ಪುಟ:ಸಂತಾಪಕ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ೦ತಾಪಕ.

೫೩


ಕೇಳಿದನು. ಯಾಮಿಕರು ಮಾತನಾಡದೆ ಮದುವಣಿಗನ ಕೈಗೆ ಸಂಕಲೆಯನ್ನು
ತೊಡಿಸಿ, ಉಭಯಪಾರ್ಶ್ವಗಳಲ್ಲಿಯೂ ಹಿಡಿದುಕೊಂಡು ಸೆರೆಮನೆಯ ಕಡೆಗೆ
ಕರೆದುಕೊಂಡು ಹೋದರು. ವಿಜಯವರ್ಮನು ಕಮಲಾಕರ, ವಿನಯ
ಚಂದ್ರದತ್ತರಿಬ್ಬರಿಗೂ ಶೈತ್ಯೋಪಚಾರವನ್ನು ಮಾಡುವಂತೆ ಪಾಟಲಿಕೆ
ಗಾಜ್ಞಾಪಿಸಿ, ವಿನಯಚಂದ್ರನ ಬಂಧನವನ್ನು ಪರಿಹರಿಸಿ ಎಲ್ಲಿಯೋ
ಹೊರಟುಹೋದನು. ವಾದ್ಯಾಗಾರರೂ ಹೊರಟುಹೋದರು.

ಹದಿನಾಲ್ಕನೆಯ ಪರಿಚ್ಛೇದ.

ದುವೆಗೆ ಬಂದಿದ್ದ ನಂಟರೆಲ್ಲರೂ ಹೇಳದೆ ಕೇಳದೆ ತಂತಮ್ಮ
ಊರುಗಳಿಗೆ ಹಿಂತಿರುಗಿ ಹೋದರು. ಮನೆಯೆಲ್ಲ ಬರಿದಾಯಿತು. ವಸ್ತ್ರಾ
ಲಂಕಾರಭೂಷಿತೆಯಾಗಿದ್ದ ಕಮಲಕುಮಾರಿಯು ಎಲ್ಲವನ್ನೂ ಕಿತ್ತು
ಬೀಸಾಡಿ ಒಂದು ಹಳೆಯ ಸೀರೆಯನ್ನುಟ್ಟು ಅಳುತ್ತಾ ಮಂಚದಮೇಲೆ
ಮಲಗಿದ್ದಳು. ಆಃ ! ಹತವಿಧಿಯೇ ! ಸ್ವಲ್ಪಕಾಲಕ್ಕೆಮುಂಚೆ ಸಂತೋಷ
ದಿಂದ ಓಡಾಡುತ್ತಿದ್ದವರೆಲ್ಲರನ್ನೂ ಭಗ್ನಮನೋರಥರಾಗಿ ಕೊರಗುತ್ತಿರು
ವಂತೆ ಮಾಡಿಬಿಟ್ಟೆ. ಮದುವೆಯಮನೆಯನ್ನು ಮಹಾಸ್ಮಶಾನವನ್ನಾಗಿ
ಮಾಡಿದೆ. ಕನೈಯಾದ ಕುಮಾರಿಯನ್ನು ಕಂಗೆಡಿಸಿದೆ. ನಿನ್ನ ವಿಲಾಸವು
ಅಸಮಾನವಾದುದೇ ಸರಿ.
ಪಾಠಕಮಹಾಶಯ ! ವಿಧಿಯ ವಿಪರೀತ ವರ್ತನಗಳೇ ಹೀಗೆ. ಯಾ
ವನು ಮಾತಾಪಿತೃಗಳಿಗೆ ಏಕಮಾತ್ರ ಪುತ್ರನೋ ಅವನನ್ನೇ ವಿಧಿಯು
ಯಮನಾಲಯಕ್ಕೆ ಕರೆದುಯ್ಯುವನು. ಸುಂದರನಾದ ಧನಿಕನಾದ ತರುಣ
ನಿಗೆ ಪತ್ನಿಯಾಗಿ ಪತಿವ್ರತಾಶಿರೋಮಣಿಯೆನಿಸಿ ಪತಿಪ್ರೀತಿಗೆ ಪಾತ್ರಳಾಗಿ
ಯಾವಳು ಬಾಳುತ್ತಿರುವಳೋ ಅಂಥವಳನ್ನೇ ಆರಿಸಿ ವಿಧಿಯು ಯಮನ
ಬಳಿಗೆ ಕಳುಹಿಸುವನು. ಯಾವ ವಿಧವೆಯು ಪಾಲಕರಿಲ್ಲದೆ ಒಂದು
ಹೊತ್ತಿನ ಊಟಕ್ಕೂ ಅನುಕೂಲವಿಲ್ಲದೆ ಮೃತ್ಯುವನ್ನೇ ಇದಿರುನೋಡುತ್ತಿ
ರುವಳೋ ಅಂಥವಳನ್ನು ವಿಧಿಯು ನೂರಾರುವರ್ಷ ಬದುಕಿರುವಂತೆಮಾಡು