ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ - -- - ವಾಲ್ಯೂಪಣ. ಕಡೆಗೆ ಬರುತ್ತಿದ್ದಾರೆ. ಅವರ ಸಂಗಡ ಎರಡು ಮೂರು ಪಲ್ಲಕ್ಕಿಗಳುಂಟು” ಎಂ ದು ಉತ್ತರ ಕೊಟ್ಟನು. ಅದನ್ನು ಕೇಳಿ ಸಮರ್ಥರು ನಕ್ಕು CCಒಳ್ಳೇದು, ಬರಲಿ” ಎಂದು ನುಡಿದರು ಇಷ್ಟರಲ್ಲಿ ಅವರೆಲ್ಲರು ಸಮರ್ಥರ ಸವಿತಕ್ಕೆ ಬಂದರು. ಆಗ ಮಹಾರಾಜರು ಎಲ್ಲರಿಗಿಂತಲು ಮುಂದೆ ಬಂದು ಸವ ರ್ಥರಿಗೆ ಸಾಷ್ಟಾಂಗ ನಮ ಸ್ಕಾರ ಮಾಡಿದರು, ಗಂಗಾಭಟ್ಟಜಿಯು ಸಹಾ ಸಾಷ್ಟಾಂಗ ನಮಸ್ಕಾರ ಮಾಡಿ ದನು ಸದಾಶಿವ ಶಾಸ್ತಿಯು ಸಮರ್ಥರಿಗೆ ನಮಸ್ಕಾರ ಮಾಡದೆ ಅವರ ಮುಂದೆ ಸುಮ್ಮನೆ ಬಂದು ನಿಂತುಕೊಂಡನು. ಆಗ ಸಮರ್ಥರು ತಾವೇ ಕೈ ಜೋಡಿಸಿ ಸ ದಾಶಿವ ಶಾಸ್ತ್ರಿಗೆ ನಮಸ್ಕಾರ ಮಾಡಿದರು. ಆಗ ಸದಾಶಿವ ಶಾಸ್ತ್ರೀಯು ಗರ್ವದಿಂ ದ-“ನಾವು ನಿಮ್ಮ ಸಂಗಡ ವಾದ ಮಾಡುವದಕ್ಕಾಗಿ ಬಂದಿದ್ದೇವೆ ನೀವು ನನ್ನ ನ ವಾದದಲ್ಲಿ ಸೋಲಿಸಿದ ತರುವಾಯ ನಾವು ನಿಮಗೆ ನಮಸ್ಕಾರ ಮಾಡುವೆವು. ಇಲ್ಲದೆ ಹೋದರೆ ನಾವು ನಿಮಗೆ ಆಶೀರ್ವಾದ ಮಾಡುವೆ?” ಎಂದು ನುಡಿದನು. ಅದನ್ನು ಕೇಳಿ ಸಮರ್ಥರು ನಕ್ಕು-LLನೀವು ಸಾಕ್ಷಾತ್ ಭೂದೇವರೇ ಇದ್ದಿರಿ. ನೀವು ನಮಸ್ಕಾರ ಮಾಡ ಬೇಕೆಂದು ನಮ್ಮ ಅಪೇಕ್ಷೆಯಿಲ್ಲ. ನೀವು ನನಗೆ ಆಶೀ ರ್ವಾದ ಮಾಡಿದರೆ ಸಾಕು ಎಂದು ಉತ್ತರ ಕೊಟ್ಟರು, ಅದಕ್ಕೆ ಸದಾಶಿವಶಾಸ್ತ್ರಿ ಯು –“ವಿದ್ಯತಿಕೆಯ ಪರೀಕ್ಷೆಯಾಗುವ ಮುಂಚೆ ನಾವೇನೂ ಮಾಡಲಾರೆವು? ಎಂದು ಹೇಳಿದನು, ಅದಕ್ಕೆ ಸಮರ್ಥ ರು “ ನಮ್ಮ ಪರೀಕ್ಷೆಯು ಯಾತರದ.? ನಾ ವೇನು ಪಂಡಿತರೂ ಅಲ್ಲ, ವೈದಿಕರೂ ಅಲ್ಲ, ವನದಲ್ಲಿ ವನಚರರಂತೆ ಇದ್ದು ರಾಮ ನ ದಾಸರೆಂದು ಅಂದುಕೊಳ್ಳುತ್ತೇವೆ, ರಾಮನ ವಿಭೂತಿಗಳು ಯಾವ ರೂಪದಿಂದ ಯಾವ ಸ್ಥಳದಲ್ಲಿರುತ್ತಾವೆಂಬುವದು ತಿಳಿಯುವದಿಲ್ಲ, ಆದ್ದರಿಂದ ನೀವು ಸುಮ್ಮನೇ ದುರಾಗ್ರಹಕ್ಕೆ ಬೀಳಬೇಡರಿ?” ಎಂದು ನುಡಿದರು. ಅದನ್ನು ಕೇಳಿ ಸದಾಶಿವಶಾ ಯು ಪುನಃ ಸೊಕ್ಕಿನಿಂದ- “ನಾವು ನಿಮ್ಮ ಹತ್ರ ಬ್ರಹ್ಮ ಜ್ಞಾನ ಕಲಿಯಲಿಕ್ಕೆ ಬಂದಿರುವದಿಲ್ಲ. ಇವೆಲ್ಲ ಮಾತುಗಳನ್ನು ಭೋಳೇ ಪ್ರಾಣಿಗಳಾದ ಗಂಡಸರಿಗೂ ಹೆಂಗಸರಿಗೂ ವಂಶ ಹೇಳಿರಿ ಎಂದು ಹೇಳಿದನು. ಸಮರ್ಥರು ಎಷ್ಟು ಸಮಾ ಧಾನ ಹೇಳಿದಾಗ್ಯೂ ಸದಾಶಿವ ಶಾಸ್ತಿಯು ತನ್ನ ದುರಾಗ್ರಹವನು ಬಿಡಲಿಲ್ಲ, ಆಗ ಸಮರ್ಥರು ಕಲ್ಯಾಣನ ಕಡೆಗೆ ಮೋರೇ ತಿರುವಿ-“ಏನು ಕಲ್ಯಾಣ ಶಾಸ್ತ್ರಿಗಳ ಅಂಬೋಣವೇನದೆ?” ಎಂದು ಕೇಳಿದರು ಅದಕ್ಕೆ ಕಲ್ಯಾಣನು- ಸ್ವಾಮಿ ಶಾಸ್ತ್ರಿಗಳು ಸತ್ಪಾತ್ರರಿದ್ದಾರೆ, ಅವರ ಮೇಲೆ ಕೃಪೆ ಮಾಡಬೇಕು” ಎಂದು ಬಿನ್ನ ವಿಸಿದನು, ಸದಾಶಿವ ಶಸ್ತಿಯು ತಾನು ಬಂದಾಗ್ಯೂ ಸಮರ್ಥರು ಕೂತ ಸ್ಥಳವ ನ್ನು ಬಿಟ್ಟು ಏಳದೆ, ತಮ್ಮ ಯೋಗದಂಡಕ್ಕೆ ಆತುಕೊಂಡು ಕುಳಿತು, ಸವಿ ಮಾತಾಡು ತಿದ್ದ ದುಂದ ತನ್ನ ಅಪಮಾನವಾಯಿ:ತೆಂದು ತಿಳಿದು ಸಿಟ್ಟಿನಿಂದ ಮೋರೆಯನ್ನು ಕಂ ಪಗೆ ಮಾಡಿ ನಿಂತುಕೊಂಡಿದ್ದನು. ಆಗ ಸಮರ್ಥರು ಕಲ್ಯಾಣನ ಕಡೆಗೆ ನೋ