ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ. ಓನ್ನ ಮಂಪರಮಾತ್ಮನೆ. ದ್ವಿತೀಯೋಧ್ಯಾಯಃ, ಕ್ಯಾ ಪರಾಶರ! ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ! ಸದೈಕರೂಪ ರೂಪಾಯ ವಿಷ್ಯವೇ ಸರ್ವಜಿಷ್ಯವೇ!iollನಮೋ ಹಿರಣ್ಯಗರ್ಭಾಯ ಹರಯೇ ಶಂಕರಾಯಚ | ವಾಸುದೇವಾಯ ಎರಡನೆಯ ಅಧ್ಯಾಯವು www ಪರಾಶರನು ಹೇಳುತ್ತಾನೆ'-ಎಲ್‌ ಮೈತ್ರೇಯನೇ ನೀನು ತಿಳು ಹಬೇಕೆಂದು ಪ್ರಶ್ನೆ ಮಾಡಿದ ಭಗವಂತನ ಸ್ವರೂಪವನ್ನು ಹೇಳುವೆನು. ಸಾವಧಾನದಿಂದ ಕೇಳು ಆ ಭಗವಂತನು ಸೃಷ್ಟಿ, ಸ್ಥಿತಿ, ಲಯಗಳಿಗೆ ಆಶ್ರಯನಾಗಿರುವನು. ಆದರೂ ನಿರ್ವಿಕಾರ ಚೈತನ್ಯ ಸ್ವರೂಪನು. ರಾಗ ದ್ವೇಷಾದಿಗಳಿಗೆ ಒಳಗಾಗದಿರುವವನು, ಅಹಂಕಾರ ಮಮಕಾರ ಗಳಲ್ಲದವನು, ಸುಖ ದುಃಖಗಳಿಗೆ ಒಳಗಾಗದಿರುವವನು. ಯಾವಾಗಲೂ ಶುದ್ಧ ಸ್ವಭಾವದಿಂದಿರುವನು ನಿತ್ಯನೂ, ಮತ್ತೊಬ್ಬರ ಅಧಿಕಾರಕ್ಕೆ ಒಳಗಾಗದವನೂ, ಸರನಿಯಾಮಕನೂ ಆದುದರಿಂದ ಆತನನ್ನೇ ಪರ ಮಾತ್ಮನೆಂದು ಕರೆಯುವರು. ಪರಿಣಾಮು (ಬದಲಾವಣಿ) ರಹಿತನಾ ದುದರಿಂದ ಏಕರೂಪನೆನಿಸಿ ಕೊಳ್ಳುವನು ಎಲ್ಲೆಲ್ಲಿಯೂ ತಾನೇ ನೆಲ ಸಿರುವ ಕಾರಣ ಅಚಿಂತ್ಯ ಮಹಿಮೆಯುಳ್ಳವನು, ಎಲ್ಲವೂ ಆತನ ಅಧಿಕಾ ರಕ್ಕೆ ಒಳಪಟ್ಟಿರುವುದರಿಂದ ಆತನಿಗಿಂತಲೂ ಶ್ರೇಷ್ಟವಾದ ಮತ್ತೊಂ ದು ವಸ್ತುವು ಇಲ್ಲ foll ಸರವ್ಯಾಪಕ ನೆನಿಸಿರುವ ಕಾರಣ ಬ್ರಹ್ಮ, ವಿಷ್ಣು, ಶಂಕರರೆಂಬ ತ್ರಿಮೂರ್ತಿ ಸ್ವರೂಪಗಳನ್ನು ಧರಿಸಿ, ಸೃ, ಸ್ಥಿತಿ, ಲಯಗಳೆಂಬ ಕಾಕ್ಯಗಳನ್ನು ನೆರವೇರಿಸುವವನೂ ಆತನೇ, ಭಕ್ತರ