೫ಳಿ ಪಾದ್ರೂಷಣ, ಒಂದು ಬಿನ್ನಹ ಪತ್ರವನ್ನು ಬರೆದುಕೊಂಡನು, ಅದಕ್ಕೆ ಸಮರ್ಥರ ಕಡೆಯಿಂದ “ ನೀನು ಮಠದಲ್ಲಿ ಮಹಾದೇವ ಗೋಸಾವಿಯನ್ನಿಟ್ಟು ಹೊರಟು ಬಾ” ಎಂ ದು ಉತ್ತರವು ಹೋಗಲಾಗಿ ಉದ್ದವಗೋಸಾವಿಯು ಸಮರ್ಥರ ದರ್ಶನಕ್ಕಾಗಿ ಚಾಫಳಕ್ಕೆ ಬಂದು ಅವರ ಹತ್ತರ ಕೆಲವು ದಿವಸಗಳ ಮಟ್ಟಿಗೆ ಇದ್ದನು. ಸಮರ್ಥರು ನದಿಯಲ್ಲಿ ಮುಳುಗಿದು~ ಒಂದಾನೊಂದು ದಿವಸ ಸಮರ್ಥ ರು ಕೊಂಡವಣದಿಂದ ಚಾವಳಕ್ಕೆ ಬರುವದಕ್ಕಾಗಿ ಹೊರಟಿರಲು ಪಾಟಣ ಎಂಬ ಊರ ಹತ್ತರ ಕೊಯನಾ ನದಿಯು ತುಂಬಿ ಹರಿಯುತ್ತಿತ್ತು, ಆಗ ಸಮರ್ಥರು ತ ಮಗೆ ಆ ನದಿಯನ್ನು ದಾಟಿಸುವದ ಕ್ಕಾಗಿ ಹೋಡಿಯನ್ನು ತೆಗೆದುಕೊಂಡು ಬರಬೇ ಕಂದು ಅಂಬಿಗರಿಗೆ ಹೇಳಿ ಕಳಿಸಿದರು, ಅಂಬಿಗರು ಬರಲಿಕ್ಕೆ ಸ್ವಲ್ಪ ಅವಧಿಯ ಯಿತು, ಇಷ್ಟರಲ್ಲಿ ಸಮರ್ಥರು ನದಿಯಲ್ಲಿ ಹಾರಿಕೊಂಡು ಇಸುತ್ತಾ ಇಸುತ್ತಾ ನದಿಯ ಆಚೆಯ ದಂಡೆಗೆ ಹೋಗಲಿಕ್ಕೆ ಹತ್ತಿದರು. ಅಷ್ಟರಲ್ಲಿ ನಡುವೆ ಅವರು ಒe ದು ಬಳ್ಳಿ ಗಳ ಗುಂಪಿಗೆ ತೊಡಕಿ ಕೊಳ್ಳಲಾಗಿ ಅವರು ಕೆಳಗೆ ಮುಳುಗಿ ಹೋದವರು ಮೇಲಕ್ಕೆ ಎಳಲೇ ಇಲ್ಲ! ನದಿಯ ಎರಡೂ ದಂಡೆಗಿದ್ದ ಜನರು ಗೋಸಾವಿಯು ಮುಳುಗಿದನೆಂದು ಒಂದೇ ಸವನೆ ಎದೆ ಎದೆ ಬಡಕೊಳ್ಳ ಹತ್ತಿದರು, ಎಷ್ಟೋ ಅ೦ ಒಗರು ಆ ನವಿಯಲ್ಲಿ ಹಾರಿಕೊಂಡು ಎಲ್ಲ ಕಡೆಗೆ ಹುಡುಕಿ ಬಂದರು, ಆದರೂ ಸ ಮರ್ಧರು ಇದ್ದದ್ದು ಗೊತ್ತಾಗಲಿಲ್ಲ. ಆಗ ಚಾಫಳದ ಮಠಕ್ಕೆ ಸಮರ್ಥರು ಕೋ ಯನಾ ನದಿಯಲ್ಲಿ ಮುಳುಗಿದರೆಂದು ಚಾಂದಜೀರಾವ ಎಂಬವರು ಪತ್ರ ಕಳಿಸಿದ ನು, ಆ ಪತ್ರವು ಮುಟ್ಟುತ್ತಲೇ ಅಲ್ಲಿಂದ ಉದ್ದವ ಗೋಸಾವಿಯ ಕಲಾಣಗೊಳಿ ಸಾವಿಯೂ ಆ ನದಿಗೆ ಹೊರಟು ಬಂದು ಅಲ್ಲಿದ್ದ ಜನರ ಕಡೆಯಿಂದ ಸಮು ರ್ಥರ ಸಮಾಚಾರವನ್ನು ವಿಚಾರಿಸಿದರು, ಆಗ ಎಲ್ಲರು ಅವರಿಗೆ ಆ ಸಮರ್ಥ ರು ಎಲ್ಲಿಯಾದರೂ ನದಿಯ ತಳೆವಿನ ಕೂಡ ಹರಿದು ಹೋಗಿರ ಬಹುದು, ಅಧ ವಾ ಅವರನ್ನು ಜಲಚರಗಳು ತಿಂದು ಬಿಟ್ಟಿರಬಹುದು " ಎಂದು ಹೇಳಿದರು, ಅದ ನ್ನು ಕೇಳಿ ಕಲ್ಯಾಣ ಸ್ವಾಮಿಯು ಆನೀವು ನಿಮ್ಮ ಕೇವಲ ಅಜ್ಞಾನದ ಮೂಲಕ ಹೀ ಗೆ ತಿಳಿದುಕೊಂಡಿರುತ್ತೀರಿ, ಸಮರ್ಥರ ಜೀವವು ಈ ಪ್ರಕಾರ ದಾರಿಯ ಮೇಲೆ ಬಿದ್ದಿಲ್ಲ ” ಎಂದು ಉತ್ತರ ಕೊಟ್ಟು ನಕ್ಕವನೇ ಜನರು ಬೇಡ ಬೇಡೆಂದು ಹೇಳಿ ದಾದ್ರೂ ಕೇಳದೆ ತಾನೂ ನದಿಯೊಳಗೆ ಹಾಕಿಕೊಂಡನು ಈ ಪ್ರಕಾರ ಅವನು ಹಾ ರಿಕೊಂಡು ಒಳಗೆ ಹುಡುಕಲಾಗಿ ಸಮರ್ಥ ರು ಪದ್ಮಾಸನವನ್ನು ಹಾಕಿಕೊಂಡು ಜಪ ವನ್ನು ಮಾಡುತ್ತ ಕುಳಿತಿದ್ದನ್ನು ಕಂಡು, ಮೇಲಕ್ಕೆ ಬಂದವನೇ ಪುನಃ ಕಸುವಿನಿಂದ ಕೆಳಗೆ ಮುಳುಗಿ, ಸಮರ್ಥರ ತೊಡಿಯ ಸಂದಿನಲ್ಲಿ ತನ್ನ ಕುತ್ತಿಗೆಯನ್ನು ಹಾಕಿ ಸ ಮರ್ಧರನ್ನು ತನ್ನ ಕುತ್ತಿಗೆಯ ಮೇಲೆ ಕೂಡ್ರಿಸಿಕೊಂಡು, ಈಸುತ್ತಾ ಇಸುತ್ತಾ ನ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೬೪
ಗೋಚರ