ಪುಟ:ಸಂತಾಪಕ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಕರ್ಣಾಟಕ ಚ೦ದ್ರಿಕೆ.


" ವಿಜಯಾ ! ಈತನು ನನ್ನ ಮಿತ್ರನಾದ ವಿನಯಚಂದ್ರದತ್ತ. ಈತನಿಗೆ
ಬುದ್ದಿವೈಕಲ್ಯವುಂಟಾಗಿರುವುದು. ಈತನ ಮಗನಾದ ಕುಮುದಚ೦ದ್ರ
ನಿಗೇ ನಮ್ಮ ಕಮಲೆಯನ್ನು ಕೊಡಬೇಕೆಂದು ನಿಷ್ಕರ್ಷೆಮಾಡಿದ್ದೆನು.
ಈಗ ಎಂತಹ ಪ್ರಮಾದವುಂಟಾಗಿರುವುದು, ನೋಡಿದೆಯಾ ? " ಎಂದನು.
ಪಾಠಕಮಹಾಶಯ ! ಈ ಯುವಕನೇ ನಮ್ಮ ಪೂರ್ವಪರಿಚಿತನಾದ ವಿಜಯ
ವರ್ಮ. ಕಳಾಮಾಲಿನಿಯೊಡನೆ ಇವನು ಹೇಳಿದ್ದಂತೆ ಈದಿನ ಇಲ್ಲಿಗೆ
ಬಂದನು. ಬರುವಾಗ ಆವಕಾರಣದಿಂದಲೋ ಯಾಮಿಕರನ್ನೂ ಸಂಗಡ
ಕರೆದುಕೊಂಡು ಬಂದನು. ಈಗ ಕಮಲಾಕರದತ್ತನು ಆಡಿದ ಮಾತು
ಗಳನ್ನಿವನು ಕೇಳಿ, ನಗುತ್ತಾ " ಅಯ್ಯಾ ! ವರಾನ್ವೇಷಣ ವಿಷಯದಲ್ಲಿ
ಕನ್ಯೆಗೆ ಸ್ವಾತಂತ್ರ್ಯವನ್ನು ಕೊಟ್ಟುದರ ಫಲವನ್ನು ನೋಡಿದೆಯಾ ? "
ಎಂದು ಕೇಳಿದನು.
ಕಮಲಾ :- ಏನು ! ಈ ಸಮಯದಲ್ಲಿ ನನ್ನನ್ನು ಹಾಸ್ಯಮಾಡಬೇ
ಕೆಂದು ಬಂದೆಯೋ ?
ವಿಜಯ :- ಅಯ್ಯಾ, ನಿನ್ನನ್ನು ನಾನು ಹಾಸ್ಯಮಾಡುವುದಕ್ಕೆ ಬಂದವ
ನಲ್ಲ. ನಿನ್ನ ಅಳಿಯನ ಯೋಗ್ಯತೆಯನ್ನು ವಿಶದಪಡಿಸುವುದಕ್ಕೆ ಬಂದೆ.
ಕಮಲಾ :- ನನ್ನ ಅಳಿಯನು ನಿನಗಿಂತ ಯೋಗ್ಯನೇ ಅಹುದು.
ವಿಜಯ :- " ಯೋಗ್ಯನಹುದೋ ಅಲ್ಲವೋ ಎಂಬುದನ್ನು ನ್ಯಾಯಾ
ಧೀಶನಿದಿರಾಗಿ ತೋರಿಸುವೆನು. ಈಗ ನೀನು ಈ ಪತ್ರಿಕೆಯನ್ನು ಮಾತ್ರ
ನೋಡು " ಎಂದೊಂದು ಕಾಗದವನ್ನು ಕೊಟ್ಟನು. ಕಮಲಾಕರದತ್ತನು
ಆ ಪತ್ರಿಕೆಯನ್ನು ಓದಿನೋಡಿ ಸ್ತಂಭೀಭೂತನಾದನು. ವಿಜಯವರ್ಮನು
ಮತ್ತೊಂದು ಕಾಗದವನ್ನು ತೆಗೆದು ಅವನ ಕೈಗೆ ಕೊಟ್ಟನು. ಕಮಲಾಕರ
ದತ್ತನಿಗೆ ಆ ಕಾಗದಗಳನ್ನು ಓದಿ ಕಣ್ಗತ್ತಲೆಹಿಡಿಯಿತು. ಅವನು
ತನಗುಂಟಾದ ಆಶಾಭಂಗವನ್ನೂ ಅಪಮಾನವನ್ನೂ ಸಹಿಸಲಾರದೆ ತಲೆ
ಬಾಗಿದನು. ವಿಜಯವರ್ಮನು " ಅಯ್ಯಾ ! ಆ ಕಾಗದದ ಮೇಲ್ಗಡೆ ಬರೆ
ದಿರುವುದನ್ನು ಓದಿನೋಡು " ಎಂದನು. ಕಮಲಾಕರದತ್ತನು ಓದಿ, " ಏನು !
ಇವನೇ ಸಂತಾಪಕ ! ಆಹಾ. ನಾನು ವಂಚಿತನಾದೆನೇ ? " ಎಂದು ನೆಲದ
ಮೇಲೆ ಬಿದ್ದು ಮೂರ್ಛಿತನಾದನು. ಯಾಮಿಕರಿಬ್ಬರೂ ಮದುವಣಿಗನನ್ನು
ಹಿಡಿದುಕೊಂಡರು. ಮದವಣಿಗನು ನಗುತ್ತಾ " ಇದೇನು ಸರಸ ? " ಎಂದು