ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಅಧ್ಯಾಯ ೧೫]

ವಿಷ್ಣು ಪುರಾಣ

ಡೋತ್ಪತ್ತಿಗೆ ಹೇತುಭೂತಗಳೆನಿಸಿದ ಮಹಾಭೂತಗಳಿಗೂ, ಇಂತಹ ಮಹಾಭೂತೋತ್ಪತ್ತಿಗೆ ಕಾರಣ ಭೂತಗಳಾದ ಸೂಕ್ಷಭೂತಗಳಿಗೂ,ತತ್ಕಾರಣವೆನಿಸಿದ ಅಹಂಕಾರಕ್ಕೂ, ಇಂತಹ ಆಹಂಕಾರ ಕಾರಣವೆನಿಸಿ ದ ಮಹತ್ತತ್ವಕ್ಕೂ ಮಹತ್ಕಾರಣಭೂತವೆನೆಸಿದ ಮೂಲಪ್ರಕೃತಿ ಗೂ ಕೂಡ ಆ ಪರಮಾತ್ಮನೊಬ್ಬನೇ ಮೂಲಕಾರಣನಲ್ಲದೆ ಆತನಿಗೆ ಮಾ ಯಾವಕಾರಣವೂ ಇಲ್ಲವು, (ಆತನುಬೇರೊಂದು ಕಾರಣದಿಂದಜನಿಸಿ ದವನಲ್ಲ. ತಾನಾಗಿಯೇ ಮೆರೆಯುತ್ತಿರುವನೆಂದು ಭಾವವು) ಈ ಹಿಂದೆ ಹೇಳಿದಂತೆ ಎಲ್ಲಾ ಕಾರಣಗಳಿಗೂ ಆತನೇ ಎಂತುಮೂಲಕಾರಣನಾಗಿರು ವನೋ ಅಂತಯೇ ಕಾರೈಗಳನಿಸಿದ ಪ್ರಕೃತಿಕಾರರೂಪವಾದ ಮಹತ್ವ ತಮೊದಲ್ಗೊಂಡು ಚರಮ ಕಾರ್ ಪರಂತವೆನಿಸಿದ, ಕಾರ್ ಮಾಲಾ ರೂಪದಿಂದಲೂ ಕೂಡ ಆತನೇ ಈ ಚರಾಚರಗಳನ್ನೂ ಆವರಿಸಿರುವನು. ಅದೆ ತಂದರೆ; ಮಹತ್ರತವು ಪ್ರಕೃತಿಯಿಂದುಂಟಾಗುವಕಾರಣ ಅಂತಹ ಮಹತ್ವವು ಪ್ರಕೃತಿಕಾರೈವೆನಿಸುವುದು, ಅಹಂಕಾರವು ಮಹತ್ವಕಾ ಗ್ಯವಾಗಿರುವುದು.ಸೂಕ್ಕ ಭೂತಗಳು(ತನ್ಮಾತ್ರೆಗಳು) ಅಹಂಕಾರಕಾರ್ ಗಳಾಗಿರುವವು. ಮಹಾಭೂತಗಳು, ಈ ಸೂಕ್ಷ್ಮ ಭೂತಕಾರೈಗಳು ಮಹಾಭೂತ ಸಮುದಾಯದಿಂದುಂಟಾಗುವ ಬ್ರಹ್ಮಾಂಡವು ಮಹಾಭೂತ ಕಾರವೆನಿಸುವುದು.ಆ ಬ್ರಹ್ಮಾಂಡದಿಂದುಟಾಗುವ ಬ್ರಹ್ಮ (ಚತುರುಖ) ಮೊದಲಾದವರು ಬ್ರಹ್ಮಾಂಡಕಾರರೆನಿಸುವರು. ತರುವಾಯ ಈ ಜಗತ್ತೆ ಲ್ಲವೂ ಚತುರುಖನಕಾರವಾಗಿರುವುದು, ಇಂತಹ ಪ್ರಪಂಚವೆಲ್ಲವೂ ಸ ರವ್ಯಾಸಕನೆನಿಸಿದ ಆಪರಮಾತ್ಮನಿಗೆ ಆವಾಸಭೂತವಾಗಿರುವುದರಿಂದ ಆ ತನೇ ಎಲ್ಲಾಕಾರರೂಪಳಿಂದಲೂ ಇರುವನು. ಇಂತು ಕಾರಣ ರೂಪ ನೂ, ಕಾಠ್ಯರೂಪನೂ ಆಗಿರುವವನು, ಆ ಪರಮಾತ್ಮನೊಬ್ಬನಲ್ಲದೆ ಆತನಿ ಗಿಂತಲೂ ಬೇರೆ ಕಾರಣವೂ ಕಾರವೂ ಕೂಡ ಇಲ್ಲವು, (ಇಂತು # ಕ್ರಿಯೆಯಲ್ಲಿ ಆ ಪರಮಾತ್ಮನು ಉಪಾದಾನಕಾರಣಭೂತನೆಂದು ಹೇಳಿದುದರಿಂದ ಆತನು ಸರ್ವಾತ್ಮಕನೆಂದು ಹೇಳಿದಂತಾಯಿತು. ಇನ್ನು ಮುಂದೆ ಮಲ್ಲನಕ್ರಿಯೆ) (ಸ್ಥತಿಕಾರ) ಯಲ್ಲಿ ಪರಿಪಾಲಿಸುವವನೂ, ಪು ಲನೆಯನ್ನು ಹೊಂದತಕ್ಕವನೂ ಕೂಡ ಆ ಪರಮಾತ್ಮನೇ ಎಂಬದಾಗಿ