ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F೪ ವಾದ್ರೂಷಣ. ರಾಜಶ: ಶರರಾದಾಗ ಅವರ ಶ. ರತ್ನದ ಪ್ರಯೋಜನವೂ ಆಗುವ ಮಾರ್ಗ ಎಲ್ಲಿ ? ಅವರು ಶೌರ್ಯ ದಿಂದ ಅದರ ಮೇಲೆ ತಮ್ಮ ಶಸ್ತಪ್ರಹಾರ ಮಾಡಿ ಅದನ್ನು ಆಗಲೇ ಕಲ್ಲಬಹುದಾಗಿತ್ತು, ಆದರೆ ಅದನ್ನು ಹೀಗೆ ಕೊಂದುಬಿಟ್ಟಿದ್ದರೆ ಅವರು ಸಮರ್ಥ ರಿಗೆ ಮಾಡಿಬಂದ ವಾಗ್ದಾನವು ಸಫಲವಾಗುವ ಆಶೆಯೇ ಉಳಿಯುತ್ತಿದ್ದಿಲ್ಲ, ಆದ್ದರಿಂದ ಮಹಾರಾಜರು ತಮ್ಮ ಮೇಲೆ ಬಂದ ಈ ಸಂಕಟವನ್ನು ನುಂಗಿ ನೀರು ಕುಡಿದು ಸಮರ್ಥರ ಪಾದಾರವಿಂದಗಳನ್ನು ಭಕ್ತಿಪೂರ್ವಕವಾಗಿ ನೆನೆದು, ಧೈರ್ಯ ದಿಂದ ಆ ಹುಲಿಯ ಮೈ ಮೇಲೆ ಕೈಯಾಡಿಸಿ ಅದನ್ನು ಕುರಿತು- ತಾಯಿ! ಈ ಪ್ರಕಾರ ಸುಮ್ಮನೆ ನನ್ನ ಮೇಲೆ ಸಿಟ್ಟಿಗೇಳಬೇಡ, ನಾನು ನಿನ್ನ ಮರಿ ಗಳನ್ನು ತೆಗೆದುಕೊಂಡು ಹೋಗುವದಕಗಲೀ, ನಿನಗೆ ಘಾಯ ಪಡಿಸುವದ ಕಾಗಲೀ ಇಲ್ಲಿಗೆ ಬಂದವನಲ್ಲ, ನನ್ನ ಸ್ವಾಮಿಗಳಾದ ರಾಮದಾಸರಿಗೆ ನಿನ್ನ ಹಾಲು ಸ್ವಲ್ಪ ಬೇಕಾಗಿರುತ್ತವೆ, ಅವನ್ನಷ್ಟು ನೀನು ನನಗೆ ದಯಮಾಡಿ ಕೊಟ್ಟು ತರುವಾಯ ನನ್ನನ್ನು ಬೇಕಾದರೆ ಕೊಂದು ತಿನ್ನು ” ಎಂದು ಬೇಡಿಕೊಂಡರು. ಸದ್ದು ರು ಭಕ್ತಿಯ ಪ್ರಭಾವವನ್ನು ಕೇಳುವದೇನದೆ ? ಕೂಡಲೇ ಆ ಉಗ್ರವಾದ ಹುಲಿಯ .ಎ ಜಿಮಹಾರಾಜರನ್ನು ತನ್ನ ಬಂಧನದೊಳಗಿಂದ ವಿಮೋಚನ ಮಾಡಿ ಅವರೊಡನೆ ಸಮವಾದ ಆಕಳದಂತೆ ವರ್ತಿಸಹತ್ತಿತು. ಅದು ಮಹಾರಾಜರ ಮೇ ಲಿನ ತನ್ನ ಮಮತೆಯನ್ನು ತೋರಿಸುವದಕ್ಕಾಗಿ ಅವರ ಕೈಯನ್ನು ನೆಕ್ಕಿ ಅವರ ಸಂಗಡ ಸ್ನೇಹ ಸಲ್ಲಾಪಗಳಿಂದ ನಡೆದು ತನ್ನ ಹಾಲನ್ನು ತೆಗೆದುಕೊಳ್ಳುವದಕ್ಕೆ ಅವರಿಗೆ ತಮ್ಮ ಅನುಕೂಲವನ್ನು ಮಾಡಿಕೊಟ್ಟಿತು, ಆಗ ಮಹಾರಾಜರು ಬಹಳ ಹಷಪಟ್ಟು ತಾವು ತಮ್ಮ ಸಂಗಡ ತಂದಿದ್ದ ಪಾತ್ರೆಯ ತುಂಬ ಹಾಳನ್ನು ಹಿಂಡಿ ಕೊಂಡು ಆ ಹುಲಿಗೆ ನಮಸ್ಕರಿಸಿ ಅದರ ನಿಯೋವನ್ನು ತೆಗೆದುಕೊಂಡು ಸ್ವಲ್ಪ ದೂರ ಬರುವಷ್ಟರಲ್ಲಿ ಸಮರ್ಥರು ಅವರಿಗೆ ಅಕಸ್ಮಾತಾಗಿ ದರ್ಶನ ಕೊಟ್ಟು -- • ವರಾಯ! ನೀನು ಧನ್ಯನು ! ನನ್ನ ಔಷಧವನ್ನು ನೀನು ಕಡೆಗೆ ಸಂಪಾದಿಸದೆ ಬಿಡಲಿಲ್ಲ!• ಎಂದು ಆನಂದಮುದ್ರೆಯಿಂದ ಆವರಗೂಡ ಭಾಷಣ ಮಾಡಿದರು. ಆಗ ಮಹಾರಾಜರು ಅವರಿಗೆ ನಮಸ್ಕರಿಸಿ ಅವರ ಮುಂದೆ ಹುಲಿಯ ಹಾಲು ತುಂಬಿ ದ ಪಾತ್ರೆಯನ್ನು ಇಟ್ಟು- ಸ್ವಾಮಿ ತಮ್ಮ ಅಪೇಕ್ಷೆಯಂತೆ ಈ ಔಷಧವನ್ನು ತಂದಿದ್ದೇನೆ, ದಯಮಾಡಿ ಸ್ವೀಕರಿಸಬೇಕು” ಎಂದು ವಿನಂತಿ ಮಾಡಿಕೊಂಡರು. ಈ ಭಾಷಣವನ್ನು ಕೇಳಿ ಸಮರ್ಥರು ಮಹಾರಾಜರನ್ನು ಎಬ್ಬಿಸಿ ಆನಂದದಿಂದ ತಬ್ಬಿಕೊಂಡು ಮಹಾರಾಜರ ಮೈಮೇಲೆ ಹುಲಿಯು ಪಂಜರಗಳಿಂದ ಉಂಟಾದ ಘಾಯಗಳನ್ನು ನೋಡಿ ಬಹಳ ವಿಸ್ಮಯಪಟ್ಟರು. ಆ ಮೇಲೆ ಮಹಾರಾಜರು ಸಮರ್ಥರಿಗ- ಸ್ವಾಮಿವರ್ಯರೇ! ತಮ್ಮ ಹೊಟ್ಟ ತೂಲಿಯು ಇನ್ನೂ ಯಥಾ