ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾದ್ರೂಷಣ: ಮುಂಚೆ ಭೋಜನ ಮಾಡಿಕೊಳ್ಳರಿ, ಮುಂದೆ ಆಗತಕ್ಕದ್ದು ಆದೀತು" ಎಂದು ಉತ್ತರ ಕೊಟ್ಟು ಆ ಬ್ರಾಹ್ಮಣರಿಗೆ ಅವರು ತಂದಿದ್ದ ಕಲ್ಲುಗಳನ್ನು ಚೆಲ್ಲಿಕೊಂಡ ಲಿಕ್ಕೆ ಹೇಳಿ ಅವರನ್ನು ಸಂಗ್ಲಿಗೆ ಕರಕೊಂಡು ಭೋಜನ ಮಾಡಿದರು, ತರು ವಾಯು ಸಮರ್ಥರು ಅವರಿಗೆ ತಾಂಬೂಲವನ್ನೂ ಪ್ರತಿಯೊಬ್ಬರಿಗೆ ಒಂದೊಂದು ಸುವರ್ಣದ ಮೊಹರು ದಕ್ಷಿಣವನ್ನೂ ಕೊಟ್ಟು-“ ನೀವು ಸಾಕ್ಷಾತ್ ಭೂದೇವರು. ನಿಮ್ಮ ಇಚ್ಛೆಯನ್ನು ತೃಪ್ತಿಪಡಿಸುವ ಸಾಮರ್ಥ್ಯವು ಯಾರಿಗೆ ಉ೦ಟು? ಆದರೂ ಶ್ರೀ ರಘುಪತಿಯ ಆಜ್ಞೆಯು-ನೀವು ಉರ್ವಸಿ ನದಿಯೊಳಗಿಂದ ನಿಮ್ಮ ನಿಮ್ಮ ಕೈ ಹಿಡಿಸುವಂಥ ಕಲ್ಲನ್ನು ತೆಗೆದುಕೊಂಡು ಹೋಗಬೇಕೆಂದು ಆಗಿರುವದು ?” ಎಂದು ಅವರಿಗೆ ಹೇಳಿ ಕಿಲ್ಲೆ ಯ ಕೆಳಗಿನ ಗುಡ್ಡಕ್ಕೆ ಹೊರಟುಹೋದರು. ಆ ಬ್ರಾಹ್ಮಣರು ಸಮರ್ಥರ ಮತಿನಮೇಲೆ ವಿಶ್ವಾಸವಿಟ್ಟು ತಮ್ಮ ಕೈಗೆ ಹಿಡಿಸುವಂಥ ಕಲ್ಲನ್ನು ತೆಗೆ ದುಕೊಂಡು ತಮ್ಮ ಧೋತರದ ಶತಗಿನಲ್ಲಿ ಕಟ್ಟಿಕೊಂಡು ತಮ್ಮ ತಮ್ಮ ಮನೆಗೆ ಹೊರಟುಹೋದರು, ಆ ಮೇಲೆ ತಮ್ಮ ತಮ್ಮ ಮನೆಯೊಳಗೆ ಅವರು ಧೋತರದ ತರಗು ಬಿಚ್ಚಿ ನೋಡಲಾಗಿ ಅದೆಲ್ಲ ಭಂಗಾರವಾಗಿತ್ತು, ದೈವಬಲವು:-ಒಂದಾನೊಂದು ದಿವಸ ಸಮರ್ಥರ ಬಳಿಯಲ್ಲಿ ಅವರ ಶಿಷ್ಯ ರೆಲ್ಲರು ಕುಳಿತು “ ಪ್ರಾರಬ್ದದಿಂದ ಸುಖದುಃಖಗಳು ಪ್ರಾಪ್ತವಾಗುತ್ತವೋ ಅಥ ವ ಪ್ರಯತ್ನದಿಂದ ಪ್ರಾಪ್ತವಾಗುತ್ತವೊ?' ಎಂಬ ವಿಷಯದ ಬಗ್ಗೆ ವಾದವಿವಾದ ವನ್ನು ನಡಿಸಿದ್ದರು, ಆಗ ಸಮರ್ಥರು ಅವರಿಗೆ ” ಅಪ್ಪುಗಳಿರಾ! ಪ್ರಯತ್ನದ ವಿಷಯವು ಪ್ರಾಗಬ್ದದ ವಿಷಯದಿಂದ ಸ್ವತಂತ್ರವಾಗಿರುವದು, ಪ್ರಾರಬ್ಧ ಯೋಗ ವ ಪ್ರಯತ್ನ ಮಾಡಿ ಅಧವಾ ಪ್ರಯತ್ನ ಮಾಡದ ಸಹ ಪ್ರಾಪ್ತವಾಗಿದೆ ಎಂದು ಹೇಳಿದರು, ಅದಕ್ಕೆ ಕಲ್ಯಾಣನು-* ಸ್ವಾಮಿ ! ಪ್ರಾರಬ್ದ ಯೋಗವು ಪ್ರಯತ್ನದಿಂದ ಪಕ್ಕವಾಗಬಹುದು, ಪ್ರಯತ್ನವಿಲ್ಲದೆ ಅದು ಹ್ಯಾಗ ಪ್ರಾಪ್ತ ವಾದೀತು ?• ಎಂದು ಪ್ರಶ್ನೆ ಮಾಡಿದನು, ಆಗ ಸಮರ್ಥ ರು.“ ಯಾಕಾಗ. ಲೊಲ್ಲದು, ಈ ಸಂಗತಿಯ ಅನುಭವವನ್ನು ನಿನಗೆ.ನಾನು ಬೇಗನೆ ತಂದುಕೊಡು ನೆ, ಸ್ವಲ್ಪ ತಡಿ” ಎಂದು ಹೇಳಿದರು, ಆಮೇಲೆ ಕೆಲವು ದಿವಸಗಳು ಕಳೆ ದುಹೋಗಲಾಗಿ ಸಮರ್ಥರು ಕಲ್ಯಾಣನಿಗೆ--ಆ ಕಲ್ಯಾಣಾ ! ರಂಗನಾಥಸ್ವಾಮಿ ಯು ಭೇಟಿಯಾಗದೆ ಬಹಳ ದಿವಸಗಳಾದವು, ನಾವಿಬ್ಬರೂ ಹೋಗಿಬರುವಾ ನಡಿ” ಎಂದು ಅಪ್ಪಣಿ ಮಾಡಿದರು, ಅದರಿಂದ ಕಲ್ಯಾಣನು ಅವರ ಸಂಗಡ ನಿಗಡಿಗೆ ಹೋಗುವದಕ್ಕಾಗಿ ಹೊರಟನು, ಸವರ್ಥ ರು ಕಾಲಲ್ಲಿ ಪಾದುಕಗಳನ್ನೂ ಕೊರ ಇಲ್ಲಿ ರುದ್ರಾಕ್ಷಿ ಮಾಲೆಯನ್ನೂ ಜಡೆಯಲ್ಲಿ ಪಾವುಡವನ್ನೂ ಕೈಯಲ್ಲಿ ಕುಂಬಳಕಾ ಯಿಯ ಪಾತ್ರೆಯನ್ನೂ ಬಗಲಲ್ಲಿ ದಂಡಯೋಗವನ್ನೂ ತೆಗೆದುಕೊಂಡು ಹೊರಟ