ಪುಟ:ಸಂತಾಪಕ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.

೪೯


ದತ್ತ :- ಈ ಲಗ್ನದ ವಿಷಯದಲ್ಲಿ ಆಕ್ಷೇಪಣೆಯೇನೂ ಇಲ್ಲವಷ್ಟೆ ?
ವರ :- ತಮ್ಮ ಅಭಿಪ್ರಾಯವನ್ನು ಅನುಮೋದಿಸಬೇಕೆಂಬುದೇ
ಆತನ ಸಂಕಲ್ಪ.
ದತ್ತನು ' ಹಾಗಾದರೆ ಬಹು ಸಂತೋಷ. ಇನ್ನು ಮಂಗಳ
ಸ್ನಾನಾದಿ ಕಾಲೋಚಿತ ಕರ್ಮಗಳು ಜಾಗ್ರತೆಯಾಗಿ ನಡೆಯಲಿ ' ಎಂದು
ಹೇಳುತ್ತೆ, ವರನನ್ನು ಒಂದು ಸುಸಜ್ಜಿತವಾಗಿದ್ದ ಕೋಣೆಯೊಳಕ್ಕೆ
ಕರೆದುಕೊಂಡು ಹೋಗಿ ವಿಶ್ರಮಿಸಿಕೊಳ್ಳುವಂತೆ ಹೇಳಿ, ಕಲ್ಯಾಣ ಮಂಟ
ಪದ ಸಮೀಪಕ್ಕೆ ಬಂದನು. ಆಗ ಪಾಟಲಿಕೆಯು ದತ್ತನ ಬಳಿಗೆ ಬಂದು
ಅಶ್ವಾರೋಹಿಯಾದ ಧನಿಕನೊಬ್ಬನು ಬಂದಿರುವನೆಂದು ತಿಳಿಸಿದಳು.
ದತ್ತನು ತ್ವರೆಯಾಗಿ ಬಾಗಿಲಬಳಿಗೆ ಹೋಗಲು ಆ ಹೊಸಬನು ಕುದುರೆ
ಯಿಂದಿಳಿದು ಒಳಕ್ಕೆ ಬಂದನು. ದತ್ತನು ಅವನನ್ನು ಕಂಡು ಸಂತೋಷದಿಂ
ದಾಲಿಂಗಿಸಿ " ವಿನಯಾ ! ನೀನು ವಿನೋದಕ್ಕೋಸ್ಕರ ಹೇಳಿ ಕಳುಹಿಸಿದ
ಮಾತನ್ನು ನಾನು ನಿಶ್ಚಯವೆಂದೇ ತಿಳಿದುಕೊಂಡಿದ್ದೆನು. " ಎಂದನು.
ಹೊಸಬ :- ಅದೇನು ? ನಾನು ಹೇಳಿಕಳುಹಿಸಿದುದು ?
ದತ್ತ :- ದೇಹಾಲಸ್ಯವೆಂದು.
ವಿನಯ :- ಹಾಗೆ ಹೇಳಿದವರು ಯಾರು?
ದತ್ತ :- ನಿನ್ನ ಮಗ.
ವಿನಯ :- ಈಗ ಅವನೆಲ್ಲಿ ?
ದತ್ತ :- ಇಲ್ಲಿಯೇ ಇರುವನು. ( ಎಂದು ಪಾಟಲಿಕೆಯೊಡನೆ ) ಎಲೆ
ಪಾಟಲಿ ! ಮದುವಣಿಗನನ್ನು ಕರೆದುಕೊಂಡು ಬಾ.
ಉತ್ತರಕ್ಷಣದಲ್ಲಿಯೇ ಪಾಟಲಿಕೆಯು ಒಳಕ್ಕೆ ಹೋಗಿ ವರನನ್ನು
ಕರೆತಂದಳು. ದತ್ತನು ವರನನ್ನು ನೋಡಿ " ವತ್ಸ ! ನಿಮ್ಮ ತಂದೆಗೆ
ನಮಸ್ಕರಿಸು " ಎಂದನು. ವರನು ವಿನಯಚಂದ್ರನ ಪಾದಗಳನ್ನು ಮುಟ್ಟಿ
ನಮಸ್ಕಾರಮಾಡಿದನು. ವಿನಯಚಂದ್ರನು ಹಠಾತ್ತಾಗಿ ಕಂಪಿಸಿ ನಿಶ್ಚಲ
ನಾಗಿ, ದತ್ತನನ್ನು ಬಿರಬಿರನೆ ನೋಡತೊಡಗಿದನು. ದತ್ತನು ಇದನ್ನು
ಕಂಡು ಆಶ್ಚರ್ಯದಿಂದ " ವಿನಯಾ ! ಅದೇಕೆ ಹೀಗೆ ನೋಡುವೆ ? " ಎಂದನು.
ವಿನಯ :-- ಕಮಲಾ ! ಸಮಯಾಸಮಯಗಳನ್ನರಿಯದೆ ಪರಿಹಾಸವೆ ?

4