ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಅಧ್ಯಾ. ೮.] ದಶಮಸ್ಕಂಧನು (“ಓ ನಂದಾ ! ಈ ಕುಮಾರನು ತನ್ನ ಸುಗುಣಗಳಿಂದ ಲೋಕವೆಲ್ಲವನ್ನೂ ರಂಜಿಸತಕ್ಕವನು. ಆದುದರಿಂದ ಇವನಿಗೆ ರಾಮನೆಂಬ ಹೆಸರನ್ನಿಡುವೆನು. ಮತ್ತು ಇವನು ಬಹಳಬಲ ಹೃನಾದುದರಿಂದ ಬಲನೆಂದೂ, ಯದುಕು ಲದವರಲ್ಲಿ ಪರಸ್ಪ-ಛೇದಬುಗೆ ಅವಕಾಶಕೊಡದೆ ಐಕಮತ್ಯವನ್ನು ಹು ಟೈಸತಕ್ಕವನಾದುದರಿಂದ, ಸಂಕರ್ಷಣನೆಂದೂ ಲೋಕದಲ್ಲಿ ಪ್ರಸಿದ್ಧನಾ ಗವನು ನಿನ್ನ ಎರಡನೆಯ ಕುಮಾರನು, ಇದರ ಹಿಂದಿನ ಮರುಜನ್ಮಗ ಇಲ್ಲಿ ಕ್ರಮವಾಗಿ ಬಿಳುಪ್ಪ, ಕೆಂಪು, ಹಳದಿ, ಈ ಮೂಗುಬಣ್ಣಗಳುಳ್ಳವನಾ ಗಿದ್ದು, ಈಗ ಕೃಷ್ಣವರ್ಣದಿಂದ ಶುರುವನು ಮತ್ತು ಈ ಕುಮಾರ ನ ಈಗ ನಿನ್ನ ಮಗನಾಗಿ ಬೆಳೆಯುತ್ತಿದ್ದರೂ, ಇವನು ಹಿಂದೊಮ್ಮೆ ವ ಸುದೇವಪುತ್ರನಾಗಿದ್ದವನು. ಆದುದರಿಂದ ಇವನಿಗೆ ಕೃಷ್ಣನೆಂದೂ, ವಾ ಸುರಿವನೆಂದೂ ಹೆಸರಿಡುವೆವು. ಮತ್ತು ಓ ನಂದಾ ! ಈ ನಿನ್ನ ಮಗನಿಗೆ ಆಯಾ ಗುಣಗಳಿಗೂ ಕಾರಗಳಿಗೂ ತಕ್ಕಂತೆ ಬೇರೆಬೇರೆ ಹಲವು ನ” ಮ ರೂಪಗಳುಂಟು ಅವೆಲ್ಲವೂ ನಮಗೆ ತಿಳಿಯುವುದೇ ಹೊರತು ನಿಮ್ಮಂತ ವರಿಗೆ ತಿಳಿಯಲಾರದು. ಒಂದೊಂದು ಸಮಯದಲ್ಲಿ ನಾವೂ ಅದನ್ನು ತಿ ಳೆಯಲಾರೆವು ನಂದಾ! ಈ ಕಿರಿಯ ಮಗಸಿನಿಂದ ನಿನಗೆ ಎಣೆಯಿಲ್ಲದ ಶ್ರೇಯಸ್ಸು ಕೈಗೂಡುವುದು. ಈತನು ಗೋಕುಲಕ್ಕೂ, ಕೋಪಕುಲಕ್ಕೂ ಆನಂದಕರನಾಗುವನು. ಇವನಿಂದ ನಿಮ್ಮ ಸಮಸ್ತದುಃಖಗಳೂ ಸಿಗು ವುವು. ಹಿಂದೊಮ್ಮೆ ದೇಶವು ಅರಾಜಕವಾಗಿದ್ದಾಗ, ಚೋರರು ತಲೆಯೆ ಆ ಸಾಧುಗಳನ್ನು ಹಿಂಸಿಸುತ್ತಿರಲು, ಈ ನಿನ್ನ ಕುಮಾರನೇ ಇದರ ಹಿಂದಿ ನ ಜನ್ಮದಲ್ಲಿ ಅವರಿಗೆ ಸಹಾಯಕನಾಗಿ ಆ ದುಷರನ್ನಡಗಿಸಿದನು. ಇವನು ಈಗ ಹುಟ್ಟಿರುವುದೂ ದುಷ್ಕಸಿಗ್ರಹಶಿಷ್ಟಪರಿಪಾಲನಗಳಿಗಾಗಿಯೇ ಎಂ ದು ತಿಳಿ! ಓ ಮಹಾಭಾಗಾ'ಯಾರು ಇವನಲ್ಲಿ ಪ್ರೀತಿಯನ್ನು ಮಾಡುವರೋ ಅಂತವರನ್ನು ಯಾವ ಶತ್ರುಗಳೂ ಸಿಗ್ರಹಿಸಲಾರದು : ವಿಷ್ಟು ಪಕ್ಷದವರಿಗೆ ಅಸುರಭಯವಿಲ್ಲದಂತೆ ಅವರು ನಿರ್ಭಯರಾಗಿರುವರು. ಆದುದರಿಂದ ಆ ಕ್ಷ, ಕೀರ್ತಿ, ಪ್ರಭಾವ, ಮೊದಲಾದುವುಗಳಲ್ಲಿಯೂ, ಇತರಗುಣ ಗಳಲ್ಲಿ ಯೂ ಈ ಕುಮಾರನು ಸಾಕ್ಷಾತ್ಯುದೇವನಿಗೆ ಸಮಾನನೆಂದು ತಿಳಿ !”