ಶ್ರೀ ರಾಮದಸಸ್ವಾಮಿಗಳ ಚರಿತ್ರ. 的的 ವಿಯ ಆಚೆಯ ದಂಡೆಗೆ ಬಂದನು ಇದನ್ನು ನೋಡಿ ಎಲ್ಲರು ಇಷ್ಟು ದಿವಸ ಸ ಮರ್ಥರು ನೀರಲ್ಲಿ ಹ್ಯಾಗೆ ಬದುಕಿದರು ? ಅವರ ಲೀಲೆಯು ಅತ್ಯಗಾಧವಾಗಿದೆ! ” ಎಂದು ನುಡಿದು ಆಶ್ಚರ್ಯ ಪಟ್ಟರು. ಸಮರ್ಥರ ಕುದುರೆ- ಒಂದಾನೊಂದು ದಿವಸ ಶ್ರೀ ಶಿವಾಜಿ ಮಹಾರಾ ಜರಿಗೆ ಯಾರೋ ಒಬ್ಬರು ಒಂದು ಅತ್ಯುತ್ತಮವಾದ ಕುದುರೆಯನ್ನು ಪ್ರೇಮ ಪೂ ರ್ವಕವಾದ ಕಾಣಿಕೆಯಾಗಿ ತಂದು ಕೊಟ್ಟರು, ಸಮರ್ಥರ ಮೇಲೆ ಮಹಾರಾಜ ರ ಅಪ್ರತಿಮಭಕ್ತಿಯಿದ್ದ ಕಾರಣ ಅವರು ತಮ್ಮ ಕಡೆಗೆ ಬಂದಂಥ ಉತ್ತಮ ವಸ್ತು ಗಳನ್ನು ಸಮರ್ಥರಿಗೆ ಅರ್ಪಣ ಮಾಡಲಿಕ್ಕೆ ಎಂದೂ ತತ್ತಿದ್ದಿಲ್ಲ, ಈ ಪರಿವಾ ರದಂತೆ ಮಹಾರಾಜರು ಆ ಕುದುರೆಯನ್ನು ಅದರ ಮೇಲಣ ಯಾವತ್ತೂ ಸಾಹಿ ವ್ಯ ಮತ್ತು ಅಲ೦ಕಾರ ಭೂಷಣ ಸಹಿತವಾಗಿ ಸಮರ್ಥರಿಗೆ ಅರ್ಪಣ ಮಾಡಿದರು. ಆ ಕುದುರೆಯನ್ನು ಸಮರ್ಥ ರು ನೋಡಿ ಆನಂದಬಟ್ಟು ಮೊತಾದಾರನಿಗೆ «ಎ ಲಾ, ಈ ಕುದುರೆಯ ಮೇಲಿನ ಎಲ್ಲಾ ಸಾಮಾನು ತೆಗೆದು ಬಿಡು, ಲಗಾಮು ನಿಹ ಇರಗೊಡಬೇಡ ” ಎಂದು ಅಪ್ಪಣೆ ಮಾಡಿದರು, ಆದರಂತೆ ಆ ಮೊತಾದಾರನು ಕುದುರೆಯ ಮೇಲಿನ ಯಾವತ್ತು ಸಾಮಾನುಗಳನ್ನು ಲಗಾಮು ಸಹಿತವಾಗಿ ತೆಗೆ ದುಬಿಡಲಾಗಿ, ಸಮರ್ಥರು ಗಪ್ಪನೆ ಹಾರಿ ಆ ಬತ್ತಲೆ ಕುದುರೆಯಮೇಲೆ ಕುಳಿತುಕೊ ಳ್ಳಲು, ಆ ಕುದುರೆಯು ನಾಲ್ಕೂ ದಿಕ್ಕಿಗೆ ಗಿವಿ ಗಿಮಿ ತಿರುಗಿ ಕೋಟೆಯ ಗೋಡೆ ಗಳನ್ನು ಹಾರಿ ಕೋಟೆಯ ಸುತ್ತಲು ಮೂರು ಸಾರೆ ಪ್ರದಕ್ಷಿಣ ಹಾಕಿ ದಾರಿ ಹಿ ಡಿದು ಭರದಾ೦ತವಾಗಿ ಓಡಿ ಹೋಯಿತು, ಉದ ವ, ಕಲ್ಯಾಣ ಮೊದಲಾದವರು ಕೈಯಲ್ಲಿ ನೀರಿನ ಸಾತ್ರೆಯನ್ನೂ ಸಕ್ಕರೆಯನ್ನೂ ಹಿಡುಕೊಂಡು ಆ ಕುದುರೆಯ ಬೆ ನ್ನು ಹತ್ತಿ ಬೇಕಾದಷ್ಟು ಓಡಿದರೂ ಆ ಕುದುರೆಯು ಮಾದಾಮಾಯವಾಯಿತು. ಮುಂದೆ ಸವರ್ಧರಿಗೆ ಬಹಳ ತೃಷೆಯಾದ್ದರಿಂದ ಅವರು ಕುದುರೆಯ ಮೇಲಿಂದಲೇ ಹಿಂದಿರುಗಿ ನೋಡಿ ಉದ್ಭವನು ದೂರಿಂದ ನೀರಿನ ಪಾತ್ರೆಯನ್ನೂ ಸಕ್ಕರಿಯ ನನ್ನಿ ಹಿಡಿದುಕೊಂಡು ಬರುವದನ್ನು ಕಂಡು ಆ ಸ್ಥಳದಲ್ಲಿ ಕುದುರೆಯನ್ನು ಕವೊ ತ್ತು ನಿಲ್ಲಿಸಲು ಉದ್ದವನು ಓಡುತ್ತಾ ಸಮರ್ಥರ ಒಳಿಗೆ ಒಂದು ಸಕ್ಕರೆಯನ್ನೂ ನೀ ರಿನ ಪಾತ್ರೆಯನ್ನೂ ಕೊಡಲು, ಅವರು ಅವುಗಳನ್ನು ಸೇವಿಸಿ ತಮ್ಮ ತೃಷೆಯನ್ನು ಶಾಂತ ಪಡಿಸಿಕೊಂಡು ಆನಂದದಿಂದ- L ಉವಾ! ಈ ಹೊತ್ತು ನನಗೆ ಒಹಳ ನೀರಡಿಕೆಯಾಗಿ ಕಸವಿಸಿಯಾಗಿತ್ತು, ಇಂಥ ಸಮಯಕ್ಕೆ ನೀನು ನನಗೆ ನೀರು ಕುಡಿ ಸಿ ಬಹಳ ಕಲ್ಯಾಣ ಮಾಡಿದೆ, ಆದ್ದರಿಂದ ನಿನಗೆ ಈ ಮೊತ್ತಿನಿಂದ ಶಿವ ಎಂಬ ಹೆಸರು ಕೊಟ್ಟಿರುತ್ತೇನೆ” ಎಂದು ಹೇಳಿದರು, ಆಗಿನಿಂದ ಉದ್ಭವನೆಂಬ ಶಿಷ್ಯನಿ ಗೆ ಶಿವ ಸ್ವಾಮಿಯೆಂಬ ಹೆಸರು ಬಂತು, ಇರಲಿ, ಸತುರ್ಥ ರು ಆ ಕುದುರೆಗೆ ರಾವು
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೬೫
ಗೋಚರ