ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೇಳಿ ವಾಗ್ನತಣ, ಕೇಳಿದನು, ಅದಕ್ಕೆ ಆ ಆಕಳದ ಯಜಮಾನತಿಯು-4 ಅಪ್ಪಾ! ನಾನು ನನ್ನ ಆಕಳವು ಸ್ವತಂದು ಅಳುತ್ತ ಕುಳಿತಿರುತ್ತೇನೆ, ಹೀಗಿರಲು ನೀನು ಆಕಳದ ಹಾ ಲು ಹಿಂಡಿಕೊಳ್ಳಲಿಕ್ಕೆ ಬಂದಿರುತ್ತೀ? ಅಂದವೇಳೆ ನಗದೆ ಇನ್ನೇನು ಮಾಡಲಿ { # ಎಂದಳು. ಆಗ ಕಲ್ಯಾಣನು ಅವಳಿಗೆ-“ ಶಾಯಿ ! ನೀನು ಬೇಕಾದಷ್ಟು ನಗು. ನನಗೆ ನನ್ನ ಸ್ವಾಮಿಯ ಆಜ್ಞೆಯೇ ಪ್ರಮಾಣವು, ಅದರಂತೆ ನಾನು ಮಾಡತಕ್ಕೆ ವನೇ ' ಎಂದು ಹೇಳಿ ಆ ಗೋವನ್ನುದ್ದೇಶಿಸಿ- ಅಕ್ಕಾ! ಬೇಗನೇ ಏಳು, ಸ್ವಾ ಮಿಗಳಿಗೆ ತಡವಾಗುವದು" ಎಂದು ನುಡಿದನು. ಅದನ್ನು ಕೇಳಿ ಆ ಆಕಳವು ಚಟ ಕನೆ ಎದ್ದು ನಿಂತಿತು, ಆಗ ಕಲ್ಯಾಣನು ತನ್ನ ಪಾತ್ರೆಯ ತುಂಬ ಹಾಲನ್ನು ತೆಗೆ ದುಕೊಂಡು ಸ್ವಾಮಿಗಳ ಕಡೆಗೆ ಹೋಗುವದಕ್ಕೆ ಹೊರಟನು. ಆ ಆಕಳವು ಸಹ ಅವನ ಬೆನ್ನ ಹತ್ತಿತು, ಕಲ್ಯಾಣನು ಆ ಹಾಲು ಒಯ್ದು ಸವರ್ಧರಿಗೆ ಕೊಟ್ಟನು. ಆಗ ಸಮರ್ಥರು ಆ ಹಾಲು ಕುಡಿದು, ಅದರಿಂದ ಅವರ ಬಿಕ್ಕು ನಿಂತುಹೋಯಿ ತು, ಇಷ್ಟರಲ್ಲಿ ಆಕಳದ ಸ್ವಾಮಿನಿಯು ಸಮರ್ಥರೆಡೆಗೆ ಬಂದು ಅವರ ಪಾದಗಳ ನ್ನು ಗಟ್ಟಿಯಾಗಿ ಹಿಡಿದು, ಅವರನ್ನು ಬಹಳವಾಗಿ ಕೊ೦ಡಾಡಿ ಈ ಸ್ವಾಮಿ ಕ್ಯಾ ಗಾದರೂ ಮಾಡಿ ಈ ಆಕಳವನ್ನು ನನ್ನ ಮನೆಯತನಕ ತಂದು ಕಟ್ಟಿಕೊಟ್ಟು ಹೋ ಗಲಿಕ್ಕೆ ನಿಮ್ಮ ಶಿಷ್ಟರಿಗೆ ಅಪ್ಪಣತೆಯನ್ನು ಮಾಡಬೇಕು ” ಎಂದು ಹೇಳಿಕೊಂಡ ಕು, ಆಗ ಸಮರ್ಥರು ಆಕಳದೆ ಸವಿಾಪಕ್ಕೆ ಹೋಗಿ ಅದರ ಬೆನ್ನ ಮೇಲೆ ಕೈಯಾ ಡಿಸಿ- ತಂಗೀ, ಹಟವನ್ನು ಬಿಟ್ಟು ಬಿಡು, ನಿನ್ನ ಸ್ವಾಮಿಯು ಬ್ರಾಹ್ಮಣನಿರುತ್ತಾ , ಸಭ್ಯಳಾಗಿ ಸುಮ್ಮನೇ ನಿನ್ನ ಮನೆಗೆ ಹೊರಟುಹೋಗು” ಎಂದು ಅದಕ್ಕೆ ಅಪ್ಪಣ ಮಾಡಿದರು, ಆ ಕೂಡಲೇ ಆಕಳವು ಆ ಬ್ರಾಹ್ಮಣ ಸೀಯ ಬೆನ್ನ ಹತ್ತಿ ತನ್ನ ಮನೆಗೆ ಹೊರಟುಹೋಯಿತು. ಈ ಯಾವತ್ತು ಲೀಲೆಯನ್ನು ನೀಬು ವಾನ ತಿಷ್ಠರು ಆದಿಯಿಂದ ಅಂತ್ಯದವರೆಗೆ ಇಕ್ಕಿಸಿ ತಾವು ಸಮರ್ಥರನ್ನುದ್ದೇಶಿಸಿ ಗಖಡಿದ ಪರಿಹಾಸ್ಯಕ್ಕಾಗಿ ಪಶ್ಚಾತ್ತಾಪಪಟ್ಟು ಸಮರ್ಥರಲ್ಲಿ ಭಕ್ತಿಯುಳ್ಳವರಾಗಿ ಸಮರ್ಥರ ಚರಣಗಳನ್ನು ಗಟ್ಟಿಯಾಗಿ ಹಿಡಿದರು, ಅವರನ್ನು ನೋಡಿ ಸಮರ್ಥರು ನಕ್ಕು-ಆ ನಾವು ಯಾವ ಚಮತ್ಕಾರಗಳನ್ನು ಮಾಡಬಲ್ಲೆವು ನಾವು ಹೀಗೇ ಹುಚ್ಚರಾಗಿ ಅಡ್ಡಾಡುತ್ತಿರುವದು ನಿಮಗೂ ನಿಮ್ಮ ಮನೀಬುವಾನಿಗೂ ಕಡಿ ಯೇ ಗೊತ್ತುoಟು ” ಎಂದು ಹೇಳಿದರು, ಆಗ ನೀಬುವಾನ ಶಿಷ್ಯರು ತಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಸಮರ್ಥ ರಿಗೆ ಬಹಳ ಪ್ರಕಾರವಾಗಿ ಹೇಳಿಕೊ೦ ಡರು, ಆಮೇಲೆ ಸವರ್ಥರು ಅವರನ್ನು ಸಮಾಧಾನ ಮಾಡಿ ಮೇಲಕ್ಕೆ ಎಬ್ಬಿಸಿ ತನ್ನ ಸಂಗಡ ಸರಳಿಗೆ ಬಂದು ನಾಲ್ಕು ದಿವಸ ಇದ್ದು ಕೊಂಡು ಹೋಗಲಿಕ್ಕೆ ಹೇ ಆದರು ಆಗ ಅವರೆಲ್ಲರು ಇಲ್ಲಿ ಪಾಕಿ ಸಿದ್ಧವಾಗಿದೆ, ಆದ್ದರಿಂದ ತಾವು