ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಂದು 'ಸ ಸ್ವಾಮಿಗಳ ಚರಿತ್ರ ಯಾತ್ರೆಯನ್ನು ಮುಗಿಸಿಕೊಂಡು ತಮ್ಮ ಊರಿಗೆ ತಿರುಗಿ ಹೋಗುವಾಗ್ಗೆ ಅವರಲ್ಲಿ ರು ಮಣಹುಲಿಯ ಸಂಗಮದ ತೀರದಲ್ಲಿ ಇಳಿದುಕೊಂಡು ಸಂಗವದೊಳಗ ಾನವ ನ್ನು ತೀರಿಸಿಕೊಂಡು ಅಲ್ಲಿ ನದಿಯ ತೀರಕ್ಕೆ ದಟ್ಟವಾಗಿ ಬೆಳೆದಿದ್ದ ಗಿಡಗಳ ನಳಲಿನ ಲ್ಲಿ ಅಡಗಿಯನ್ನು ಮಾಡಿಕೊಳ್ಳುತ್ತ ಕುಳಿತಿರಲು ಅವರ ಮನಸ್ಸಿನೊಳಗೆ ಒಮ್ಮಿ೦ ದೊಮ್ಮೆ “ ನಾವು ಹ್ಯಾಗೂ ಇಲ್ಲಿಯತನಕ ಬಂದಿದ್ದೇವೆ, ಅಲ್ಲಿಗೆ ಸಜ್ಜನಗದವ ಸವಿಸವಿರುವದು, ಆದ್ದರಿಂದ ಮಧ್ಯಾಹ್ನಕ್ಕೆ ಹೋಗಿ ರಾಮದಾಸರ ದರ್ಶನ ತೆಗೆದುಕೊಂಡು ಏನಾದರೂ ಚಮತ್ಕಾರಗಳು ದೃಷ್ಟಿಗೆ ಬಿದ್ದರೆ ಅವುಗಳನ್ನು ನೋ ಡಿಕೊಂಡು ತೀರಿಗೆ ಬಂದರಾಯಿತು ಬೇಕಾಗಿಯೇ ಇಲ್ಲಿಗೆ ಬರಲಿಕ್ಕೆ `ನಮ್ಮ ಮಣನೀಬುವನವರು ನಮಗೆ ಅಪ್ಪಣತಿ ಕೊಡುವದಿಲ್ಲ. ? ಎಂಬ ವಿಚಾರಗಳು ಬe ದವ, ಸಮರ್ಥರು ಅಂತರ್ಜ್ಞಾನದಿ೦ದ ಇದನ್ನೆಲ್ಲ ಅರಿತು ತಾವು ಪರಳಿಯೊಳಗೆ ಇದ್ದಾಗ್ಗೆ ಅದೇ ದಿವಸ ಬೆಳಿಗ್ಗೆ ಕಲ್ಯಾಣನ ಮುಂದೆ-“ ಕಲ್ಯಾಣಾ ! ಈ ಹೊ ತ್ತು ನಾವು ಸ್ಥಾನಕ್ಕಾಗಿ ಮಾಹುಲಿಯ ಸಂಗಮಕ್ಕೆ ಹೋಗೋಣ” ಎಂದು ಹೇಳಿದರು, ಆ ಮೇರೆಗೆ ಕಲ್ಯಾಣನು ಯಾವತ್ತು ಸಿದ್ಧತೆಯನ್ನು ಮಾಡಲಾಗಿ ಸಮರ್ಥ ರು ಕಲ್ಯಾಣನೊಂದಿಗೆ ಮಾಹುಲಿಗೆ ಬಂದು ತಲ್ಪಿ ಗಂಗೆಯಲ್ಲಿಳಿದು ಸ್ನಾನ ಮಾಡಲಾರಂಭಿಸಿದರು, ಸಮರ್ಥರು ತಮ್ಮ ಸ್ಥಾನವು ಇನ್ನೂ ನಡೆದಿರುವಾಗ ನಡುವೆ ಮೈಯೆಲ್ಲಾ ಒದ್ದಿಯಾಗಿರುವಾಗ ಕಲಾಣನನ್ನು ಕರೆದು-« ಕಲ್ಯಾ ಣಾ ! ನನಗೆ ಹಸಿವೆ ಬಹಳಾಗಿರುತ್ತದೆ, ಏನಾದರೂ ತಿನ್ನಲಿಕ್ಕೆ ಸಿಕ್ಕೀತೇ? ಎಂದು ಕೇಳಿದರು. ಆಗ ಕಲ್ಯಾಣನು “ಒಂದಿಷ್ಟು ತಂಗಳವಾದ ಥಾಲೀಪೆಟ್ಟು ಉಂಟು” ಎಂದು ಉತ್ತರ ಕೊಟ್ಟನು. ಅದಕ್ಕೆ ಸಮರ್ಥರು “ ಒಳ್ಳೇದು, ಅದ ತೆಗೆದುಕೊಂಡು ಬಾ” ಎಂದು ಕಲ್ಯಾಣನಿಗೆ ಅಪ್ಪಣತೆಯನ್ನು ಮಾಡಿದರು. ಆ ಕೂಡಲೇ ಕಾಲ್ಕಾಣನು ತನ್ನ ಜೋಳಿಗೆಯೊಳಗಿಂದ ತೆಗೆದುಕೊಂಡು ಸವ.ರ್ಥ ರಿಗೆ ಒಯ್ದು ಕೊಟ್ಟನು, ಆಗ ಸಮರ್ಥರು ಆ ಥಾಲ್ ಪೆಟ್ಟನ್ನು ತಮ್ಮ ಎಡಗೆ ಯೊಳಗೆ ಹಿಡಿದುಕೊಂಡು ಬಲಗೈಯಿಂದ ಅದನ್ನು ಸ್ವಲ್ಪ ಸ್ವಲ್ಪ ಮುರಿದು ಒಂ 'ದೊಂದೇ ತುತ್ತು ಬಾಯೊಳಗೆ ಹಾಕಿಕೊಳ್ಳಹತ್ತಿದರು, ಮನೀಬುವಿನ ಶಿಷ್ಯರ ಲ್ಲರು ಸಮರ್ಥರ ಸವಿಾಪದಲ್ಲಿ ನಿಂತುಕೊಂಡು ಈ ರೂವತ್ತೂ ಕೃತ್ಯವನ್ನು ನೋಡಿ “ದರು, ಅವರು ತಮ್ಮ ತಮ್ಮೊಳಗೆ “ ಇವನಾರಿರಬಹುದು ? ಇವನ ಮಸ್ತಕದಲ್ಲಿ ಜಟಾಭಾವ ಮೈಯಲ್ಲಿ ಭಗವೀ ವಸ್ತ್ರಗಳೂ ಇರುತ್ತಿದ್ದು ಇವನು ಹುಚ್ಚನಂತ ನದಿಯಲ್ಲಿ ನಿಂತುಕೊಂಡು ಥಾಲೀ ಪೆಟ್ಟನ್ನು ತಿನ್ನುತ್ತಲಿದ್ದಾನೆ ! ಸ್ನಾನದ ಕಾಲಕ್ಕೆ ಭಗವಂತನ ಧ್ಯಾನ ಮಾಡುವದು ಬಿಟ್ಟು ಹೊಟ್ಟೆಯ ಧ್ಯಾನ ಮಾಡುತ್ತಲಿರುವ ವಿಚಿತ್ರ ಪುರುಷನು ಯಾವನಿರಬಹುದು ?” ಎಂದು ಪರಿಹಾಸ್ಯ ಮಾಡುತ್ತ ನಿಂತ