ್ಣನು ತನ್ನ ಕೈಶವದಲ್ಲಿಯೇ ಅದ್ಭು ತಮಹಿಮೆಗಳನ್ನು ತೋರಿಸುತ್ತಿದ್ಮನು, ಕೆಲವು ಜನಗಳ ಮೇಲೆ ವಸುದೇವನು, ತನ್ನ ಮಕ್ಕಳಿಗೆ ತನ್ನ ವರ್ಣೆಶ್ರಮೋಟಿ ತವಾಗಿಯೇ ನಾಮಕರಣಾದಿಗ ಳನ್ನು ನಡೆಸಬೇಕೆಂಬ ಉದ್ದೇಶದಿಂದ, ತಮ್ಮ ಕುಲಫರೋಹಿತನಾದ ಗರ್ಗ ನೆಂಬ ಬ್ರಾಹ್ಮಣನನ್ನು ರಹಸ್ಯವಾಗಿ ನಂದಗೋಕುಲಕ್ಕೆ ಕಳುಹಿಸಿಕೊKನು. ಮಹಾತಪಸ್ವಿಯಾದ ಈ ಗರ್ಗನನ್ನು ಕಂಡೊಡನೆ, ನಂದನು ಪರಮಸಂ ತೋಷಯಿಂದ ಪ್ರತ್ಯುತ್ಸಾನಮಾಡಿ, ಸಾಕ್ಷಾಷ್ಟುವೆಂಬ ಭಾವದಿಂದ 'ಆವ ನಿಗೆ ಕೈ ಮುಗಿದು, ಸಾಷ್ಟಾಂಗಪ್ರಣ ಮಮಾಡಿ, ಉಚಿತಾಸನವನ್ನು ಕೊ “ಕುಳ್ಳಿರಿಸಿ ಸುಖ• ಸಿವನಾದ ಆ ಬಾನನನ್ನು ಪ್ರಿಯವಾಕ್ಯದಿಂದ ಮ ಸುತ್ತ - ಬ್ರಾಹ್ಮಣೋತ್ತಮಾ ! ಬ್ರಹಾನುಭವವೆಂಬ ಆನಂ ದದಿಂದ ಪೂರ್ಣನಾದ ನಿನ್ನನ್ನು ಇಲ್ಲಿ ನಾವು ಯಾವವಿಧದಿಂದ ಸಂತೋಷ ಪಡಿಸಬಲ್ಲೆವು? ನಮ್ಮಿಂದ ನಿನಗೆ ಯಾವಪ್ರಯೋಜನವೂ ಇಲ್ಲದಿದ್ದರೂ, ನಿ ಮ್ಮಂತಹ ಮಹಾತ್ಮರು, ನಿಮ್ಮ ಆಶ್ರಮಗಳನ್ನು ಬಿಟ್ಟು ಹೀಗೆ ಬೇರೆಬೇರೆ ಕಡೆಗೆಸಂಚರಿಸುವುದು, ವಿಷಯಾಸಕ್ತಿಯಿಂದ ಕದಲಿದ ಮನಸ್ಸುಳ್ಳ ನಮ್ಮ ತವರ ಅನುಗ್ರಹಕ್ಕಾಗಿಯೇ ಹೊರತು ಬೇರೆಯಲ್ಲ. ಮಹಾತ್ಮಾ: ಇಂದ್ರಿ ಯಗಳಿಗೆ ಗೋಚರವಲ್ಲದ ವಿಷಯವನ್ನೂ ತಿಳಿಯುವುದಕ್ಕೆ ಸಾಧನವಾದ