ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಳಿಳಿ ಏನಂದ [ಅಂಶ ಯಥಾತ್ಮನಿ ಯಥಾವತೈಪರಂ ವತಗುಣಾನ್ವಿತಃ ॥೧೫೫! ಧರ್ಮ ಸತ್ಯಶಚಾದಿ ಗುಣಾನಾಮಕರಃ ಪರಃ ! ಉಪ ಮಾನವಶೇಷಾಣಾಂ ಸುಧನಾಂ ಯಸ್ಪದ ಕೀsಭವ || ಇತಿ ಶ್ರೀ ವಿಷ್ಣು ಪುರಾಣೆ ಪ್ರಥನಾಂತೇ ಪಂಚದಶೋಧ್ಯಾಯಃ ವಾದುದರಿಂದ ತನಗೆ ಎಲ್ಲರ ಸೋದರಭಾವವನ್ನು ಉಂಟುಮಾಡುವ ವೇ ಹೊರತು ಈ ವಿಷಳಕ್ಷಣಾದಿಗಳಿಂದ ತನಗೆ ಯಾವವಿಕಾರವೂಉಂ ಟಾಗಲಾರದೆಂದೂ ತಿಳಿದಿದ್ದನು, ಮತ್ತು ತನಗೆ ಸರ್ವಲೋಕಾಧಿಪ ನೂ, ಸರ್ವಶಕ್ತಿಸಂಪನ್ನನೂ ಎನಿಸಿದ ವಿಷ್ಣುವೇ ತಂದೆಯಂತಲೂ, ಮಾಯಾರೂಪಿಣಿ ಎನಿಸಿದ ಲಕ್ಷ್ಮಿಯ ತನ್ನ ಜನನಿಯೆಂತಲೂ, ದೃಢವಾ ಗಿ ತಿಳಿದಿದ್ದವನಾದಕಾರಣ ಅಂತಹ ಲಕ್ಷ್ಮಿಯ ಒಡ ಹುಟ್ಟಿದಹಾಲಾಹಲ ವಿಷವು ತನಗೆ ಸದರಮಾವನಾದುದರಿಂದಲ, ಸೋದರಮಾವನು ತ " ಸೋದರಳಿಯನ ವಿಷಯದಲ್ಲಿ ಎಂದಿಗೂ ಕೆಡಕನ್ನುಂಟುಮಾಡುವು ದಿಲ್ಲವೆಂದು ತಿಳಿದಿದ್ದನು, ಮತ್ತು ಇಂತಹ ಸಮದರ್ಶಿತ್ವವೆಂಬ ಜ್ಞಾನ ಯುಕನಾಗಿದ್ದುದರಿಂದ ಈತನು ಮೈತಗುಣಯುಕನಾಗಿದ್ದ ನೇ ಹೊರತು, ಭೇದಗುಣಯುಕ್ತನಾಗಿರಲಿಲ್ಲವು. ಆದುದರಿಂದ ರನಿಮಿತ್ಯಕವಾದ ಭೇದಜ್ಞಾನವೂ ಈತನಿಗಿರಲಿಲ್ಲವು | ೧MK ಈ ಪ್ರಹ್ಲಾದನು ಸತ್ಯ, ಶೌಚ, ದನ, ಕಾಂತಿ, ಆರ್ಜವ, ಆತ್ಮ ವಿನಿಗ್ರಹ, ಅಹಂಕಾರವಿಲ್ಲದಿರುವಿಕೆ, ಡಂಭವಿಲ್ಲದಿರುವಿಕೆ, ಇವೇ ಮೊದಲಾದ ಸ ದ್ಗುಣಗಳಿಗೆ ಸರ್ವೋತ್ತಮವರಿದ ಗಣಿ ಎನಿಸಿಕೊಂಡು, ಇತರ ಸಾಧುಗ ಆಗೆಲ್ಲಾ ನಿರಂತರವೂ ಉಪಮಾನಭೂತನೆನಿಸಿಕೊಂಡಿದ್ದ ನು, (ಸಾಧು ಗಳೂ, ಗುಣಶಾಲಿಗಳೂ ಕೂಡ ಆತನ ಸರಿತೆಯನ್ನೂ, ಗುಣಗಳ ಕಂಡು, ತಾವೂ ಈತನಂತೆಯೇ ಇರಬೇಕಂದು ಈತನ ಗುಣಗ ಳನ್ನು ಕಲಿಯುವಂತಹ ಗುಣಶಾಲಿಯ, ಸಚ್ಚರಿತ್ರ ಸಂಪನ್ನನೂ, ಈ ಪ್ರಹ್ಲಾದನೇ ಆಗಿದ್ದನು) ಎಂಬದಾಗಿ ಪರಾಶರನು ಮೈತ್ರೆಯನಿಗೆ ಹೇಳುತ್ತಿದ್ದ ನಂಬಲ್ಲಿಗೆ ಶ್ರೀವಿಷ್ಟು ಪುರಾಣದ ಒಂದನೆಯ ಅಂಶದಲ್ಲಿ ಹದಿನೈದನೆಯ ಅಧ್ಯಾಯವು ಮುಗಿದುದು