ಪುಟ:ಸಂತಾಪಕ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨

ಕರ್ಣಾಟಕ ಚಂದ್ರಿಕೆ.


ಕೊಡಲಿಲ್ಲವಾದರೂ ಅವಳ ಭಾವವು ಸಂಪೂರ್ಣವಾದ ಸಮ್ಮತಿಯನ್ನು
ಸೂಚಿಸಿತು. ಕಮಲಾಕರದತ್ತನು, " ಕುಮಾರಿ ! ಆ ಯುವಕನು ನನ್ನ
ಮಿತ್ರನಾದ ವಿನಯಚಂದ್ರನ ಮಗ. ಸೌಂದರ್ಯಶಾಲಿನಿಯಾಗಿಯೂ,
ಗುಣವಂತನಾಗಿಯೂ ಇರುವನು. ಅವನ ಹೆಸರು ಕುಮುದಿನೀಚ೦ದ್ರ.
ಇಂತಹ ಅನುರೂಪನಾದ ವರನು ನಿನಗೆ ಮತ್ತೆಲ್ಲಿಯೂ ದೊರೆಯುವುದು
ಅಸಂಭವ. ಈಗೇನು ಹೇಳುವೆ ? " ಎಂದು ಕೇಳಿದನು.
ಕುಮಾರಿಯು, " ಜನಕನೇ ! ನಿನ್ನ ಸಮ್ಮತಿಯೇ ನನಗೆ ಮಂಗಳ
ಕರವು " ಎಂದುತ್ತರವನ್ನಿತ್ತಳು.
ಆಗ ಪಾಟಲಿಕೆಯು ಬಂದು ಮಧ್ಯಾಹ್ನವಾಯಿತೆಂದು ತಿಳಿಸಲು
ದತ್ತನು ಕುಮಾರಿಯನ್ನು ಒಳಕ್ಕೆ ಕಳುಹಿಸಿ ತಾನು ವಿಲಾಸಭವನಾಭಿ
ಮುಖನಾಗಿ ಹೊರಟುಹೋದನು.

ಐದನೆಯ ಪರಿಚ್ಛೇದ.

ಮಲಕುಮಾರಿಯಂತೂ ವರನನ್ನು ಒಪ್ಪಿದಳು. ವರನೂ ಕುಮಾರಿ
ಯನ್ನು ಒಪ್ಪಿದನೆಂದು ನಾವು ಮತ್ತೆ ತಿಳಿಸಬೇಕೆ ? ಕಮಲಾಕರದತ್ತನ
ಕಿರುಮನೆಯಲ್ಲಿ ಈರ್ವರ ದೃಷ್ಟಿಯೂ ಎವೆಯಿಕ್ಕುವಷ್ಟು ಹೊತ್ತು ಮಿಳಿತ
ವಾಗಿ ಎಂತಹ ಅದ್ಭುತವನ್ನು ನಡೆಯಿಸಿರುವುದೆಂಬುದನ್ನು ಎಲ್ಲರೂ
ಚೆನ್ನಾಗಿಬಲ್ಲರು. ಪ್ರಕೃತದಲ್ಲಿ ಈರ್ವರ ವಿವಾಹವೂ ಒಂದು ಬಗೆಯಾಗಿ
ನಿಶ್ಚಿತವಾದಂತೆಯೇ ಸರಿ. ಪಾಠಕಮಹಾಶಯರೇ ! ಈಗ ನೀವು ಆ
ಮಹೋತ್ಸವವನ್ನು ನೋಡಿ ಸಂತೋಷಪಡಬೇಕೆಂದೆಳಸಿರುವಿರಲ್ಲವೆ ?
ಆಃ, ಪರೋಪಕಾರ ಪಾರೀಣರಾದ ನೀವು ಈ ಉತ್ಸವದಲ್ಲಿ ಆಸಕ್ತರಾಗಿ
ಕುಳಿತುಬಿಟ್ಟರೆ ನಮ್ಮ ಪೂರ್ವಪರಿಚಿತನಾದ ಪಥಿಕನ ಪಾಡೇನು ? ಅವನ
ಸ್ಥಿತಿಯನ್ನು ಒಂದುಬಾರಿಯಾದರೂ ವಿಚಾರಿಸಬೇಡವೆ ? ಆ ಘಾತುಕರು
ಸಹಾಯಶೂನ್ಯವಾದ ಆ ಅಡವಿಯಲ್ಲಿ ಅವನನ್ನು ನಿಷ್ಕರುಣರಾಗಿ ಮರಕ್ಕೆ
ಕಟ್ಟಿ ಹೊರಟುಹೋದರಲ್ಲಾ ! ಅಯ್ಯೋ ಪಾಪ ! ಅಲ್ಲಿಗೆ ಬನ್ನಿ. ಅವನ
ಸ್ಥಿತಿಯೇನಾಗಿರುವುದೋ ನೋಡೋಣ.