ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಮದಾಸ ಸ್ವಾಮೀಗಳ ಚರಿತ್ರೆ, ವಾಸುದೇವ ಗಾವಿಯು “ಮಯಂದ” ಎಂದು ಉತ್ತರ ಕೊಟ್ಟನು. ಆಗ ಸಮರ್ಥರು ಅವನಿಗ-“ ನಾಯಿಯು ಸತ್ಯವೋ? ವಿಥ್ಯವೋ?• ಎಂದು Jುಗಿ ಕೇಳಿದರು, ಅದಕ್ಕೆ ಅವನು • ಮಿಥ್ಯವು” ಎಂತಲೇ ತಿರುಗಿ ನುಡಿದರು. ಆ ಬಳಿಕ ಸಮರ್ಥರು ಗಾರುಡಿಗನಿಗೆ ಆ ಹಾವನ್ನು ತನ್ನ ಬಳಿಗೆ ತೆಗೆದುಕೊಂಡು ಬಾ ಎಂದು ಸೂಚಿಸಿ ಅದರಂತೆ ಅವನು ತರಲಾಗಿ ಅದನ್ನು ಕೈಯಿಂದ ಹಿಡಿ ಎಂದು ವಾಸುದೇವ ಗೋಸಾವಿಗೆ ಹೇಳಿದರು, ಅದರಂತೆ ವಾಸುದೇವ ಗೋಸಾವಿಯು ಆ ಹಾವಿನ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ತನ್ನ ಮುಷ್ಟಿಯಿಂದ ಹಿಡಿದನು. ಆಗ ಆ ಹಾವು ತನ್ನ ಬಲದಿಂದ ವಾಸುದೇವ ಗೋಸಾವಿಯನ್ನು ಗಟ್ಟಿಯಾಗಿ ಸುತ್ತಿಕೊಂಡಿತು, ಅದರಿಂದ ವಾಸುದೇವ ಗೂಸವಿಯು ಬಹಳ ಕಸವಿಸಿದರಹ ಇದನು, ಅದನ್ನು ನೋಡಿ ಸಮರ್ಥರು ವಾಸುದೇವ ಗೋಸಾವಿಗೆ- ಎಲೋ ಅದರ ಬಾಯಿ ಬಿಡು ?” ಎಂದು ಹೇಳಿದರು, ಅದಕ್ಕೆ ವಾಸುದೇವ ಗೂಸಾನಿಯು * ಸ್ವಾಮೀ, ಹಾಗೆ ಮಾಡಿದರೆ ಅದು ನನ್ನನ್ನು ಕಚ್ಚಲಿಕ್ಕಿಲ್ಲವೇ??” ಎಂದು ಕೇಳಿ ದನು, ಆಗ ಸಮರ್ಥ ರು-* ಅಪ್ಪಾ ವಾಸುದೇವಾ ಮಾಯೆಯು ಮಿಥ್ಯವಾಗಿ ದೃಳಿ ನಿನಗೆ ಭೀತಿಯಾಕೆ ? ಎಂದು ಸಮರ್ಥ ಗು ಪರಿಹಾಸ್ಯ ಮಾಡಿದರು, ಅದ « ವಾಸುದೇವ ಗೋಸಾವಿಯು- ಸ್ವಾಮಿ, ಮಾಯೆಯು ಮಿಧ್ಯವಾಗಿದ್ದರೂ ನನ್ನ ವೇದನೆಯು ಮಾತ್ರ ಸತ್ಯವಾಗಿರುತ್ತದೆ ?” ಎಂದು ನುಡಿದು ಬಹಳ ದುಃಖವ ನ್ನು ಪ್ರದರ್ಶಿಸಿದನು, ಆಗ ಸಮರ್ಥರು ಆ ಗಾರುಡಿಗನಿಗೆ ಆ ಹಾವನ್ನು ಪುನು ತೊಗಲು ಮಾಡಿ ತೋರಿಸೆಂದು ಅಪ್ಪಣೆ ಮಾಡಿದರು, ಆ ಒಳಿಕ ಗಾರುಡಿಗನು ಗೂಖಾವಿಯ ಕೈಯ ಮೇಲೆ ಧೋತರದ ಮುಸಕು ಹಾಕಿ ತಿರುಗಿ ಅದನ್ನು ತೂಗ ಲು ಮಾಡಿ ಅಲ್ಲಿ ನೆರೆದ ಎಲ್ಲ ಜನರ ಮುಂದೆ ತೋರಿಸಿದನು, ಅದನ್ನು ನೋಡಿ ಸಮರ್ಥರು ತಿರುಗಿ ವಾಸುದೇವ ಗಸಾವಿಗ-ಮಾಯಾ ಸತ್ಯವೋ ಮಿಥ್ಯವೋ ತಗಾದರೂ ಹೇಳು ” ಎಂದು ಕೇಳಿದರು, ಆಗ ವಾಸುದೇವ ಗೋಪಿಯು ತನ್ನು ಎರಡೂ ಕೈ ಜೋಡಿಸಿ-“ ಸ್ವಾಮಿ, ಅದು ಮಿಥ್ಯವೆಂಬುವದು ನಿಜವಾದ ದ್ದು, ಆದರೆ ಯಾವದೂ ಸದ್ದು ರುವಿಗೆ ಸಿಕ್ಕಿದ್ದಲ್ಲ ಎಂದು ಲೀನತೆಯಿಂದ ಉತ್ತರ ಕೊಟ್ಟನು. ಅದನ್ನು ಕೇಳಿ ಸಮರ್ಥರು' ( ಈಗಾದರೂ ನಿನ್ನ ಮನಸ್ಸಿಗೆ ಒಡಂಬಡಿಕೆಯಾಯಿತೇ ? " ಎಂದು ಪ್ರಶ್ನೆ ಮಾಡಿದರು, ಅದಕ್ಕೆ ' ಆಯಿತು ಸಾವಿ” ಎಂದು ಉತ್ತರ ಕೊಟ್ಟನು, ಈ ಸಂಗತಿಯು ತಕ ೧೫೪೪ ರಲ್ಲಿ ನwಸಿತು. ಖಂಡೋಬನ ದರ್ಶನ~ ಒಂದಾನೊಂದು ಸಾರಿ ಸಮರ್ಥರ ಸ್ವಾರಿಯು ಅಂಚವಡದ ರಾಮದೇವರ ದರ್ಶನಕ್ಕೆ ಹೋಗಿ ಜೆರಿಯ ಮೇಲಿಂದ ಸರಳಿಗೆ