ಪುಟ:ಸಂತಾಪಕ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ಕರ್ಣಾಟಕ ಚ೦ದ್ರಿಕೆ.

ಹತ್ತನೆಯ ಪರಿಚ್ಛೇದ.

ನಿರುಪಮಕುಮಾರಿಗೆ ಪ್ರಜ್ಞೆಯುಂಟಾಗಿ ಕಣ್ತೆರೆದುನೋಡಿದಾಗ
ಸೂರ್ಯದೇವನು ತನ್ನ ಉಜ್ವಲವಾದ ಕಿರಣಗಳನ್ನು ಧಾತ್ರಿಯಲ್ಲಿ ಪ್ರಸರಿಸಿ
ದನು. ಕಾಗೆ ಕೋಗಿಲೆ ಮೊದಲಾದ ಪಕ್ಷಿಗಳು ಸೂರ್ಯದೇವನ ಆಗ
ಮನವನ್ನು ವಂದಿಮಾಗಧರಂತೆ ಲೋಕಕ್ಕೆಲ್ಲ ತಿಳಿಸಿ ಎಚ್ಚರಗೊಳಿಸುತ್ತಿ
ದುವು. ಕುಮುದಿನಿಯು ಸೂರ್ಯದೇವನನ್ನು ಕಂಡು ಪರಪುರುಷನೆಂದು
ಲಜ್ಜೆಗೊಂಡು ಅವನತಶೀರ್ಷೆಯಾದಳು. ಕೇಡಿಗನಾದ ಮಾರುತನು ಅವಳ
ಮಾನಭಂಗವನ್ನು ಮಾಡಬೇಕೆಂದು ಆಲೋಚಿಸಿ ಮೆಲ್ಲನೆ ಸಮೀಪಕ್ಕೆ
ಬಂದು ಅವಳನ್ನು ಸೋ೦ಕಿದನು. ಕುಮುದಿನಿಯು ಮತ್ತಷ್ಟು ತಲೆಬಾಗಿದಳು.
ಅವಳ ಕೃಷ್ಣವರ್ಣವನ್ನು ಕಂಡು ಮಾರುತನಿಗೆ ಅಸಹ್ಯವುಂಟಾಯಿತು.
ಅವನಾ ಕುಮುದಿನಿಯನ್ನು ಬಿಟ್ಟು ಮತ್ತೆಲ್ಲಿಗೋ ಹೊರಟುಹೋದನು. ಇದ
ನ್ನೆಲ್ಲ ನೋಡುತಿದ್ದ ಕಮಲಿನಿಯು ತಲೆಯೆತ್ತಿಕೊಂಡು ನಗೆಮೊಗದಿಂದ
ನಲಿಯತೊಡಗಿದಳು. ಒ೦ದಾನೊ೦ದು ಚಕ್ರವಾಕಪಕ್ಷಿಯು ಕಮಲಿನಿಯ
ಔದ್ಧತ್ಯವನ್ನು ಕಂಡು ಸೈರಿಸಲಾರದೆ ಅವಳ ತಲೆಯಮೇಲೆ ಬಂದು ಕುಳಿತು
ತನ್ನ ಕೊಕ್ಕಿನಿಂದ ಚುಚ್ಚಲಾರಂಭಿಸಿತು. ಕಮಲಿನಿಯ ದುರಹಂಕಾರಕ್ಕೆ
ತಕ್ಕ ಪ್ರತೀಕಾರವೇನೋ ಆಯಿತು. ಕಮಲಿನಿಯು ತನಗಾದ ಅಪಮಾನ.
ವನ್ನು ಸೈರಿಸಲಾರದೆ ನೀರಿನಲ್ಲಿ ಮುಳುಗಿಹೋದಳು. ಈ ಬಗೆಯ
ಅತ್ಯಾಹಿತಗಳನ್ನೆಲ್ಲ ಕಂಡು ದುಷ್ಟರನ್ನು ಶಾಸನಮಾಡುವುದಕ್ಕೋಸುಗ
ದಿನಪತಿಯಾದ ಸೂರ್ಯದೇವನು ಗಗನಮಧ್ಯವನ್ನಲಂಕರಿಸಿದನು. ದಿನನಾ
ಯಕನಿಗೆ ಕೋಪವುಂಟಾದುದನ್ನು ಕಂಡು ಲೋಕವೆಲ್ಲ ಕಂಗೆಟ್ಟಿತು..
ಕೋಪಾನ್ವಿತನಾದ ಸೂರ್ಯದೇವನನ್ನು ಅಭಿವಂದಿಸುವುದಕ್ಕೋಸುಗ
ತರುಲತಾಗುಲ್ಮಾದಿಗಳೆಲ್ಲ ತಲೆಬಾಗಿದುವು. ಕೋಪಾಕುಲನಾದ ದಿನಪ
ತಿಯ ಇದಿರಾಗಿ ನಿಲ್ಲುವುದಕ್ಕೆ ಧೈರ್ಯವಿಲ್ಲದೆ ಪ್ರಾಣಿಗಳೆಲ್ಲವೂ ವೃಕ್ಷಾ
ದಿಗಳ ಮರೆಯಲ್ಲಿ ಅವಿತುಕೊಂಡವು. ಕೋಗಿಲೆಯ ಮರಿಯೊಂದು
ಬಾಲತ್ವಸಹಜವಾದ ಚಾಪಲ್ಯದಿಂದ ಬಹುಕಾಲ ಮೌನದಿಂದಿರಲಾ
ರದೆ ಅವ್ಯಕ್ತಮಧುರವಾದ ಪಂಚಮಸ್ವರವನ್ನೆತ್ತಿ " ಕುಹೂ " ಎಂದು