ಪುಟ:ಸಂತಾಪಕ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.

೩೭


ಸಂಕಲ್ಪವನ್ನು ಈಡೇರಿಸಿಕೊಳ್ಳಬೇಕೆಂದು ಮನಸುಂಟಾಯಿತು. ಆದರೆ
ಅವಳನ್ನು ಯಾರೂ ಕಾಣದಂತೆ ಅಪಹರಿಸಿಕೊಂಡು ಹೋಗುವುದಕ್ಕೆ
ಅವಕಾಶದೊರೆಯಲಿಲ್ಲ. ಒಂದೆರಡುಬಾರಿ ಅವಕಾಶ ದೊರೆತಿದ್ದರೂ
ಅವಳನ್ನು ಅಪಹರಿಸಿಕೊಂಡು ಹೋದರೆ ಪಲ್ಲವಕನಿಗೆ ತನ್ನ ಮೇಲೆಯೇ
ಸಂಶಯವುಂಟಾಗುವ ಸಂಭವವೂ ಇದ್ದಿತು. ಆದುದರಿಂದ ಸಂತಾಪಕನು
ತನ್ನ ಮಿತ್ರನಾದ ಭುಜಂಗಮನೊಡನೆ ಸೇರಿ ಬಹು ದಿನಗಳಿಂದಲೂ
ಸಾಹಸಪಟ್ಟು ಪಲ್ಲವಕನ ಮನೆಗೆ ರಾತ್ರಿಕಾಲದಲ್ಲಿ ಪ್ರವೇಶಿಸಿ ನಿದ್ರಿತಳಾ
ಗಿದ್ದ ನಿರುಪಮಕುಮಾರಿಯ ಬಾಯನ್ನು ಬಟ್ಟೆಯಿಂದ ಭದ್ರವಾಗಿ ಮುಚ್ಚಿ
ಅವಳನ್ನೆತ್ತಿಕೊಂಡು ಹೊರಕ್ಕೆ ಬಂದನು. ಮೊದಲೇ ನಿಷ್ಕರ್ಷೆಮಾಡಿದ್ದ
ಪ್ರಕಾರ ಸಂತಾಪಕನು ಹೊರಕ್ಕೆ ಬಂದೊಡನೆಯೇ ಭುಜಂಗಮನು ಆ
ಮನೆಯ ನಾಲ್ಕು ದಿಕ್ಕುಗಳಲ್ಲಿಯೂ ಸಿಡಿಮದ್ದನ್ನಿಟ್ಟು ಕಿಚ್ಚನ್ನುಹಾಕಿ,
ಸಂತಾಪಕನನ್ನನುಸರಿಸಿ ಕಿಂಶುಕಾಟವಿಗೆ ಹೊರಟು ಬಂದನು. ಬಳಿಕ
ನಡೆದ ವಿಷಯವನ್ನೆಲ್ಲ ನಮ್ಮ ಪಾಠಕರು ತಿಳಿದೇ ಇರುವರಾದುದರಿಂದ
ಅದನ್ನು ಮತ್ತೆ ಹೇಳಬೇಕಾಗಿಲ್ಲ. ಮಾತಾಪಿತೃಗಳ ಬಳಿಯಲ್ಲಿ ಕಷ್ಟ
ವೆಂಬುದೇನೆಂದು ಬಾಲ್ಯದಿಂದಲೂ ಅರಿಯದೆ ಸೌಖ್ಯನಾಗಿದ್ದ ನಿರುಪಮ
ಕುಮಾರಿಯು ಈಗ ಅನಾಥೆಯಾಗಿ ಮಾತಾಪಿತೃಗಳನ್ನು ಕಳೆದುಕೊಂಡು
ಸಂತಾಪಕನ ಕೈಯಲ್ಲಿ ಸಿಕ್ಕಿಬಿದ್ದಳು. ಮಾತಾಪಿತೃಗಳು ಮೃತರಾದ
ವಿಷಯವು ಅವಳಿಗೆ ಸಂತಾಪಕನು ಹೇಳುವವರೆಗೂ ತಿಳಿದಿರಲಿಲ್ಲ. ಈಗ
ಸಂತಾಪಕನು ಆಡಿದ ಮಾತುಗಳನ್ನು ಕೇಳಿ ಅವಳಿಗೆ ಬರಸಿಡಲು ಹೊಡೆ
ದಂತಾಯಿತು. ಪ್ರಪಂಚವೆಲ್ಲ ಅ೦ಧಕಾರಮಯವಾಗಿರುವಂತೆ ತೋರಿ
ಪ್ರಜ್ಞೆಯು ಶೂನ್ಯವಾಗಿ ಹೋಯಿತು. ಸಂತಾಪಕನು ಇದನ್ನು ಕಂಡು
ಅವಳಿಗೆ ಶೈತ್ಯೋಪಚಾರಮಾಡುವಂತೆ ಭುಜಂಗಮನಿಗಾಜ್ಞಾಪಿಸಿ ಎಲ್ಲಿಗೋ
ಹೊರಟುಹೋದನು.