೧೪೪ ವಾಗ್ವತವೆ. - -- -- -- -- -+ ವಾಗುವದು ಎಂದು ಅವರಿಗೆ ಬಹಳ ಹೇಳಿಕೊಂಡನು, ಆದನ್ನು ಕೇಳಿ ಸಮರ್ಥ, ರು ಅyಾ ಇವಳ ಕಡೆಗೆ ನೋಡಿದರು, ಆಗ ಅಕ್ಕಾ ಆವಳು ಒಂದು ಬಟ್ಟಲ ತುಂಬ ನೀರು ತರಲಾಗಿ ಅವರು ಸ್ವಲ್ಪ ಕಲ್ಲುಸಕ್ಕರಿಯನ್ನು ಬಾಯಲ್ಲಿ ಹಾಕಿ ಡು ತುಸು ನೀರು ಕುಡಿದರು, ಆ ಮೇಲೆ ಎಲ್ಲರಿಗೆ ಹೊರಗೆ ಹೋಗಲಿಕ್ಕೆ ಅಪ್ಪಣತಿ ಯನ್ನು ಮಾಡಿದರು, ಆದರೆ ಉದ್ಭವ ಗೋಸಾವಿ ಮತ್ತು ಆ ಇವರಿಬ್ಬರೇ ಮಾತ್ರ ಕೋಣಿಯಲ್ಲಿ ಅವರ ಮುಂದೆ ನಿಂತುಕೊಂಡು ಅವರಿಗೆ ( ಇನ್ನು ಮೇಲೆ ಪಲಂಗದ ಮೇಲೆ ಕುಳಿತುಕೊಳ್ಳಿರಿ » ಎಂದು ವಿನಂತಿಮಾಡಿದರು, ಆಗ ಸಮರ್ಥರು 44 ಹಾಗಾದರೆ ನನ್ನನ್ನು ಎತ್ತಿ ಪಲಂಗದ ಮೇಲೆ ಕೂರಿಸಂ , ಎಂದು ಹೇಳಿದರು. ಅದನ್ನು ಕೇಳಿ ಉದ್ಭವ ಗೋಸಾವಿಯು ಅವರನ್ನು ಎತ್ತಿ ಪಲಂಗದ ಮೇಲೆ ಕೂ ಡಿಸಬೇಕೆಂದು ಹೋದನು, ಆಗ ಅವನ ಕಡೆಯಿಂದ ಎತ್ತುವದು ಅಸಾಧ್ಯವಾಯಿ ತು, ಅw ಈಕೆಯ ಬಂದಳು. ಇಬ್ಬರೂ ಕೂಡಿ ಅವರನ್ನು ಎಳ್ಳಬೇಕೆಂದು ಯತ್ನಿಸಿದರು, ಇಬ್ಬರಿಗೂ ಸಹ ಆಸಾಧ್ಯವಾಯಿತು, ಆಗ ಅವರು ಹೊರಗೆ ಇದ್ದಂ ಫ ಜನರನ್ನು ಕರೆದರು, ಹತ್ತು ಮಂದಿ ಕೂಡಿ ಪ್ರಯತ್ನ ಮಾಡಿದಾಗ್ಯೂ ಸಮರ್ಥರ ನ್ನು ಎತ್ತುವದಾಗಲಿಲ್ಲ. ಆಗ ಉದ್ಭವಗೋಸಾವಿಯ ಅಕ್ಕ ಈಕೆಯ ಸಮ ರ್ಧರಿಗ- ಸ್ವವಿಖ! ನಿಮ್ಮನ್ನು ಇಲ್ಲಿಂದ ಎತ್ತಲಿಕ್ಕಾಗುವದಿಲ್ಲ, ಎಂದು ಹೇಳಿದ ರು, ಆಗ ಸವರ್ಧರು ಅವರೆಲ್ಲರಿಗೆ ಒಂದು ಮಗ್ಗಲಿಗೆ ಸರಿಸಿ ತಾವು ವಾಯುವ ನ್ನು ಆಕರ್ಷಣಮಾಡಿಕೊಳ್ಳಲಿಕ್ಕೆ ಹತ್ತಿದರು, ಇದನ್ನು ನೋಡಿ ಉದ್ಭವ ಗೋ ಸಾವಿಯೂ ಅಕ್ಕಾ ಈಕೆಯ ಬಿಕ್ಕಿ ಬಿಕ್ಕಿ ಅಳಹತ್ತಿದರು. ಅದಕ್ಕೆ ಸಮರ್ಥರು ಅವ ೦ಗ ! ಇಷ್ಟು ದಿವಸ ನಮ್ಮ ಸಹವಾಸದಲ್ಲಿದ್ದು ನಮ್ಮ ಸಾರ್ಥಕವಾಡಲಿಕ್ಕ ಅಳು ವ ಸಾಧನವನ್ನು ಮಾತ್ರ ಕಲಿತಿರ!ಎಂದು ಕೇಳಿದರು, ಆಗ ಅಞ್ಞಾ ಈಕೆಯ- ಸ್ವಾಮಿ, ಹಾಗಲ್ಲ, ನಮ್ಮ ಸಗುಣ ಮೂರ್ತಿಯು ಹೊರಟು ಹೋಗುತ್ತಲಿರುವ ದರಿಂದ ಇನ್ನು ಮೇಲೆ ನಾವು ಯಾರ ಭಜನಮಾಡಜೀಕು, ಯಾರೊಡನೆ ಮಾತಾ ಡಬೇಕು, ಯಾರ ಮುಂದೆ ನಮ್ಮ ಸುಖದುಃಖ ಹೇಳಬೇಕು, ಯಾರ ಕಡೆಯಿಂದ ಸತ್ಯಾಸತ್ಯ ನ್ಯಾಯಾನ್ಯಾಯ ಮತ್ತು ಧರ್ಮಾಧರ್ಮಗಳನ್ನು ತಿಳಿದುಕೊಳ ಕು ಎಂಬ ವಿಚಾರಗಳು ನಮ್ಮ ಮನಸ್ಸಿನಲ್ಲಿ ಬಂದ ಮೂಲಕ ನಮಗೆ ವ್ಯಸನವಾಗಿ ರುತ್ತದೆ, ಎಂದು ಉತ್ತರಕೊಟ್ಟಳು, ಅದಕ್ಕೆ ಸಮರ್ಥರು “ ನನ್ನ ಪಶ್ಯಾತ್ಯಾ ರಿಗಾದರೂ ನನ್ನ ಕೂಡ ಸಂಭಾಷಣ ಮಾಡಿ ನನ್ನ ಉಪದೇಶವನ್ನು ಕೇಳಿಕೊಳ್ಳು ವದಿದ್ದಲ್ಲಿ ಅವರು ನಾನು ರಚಿಸಿದ ದಾಸಬೋಧವನ್ನು ಓದಬೇಕು, ಅಂದರೆ ಅದ ರಿಂದ ನಾನು ಪ್ರತ್ಯಕ್ಷ: ಮಾತಾಡಿದ ಲಾಭವು ದೊರಕುವದು, ಆದ್ದರಿಂದ ಇನ್ನು ಮೇಲೆ ಯರೂ ದುಃಖಪಡಬಾರದ” ಎಂದು ಹೇಳಿ ಹನ್ನೊಂದು ಸಾರೆ “ಹರಹರನ್
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೫೪
ಗೋಚರ