-- ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ. ರು, ಅವರ ಹಿಂದಿಂದ ಕಲ್ಯಾಣನು ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನೂ ಬಗಲಲ್ಲಿ ಜೋಳಿಗೆ ಮತ್ತು ಸಮರ್ಥರ ಪೂಜಾಸಾಮಾನುಗಳನ್ನೂ ತೆಗೆದುಕೊಂಡು ಹೊರಟ ನು, ಇವರಿಬ್ಬರೂ ವರ್ಧಾ ನದಿಯ ಧಡಕ್ಕೆ ಬಂದಿರಲು ರಂಗನಾಥಸ್ವಾಮಿಯು ಅವರಿಗೆ ಭೇಟಿಯಾದನು, ರಂಗನಾಥಸ್ವಾಮಿಯಾದರೆ ಸಮರ್ಥರ ದರ್ಶನಕ್ಕಾಗಿ ಬರುತ್ತಲಿದ್ದನು, ಅವನ ವೇಷವೆಲ್ಲ ಸರದಾರನ ವೇಷವೇ ಇತ್ತು, ಅವನ ಕೈಯ ಲ್ಲಿ ಐದು ಜಾತಿಯ ಶಸ್ತ್ರಗಳು ಇದ್ದವು, ಅವನ ತಲೆಯಮೇಲೆ ಪಾಟಿಗೆ ಸುವ ರ್ಣದ ಶಿರಪೇಚು ಇತ್ತು, ಅವನಿಗೆ ಕೊಡಲಿಕ್ಕೆ ಒಂದು ದೊಡ್ಡ ಕುದುರೆಯು ಇತ್ತು, ಇದಲ್ಲದೆ ಆ ಕುದುರೆಯ ಮುಂದೆ ಲ೦ಗೋಟಿಯನ್ನು ಹಾಕಿದಂಥ ಹತ್ತು ಇಪ್ಪತ್ತು ಮಂದಿ ಶಿಷ್ಯರು ಇದ್ದರು. ಇಂಥ ವೈಭವದಿಂದ ಬರುತ್ತಲಿದ್ದ ರಂಗನಾ ಥಸ್ವಾಮಿಯು ದೂರಿಂದ ಸಮರ್ಥರನ್ನೂ ಕಲ್ಯಾಣಸ್ವಾಮಿಯನ್ನೂ ಕಂಡು ತನ್ನ ಕುದುರೆಯಿಂದ ಕೆಳಗೆ ಜಿಗಿದು ಸಮರ್ಥರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕಾಲಿ ನಿಂದಲೇ ನಡೆಯುತ್ತೆ ಮುಂದಕ್ಕೆ ಬಂದನು, ಇದನ್ನು ಸಮರ್ಥರು ನೋಡಿ ತಾವೂ ಒರದಿಂದ ಮುಂದಕ್ಕೆ ಬಂದರು. ಈ ಮೇರೆಗೆ ಅವರಿಬ್ಬರೂ ಒಂದು ಅಡವಿಯು ಲ್ಲಿ ಭೇಟಿಯಾಗಿ - ನಿಮ್ಮ ದರ್ಶನಕ್ಕೆ ನಾವು ಬರುತ್ತಿದ್ದೆವು” ಎಂದು ಒಬ್ಬರಿಗೊ ಬರು ಹೇಳಿ ಕ್ಷೇಮಕುಶಲಗಳನ್ನು ಮಾತಾಡುತ್ತ ಸ್ವಲ್ಪ ದೂರ ಬಂದರು. ಆಗ ಸಮರ್ಥರು ರಂಗನಾಥಸ್ವಾಮಿಗ-« ನೀನೂ ಸಾಧುವ, ನಾನೂ ಸಾಧುವು ನಿನ್ನ ವ್ಯವಹಾರದಲ್ಲಿಯೂ ನನ್ನ ವ್ಯವಹಾರದಲ್ಲಿಯ ಯಾಕೆ ಭೇದವಿಗುತ್ತದೆ? ನಿನಗೆ ಇಂಥ ಸುಂದರವಾದ ಅರಿವೆಗಳೂ ಬೆಲೆಯುಳ್ಳಿ ಆಭರಣಗಳೂ ಪಂಚಆಯುಧಗಳೂ ಕುದುರೆಯೂ ಇರುತ್ತಿದ್ದು ನನಗೆ ಬರೇ ಒಂದು ಅಂಗಡಿಯು ಇರುತ್ತದೆ, ಆದ ರ ಕಾರಣವೇನು ? ” ಎಂದು ಕೇಳಿದರು, ಅದಕ್ಕೆ ರಂಗನಾಥಸ್ವಾಮಿಯು ಸಮ ರ್ಥರಿಗೆ ನಿಮ್ಮ ಅಪೇಕ್ಷೆಗೆ ಅಧೀನವಾಗಿಯೇ ನಾನು ಈ ಪ್ರಕಾರ ಇದ್ದೇನೆ? ಎಂದು ಉತ್ತರ ಕೊಟ್ಟದು, ಅಗ ಸಮರ್ಥರು ತಿರುಗಿ ರಂಗನಾಥನಿಗೆ- ನನ್ನ ಇಚ್ಛೆ ಗೆ ಅಧೀನವಾಗಿ ನೀನು ಇರುವದಾದರೆ ನೀನು ಅಲ್ಲಿಯೇ ಇಳಿದುಕೊಳ್ಳ ಬೇಕು. ನಾನೂ ಕಲ್ಯಾಣನೂ ಬಸರಿಯ ಊರಲ್ಲಿ ಹೋಗಿ ಭಿಕ್ಷೆ ಬೇಡಿಕೊಂಡು ಬರುತ್ತೇ ವೆ, ಭಾವೆಲ್ಲರೂ ಇಲ್ಲಿಯೇ ಭೂಕಿನ ಮಾಡಿಕೊಂಡು ರಾತ್ರಿ ವಸ್ತಿ ಮಾಡಿ ಮುಂದೆ ಹೊರಟುಹೋಗೋಣ' ಎಂದು ಹೇಳಿದರು. ಅದಕ್ಕೆ ರಂಗನಾಥನು ಒಪ್ಪಿಕೊಂಡು ಅಲ್ಲಿಯೇ ತನ್ನ ಯಾವತ್ತು ಶಿಷ್ಯರೊಡನೆ ಇಳಿದುಕೊಂಡನು, ಆಗ ಸಮರ್ಥರೂ ಕಲ್ಯಾಣನೂ ಅಲ್ಲಿ ಸಮೀಪದಲ್ಲಿದ್ದ ಬಸರಿಯೆಂಬ ಊರೊಳಗೆ ಭಿಕ್ಷೆ ಯನ್ನು ಬೇಡಿಕೊಂಡು ಬರಲಿಕ್ಕೆ ಹೊರಟುಹೋದರು, ಈ ಪ್ರಕಾಶ ರಂಗನಾಥ ಸ್ವಾಮಿಯು ಅಡವಿಯಲ್ಲಿ ಬಿಸಿಲೊಳಗೆ ಸಮರ್ಥರ ಮತ್ತು ಕಲ್ಯಾಣನ ದಾರಿಯನು!
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೨೯
ಗೋಚರ