- ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ. ೧os “ ಸಾವಿತಾ! ಅದೆಲ್ಲ ಹಿರಿಯರ ಕಲಸವು, ಉಣ್ಣುವದೊಂದೇ ನಮ್ಮ ಚಿಕ್ಕವರ ಕಲ ಸವು ' ಎಂದು ನುಡಿದರು ಆಗ ಸಮರ್ಥರು ಆ ಮುದಿಕಯನ್ನು ಕರೆದು ಅವಳ ವಸ್ತ್ರ ಕದ ಮೇಲೆ ಕೈ ಇಟ್ಟರು, ಕೂಡಲೇ ಅವಳಿಗೆ ಸಮಾಧಿಯಾಗಿ ಭಗವದ್ದರ್ಶನದ ಲಾ ಭವಾಯಿತು, ಆ ಮೇಲೆ ಸಮರ್ಧರು ಪನಃ ಅವಳ ಸಮಾಧಿಯನ್ನು ಇಳಿಸಿ "ನೀನು ಯಾವಾಗಲೂ ಇದೇ ಪ್ರಕಾರ ಆನಂದದಿಂದ ಇರು” ಎಂದು ಆಶೀರ್ವಾದ ಮಾಡಿ ಅ ವಳಿಗೆ 4 ಆನಂದೀಬಾಯಿ.” ಎಂಬ ಹೆಸರಿಟ್ಟು ಹೊರಟುಹೋದರು, ಅಂದಿನಿಂದ ಜನ ರೆಲ್ಲರು ಆ ಮುದಿಕಗೆ ( ಅನಂದೀಬಾಯಿ 1' ಎಂಬ ಹೆಸರಿನಿಂದ ಕರೆಯಹತ್ತಿದರು, ಜಿದ್ದಿನ ಹಾಡುಗಳು:-ಸಮರ್ಧರು ಒಂದು ಸಾರೆ ಸಂಚರಿಸು ಪಾಲೀ ಎಂಬಲ್ಲಿಗೆ ಬಂದರು ಅಲ್ಲಿ ಹರಿದಾಸರೊಳಗೂ ಲಾವಣಿ ಹಾಡುವವರೊಳಗೂ ಪಣ ಗಡವಾಗಿದ್ದವು, ಹರಿದಾಸರು ತಾವು ಗಾಯನಕುಶಲರೆ೦ತಲೂ ಲಾವಣ' ಹಾಡುವ ವರು ತಾವು ಗಾಯನಕುರಲರಂತಲೂ ಜಿದ್ದು ಕಟ್ಟಿ ಹಾಡುತ್ತಿದ್ದರು. ಇಬ್ಬರೂ ಒಬ್ಬ ರಮೇಲೊಬ್ಬರು ಈರ್ಷೆಯಿಂದ ಹಾಡುತ್ತಿದ್ದರು, ಹಾಡುಗಳಿಂದಲೇ ಅವರ ಪ್ರಶ್ನೆಗೆ ಇವರು ಉತ್ಮರ ಕೊಡುವದೂ ಇವರ ಉತ್ತರಕ್ಕೆ ಅವರು ಪ್ರತ್ಯಕ್ಷರ ಕೊಡುವದೂ ನಡೆದಿದ್ದವು, ಅದನ್ನು ಸಮರ್ಥ ರು ಕ೦ಡು ಒ೦ ಏದೇನು? ಎಂದು ಅವರಿಬ್ಬರಿಗೂ ಕೇಳಿದರು, ಅದಕ್ಕೆ ಅವರಿಬ್ಬರೂ ನಾವು ಒಬ್ಬರಿಗೊಬ್ಬರನ್ನು ನಿರುತ್ತರ ಮಾ ಡುವದಕ್ಕಾಗಿ ಜಿದ್ದು ಕಟ್ಟಿ ಹಾಡುತ್ತಲಿದ್ದೆ: "” ಎಂದು ಉತ್ತರಕೊಟ್ಟರು. ಆಗ ಸಮರ್ಥರು ತಾವೂ ಒಂದು ಹಾಡನ್ನು ಹೊಸದಾಗಿ ರಚಿಸಿ ಹಾಡಿದರು. ಆ ಹಾ ಡಿನಲ್ಲಿ ಸಮರ್ಥರು ಅವರಿಗೆ-'ಪೃಥ್ವಿ೨ ಭಾರ ಎಷ್ಟಿರುತ್ತದೆ ಬ್ರಹ್ಮಾಂಡದ ಲ್ಲಿ ವನಸ್ಪತಿಗಳು ಎಷ್ಟಿರುತ್ತವೆ ಮೈಮೇಲಿರುವ ಕೂದಲುಗಳ ಸಂಖ್ಯೆಯು ಎ ಷ್ಟು? ಎಂದು ಪ್ರಶ್ನೆ ಹಾಕಿದ್ದರು, ಆ ಪ್ರಶ್ನೆಗಳಿಗೆ ಉತ್ತರ ಕೊಡಲಿಕ್ಕೆ ಯಾರಿo ದಲೂ ಆಗಲಿಲ್ಲ, ಆಗ ಅವರಿಬ್ಬರೂ .ನ ೩ ಸೆವ?” ಎಂದು ಒಪ್ಪಿಕೊಂ ಡು ಸಮರ್ಥರ ಕಾಲನ್ನು ಗಟ್ಟಿಯಾಗಿ ಹಿಡಿದರು, ಈ ಮೇರೆಗೆ ಸಮರ್ಥರು ಅ ವರೊಳಗಿನ ಕಲಹವನ್ನು ಶಾಂತ ಪಡಿಸಿ ಮುಂದಕ್ಕೆ ಸಾಗಿದರು. ಕರ್ನಾಟಕ ಪ್ರಾಂತಕ್ಕೆ ಹೋಗಲು ಶಿವಾಜಿಮಹಾರಾಜರಿಗೆ ಅಪ್ಪಣೆಯ ನ್ನು ಕೊಟ್ಟದ್ದು: ಶಕ ೧೫೯೩ರಲ್ಲಿ ನಾಜಿಮಹಾರಾಜರು ಕರ್ನಾಟಕ ಪ್ರಾಂತ ಕ್ಕೆ ಹೋಗುವಗೋಸ್ಕರ ಯಾವತ್ತು ಸಿದ್ಧತೆಯನ್ನು ಮಾಡಿಕೊಂಡು ಸಮರ್ಥರ ಆಜ್ಞೆಯನ್ನು ತೆಗೆದುಕೊಳ್ಳುವದಕ್ಕಾಗಿ ಚಾಫಳಕ್ಕೆ ಹೋದರು, ಆಗ ಮಹಾರಾ ಜರು ತಾವು ಕರ್ನಾಟಕಕ್ಕೆ ಹೋಗಿ ತಿರುಗಿ ಬರುವದಕ್ಕಾಗಿ ಬಹಳ ದಿವಸಗಳು ಹಿಡಿಯುವವೆಂದು ನೋಡಿ ತಾವ ತಿರುಗಿ ಒರುವಕಾಲ ಪರಿಯಂತರ ಮಠದ ಖ ರ್ಚಿಗಾಗಿ ಯೋಗ್ಯ ವ್ಯವಸ್ಥೆಯನ್ನು ಮಾಡಿ ಹೋಗಬೇಕೆಂದು ಆಲೋಚಿಸಿ ಮ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧೩
ಗೋಚರ