ಶ್ರೀ ರಾಮಚಸಸ್ವಾಮಿಗಳ ಚರಿತ್ರ, “ನನ್ನ ಸಂಗಡ ೨ ಸಾವಿರ ಮಂದಿ ಸ್ವಾರರು ಇರುತ್ತಾರೆ, ಆದ್ದರಿಂದ ಆ ವರೆಲ್ಲರ ತೊಂದರೆಯನ್ನು ನೀವು ಹಚ್ಚಿಕೊಳ್ಳಬೇಡಿರಿ, ನಾವು ಅದೇ ಹುಂಡಿ ಭೂ ಜನಕ್ಕೆ ಕುಡುತ್ತೇವೆ, ಉಳಿದವರಿಗಿ ತಾವು ಪ್ರಸಾದವನ್ನು ಕೊಟ್ಟರೆ ಸಾಕು ಆ ಪ್ರಸಾದವನ್ನು ಅವರೊಳಗೆ ಹಂಚಿಕೊಡುತ್ತೇವೆ' ಎಂದು ವಿನಯದಿಂದ ಈ ಳಿದರು, ಅದಕ್ಕೆ ಶ್ರೇಷ್ಠರು ರಘುಪತಿಯ ಪ್ರಸಾದವು ಎಲ್ಲರಿಗೂ ಸಜ್ ರಲ್ಲಿ ಯೇ ದೊರಕುವದು, ನೀವು ಯಾವದಕ್ಕೂ ಸಂಕೋಚ ಮಾಡಿಕೊಳ್ಳಬಾರದು. ಶ್ರೀ ರಘುಪತಿಯು ಸಮರ್ಥ ನಿರುತ್ತಾನೆ?” ಎಂದು ನುಡಿದರು, ಅದನ್ನು ಕೇಳಿ ಮಹಾರಾಜರು “ಮಹದಾಜ್ಞೆ” ಎಂದು ಹೇಳಿ ತನ್ನ ಕೂಡ ಬಂದಂಥ ಯುವ ಶು, ಸರರನ್ನು ಕೂಡಿಕೊಂಡು ಭೋಜನಕ್ಕೆ ಕುಳಿತರು ಅವರೆಲ್ಲರದೂ ಯು ಥಾಸ್ಥಿತವಾಗಿ ಭೋಜನವಾಯಿತು ಸಹ ಸಜ್ ಭೋಜನವನ್ನು ಮಾಡದಿರುವ ಲಷ್ಕರಿ ಸಿಪಾಯರಿಗಾಗಿ ಶ್ರೇಷ್ಠರು ತಮ್ಮೊಬ್ಬ ಶಿಷ್ಯನ ಸಂಗಡ ಪಾಕಸಾಹಿತ್ಯದ ನ್ನು ಕಳಿಸಿದರು, ಆ ಶಿಷ್ಯನು ಆ ಯಾವತ್ತರಿಗೂ ಪಾಕಸ• ಹಿತ್ಯವನ್ನು ಮುಟ್ಟಿಸಿ ಒಬ್ಬನಿಗೆ ಸಾಕಾಗುವಷ್ಟು ಪಾಕ ಸಾಹಿತ್ಯವನ್ನು ತಿರುಗಿ ತಂದನು! ಅದರತ ಶಿಷ್ಯನು ಲಷ್ಕರದೊಳಗಿನ ಯಾವತ್ತು ಕುದುರೆಗಳಿಗೆ ಧಾನ್ಯ ಮೇವಗಳನ್ನು ಒ ಯು ಮುಟ್ಟಿಸಿ ತಾನು ಒಯಷ್ಟೇ ತಿರುಗಿ ತಂದನು! ಇದನ್ನು ಮಹಾರಾಜರು ನೋಡಿ ಸಮರ್ಥರಷ್ಟೇ ಶ್ರೇಷ್ಠರದು ಸಹಾ ಸಾಮರ್ಥ್ಯವುಂಟೆಂದು ಮನಸ್ಸಿನಲ್ಲಿ ನಿಶ್ಚಯವಾಗಿ ತಿಳಿದುಕೊಂಡು ಆ ದಿನ ರಾತ್ರಿ ಶ್ರೀರಘುಪತಿಗೆ ಪಂಚರತಿಯ ದನಂತರ “ಸ್ವಾಮೀ! ಈ ದಿನ ವಿಶೇಷವಾದ ಚಮತ್ಕಾರವನ್ನು ನೋಡಿದೆನು ಎಂದು ಉದ್ದಾರ ಹರರಿಸಿದರು, ಆಗ ಶ್ರೇಷ್ಠರು-“ಒಬ್ಬರನ್ನು ಇನ್ನೂ ಬ್ಬರಿಗೆ ಸರಿನೋಡುವದು ಸಮವಲ್ಲ ಎಂದು ನುಡಿದರು ಅದನ್ನು ಕೇಳಿ ಮಹಾರಾಜರು ಮನಸ್ಸಿನಲ್ಲಿ ಪಶ್ಚಾತ್ತಾಪ ಪಟ್ಟು “ಸ್ವಾಮಿ ತಮ್ಮ ಮತ್ತು ಸಮರ್ಥರ ಪರೀಕ್ಷೆ ಮಾಡಲಿಕ್ಕೆ ನಾನೆಷ್ಟರವನು! ಆದರೂ ಅಜ್ಞಾನದಿಂದ ಒಮ್ಮೊಮ್ಮೆ ಮನಸ್ಸಿನಲ್ಲಿ ವಿಕಲ್ಪವುಂಟಾಗುತ್ತದೆ, ಆದನ್ನು ತಾವು ಕ್ಷಮಿಸಬೇಕು.” ಎಂದು ಬೇಡಿಕೊಂಡ ರು, ಅದಕ್ಕೆ ಶ್ರೇಷ್ಠರು-ತಂದೇ! ಶ್ರೀರಘುಪತಿಯ ಅಪೇಕ್ಷೆಗನುಸರಿಸಿ ಯಾವ ಇು ಸಂಗತಿಗಳು ವರ್ತಿಸುತ್ತವೆ, ಆದರೆ ಅವನಲ್ಲಿ ನಿಸೀವಭಕ್ತಿಯನ್ನಿಟ್ಟು ನಿಸೀ ಪುದಾಸನಾಗಿರುವವನಿಗೆ ಯಾವ ವಿಕಲ್ಪಗಳ ಉ೦ಟಾಗುವದಿಲ್ಲ ಎಂದು ಹೇಳಿ ದರು, ಅದನ್ನು ಕೇಳಿ ಮಹಾರಾಜರು-ಸ್ವಾಮೀt ನಿಸ್ಸಮದಾಸನಾಗುವದು ಹಾ nಳ್ಳಿ' ಎಂದು ವಿಚಾರಿಸಿದರು, ಅದಕ್ಕೆ ಶ್ರೇಷ್ಠರು- ಇದನ್ನು ನಿಮಗೆ ನಾರಾಯ ಣ ಬುವಾನವರು (ಸಮರ್ಥರು) ತಿಳಿಸುವರು' ಎಂದು ಉತ್ತರ ಕೊಟ್ಟರು, ಆಗಲಾ ಮಹಾರಾಜರು ಬಹು ವಿನಯದಿಂದ-“ಸ್ವಾಮೀ! ಈ ಪ್ರಕಾರದ ಆಜ್ಞೆಯನ್ನು
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೮೩
ಗೋಚರ