ಪುಟ:ಸಂತಾಪಕ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಕರ್ಣಾಟಕ ಚ೦ದ್ರಿಕೆ.


ವನು. ಯಾವನು ವಿದ್ಯಾಪಕ್ಷಪಾತಿಯೋ, ಯಾವನು ದಾತೃವೋ, ಯಾವನು
ಬಹುಕುಟುಂಬಿಯೋ, ಯಾವನು ಸದ್ಗುಣಸಂಪನ್ನನೋ ಅವನನ್ನು
ವಿಧಿಯು ಬಡತನವೆಂಬ ಸಮುದ್ರದಲ್ಲಿ ಮುಳುಗಿಸಿ ತೇಲಾಡಿಸುತ್ತಿರುವನು.
ಕೆಂಪುಬಣ್ಣದಿಂದ ತಳತಳಿಸುವ ಮುತ್ತುಗದ ಹೂವಿಗೆ ನಿರ್ಗ೦ಧತೆಯನ್ನೂ,
ಮಾಸಲು ಬಣ್ಣದಿಂದ ಮಸಕುಮಸಕಾಗಿರುವ ಪಾದರಿಯ ಹೂವಿಗೆ ಪರಿಮ
ಳವನ್ನೂ ಉಂಟುಮಾಡಿರುವನು. ಸುಂದರನಾದ ಪುರುಷನಿಗೆ ವಕ್ರಾಂಗಿ
ಯಾದ ಸ್ತ್ರೀಯನ್ನೂ, ವಕ್ರಾ೦ಗನಾದ ಪುರುಷನಿಗೆ ಸುಂದರಿಯಾದ ಸ್ತ್ರೀ
ಯನ್ನೂ ಸಂಘಟಿಸುವನು. ಸ್ವಾಮಿಭಕ್ತನಾದ ಸೇವಕನಿಗೆ ದುಷ್ಟನಾದ
ಅಧಿಕಾರಿಯನ್ನೂ, ಸೇವಕವತ್ಸಲನಾದ ಅಧಿಕಾರಿಗೆ ಸ್ವಾಮಿದ್ರೋಹಿ
ಯನ್ನೂ ಗಂಟಿಕ್ಕುವನು. ಇದರಿಂದ ಅವನಿಗೆ ಉಂಟಾಗುವ ಸಂತೋಷ
ವೇನೋ ನಾವುಬೇರೆ ಕಾಣೆವು. ಅವನು ಹಾಗೆಯೇ ಸ್ವೇಚ್ಛಾವಿಹಾರಿ
ಯಾಗಿರಲಿ. ನಾವು ನಮ್ಮ ಕಾರ್ಯವನ್ನು ಮಾಡಿಬಿಡೋಣ.
ವಿನಯಚಂದ್ರನಿಗೆ ತನ್ನ ಮಗನು ಬದುಕಿಲ್ಲವೆಂದೂ, ಸಂತಾ
ಪಕನು ಅವನನ್ನು ಕೊಂದು ಕಮಲಾಕರದತ್ತನನ್ನೂ ಅವನ ಮಗಳನ್ನೂ
ವಂಚಿಸಿರುವನೆಂದೂ ತಿಳಿಯದೆ ಇರಲಿಲ್ಲ. ಆಕ್ಷಣವೇ ಎಲ್ಲವೂ ವಿಶದವಾ
ಯಿತು. ವಿಜಯವರ್ಮನು ಕಮಲಾಕರದತ್ತನಿಗೆ ತೋರಿಸಿದ ಮೊದಲ
ನೆಯ ಪತ್ರಿಕೆಯು ನಂದಕುಮಾರಮಿತ್ರನಿಗೆ ಸಂತಾಪಕನು ಬರೆದುದಾ
ಗಿದ್ದಿತು. ಅದರಲ್ಲಿ ಅನರ್ಘನಗರದಿಂದ ಕುಮುದಿನೀಚ೦ದ್ರದತ್ತನು
ಪ್ರಸನ್ನನಗರಕ್ಕೆ ಪ್ರಯಾಣ ಮಾಡಿರುವುದಾಗಿಯೂ, ಅವನನ್ನು ಮಾರ್ಗ
ಮಧ್ಯದಲ್ಲಿ ಹಿಡಿದು ಸಂಹರಿಸಿ ಪ್ರಯೋಜನಾಂಶವನ್ನು ಪಡೆಯಬೇಕಾ
ಗಿರುವುದರಿಂದ ನಂದಕುಮಾರಮಿತ್ರನು ಕಿಂಶುಕಾಟವಿಯ ಮಾರ್ಗ
ದಲ್ಲಿ ಕಾದಿರಬೇಕೆಂಬುದಾಗಿಯೂ ಬರೆದಿದ್ದಿತು. ಎರಡನೆಯ ಪತ್ರಿಕೆಯನ್ನು
ಭುಜಂಗಮನು ನಂದಕುಮಾರಮಿತ್ರನಿಗೆ ಬರೆದಿದ್ದನು. ಅದರಲ್ಲಿ ಸಂತಾಪ
ಕನು ಕಮಲಕುಮಾರಿಯನ್ನು ಅಪಹರಿಸಿಕೊಂಡು ಬಂದಬಳಿಕ ನಿರುಪಮ
ಕುಮಾರಿಯನ್ನು ಹೇಗಾದರೂ ವಶಮಾಡಿಕೊಳ್ಳಬಹುದೆಂಬ ಅಭಿಪ್ರಾಯವು
ಉಕ್ತವಾಗಿದ್ದಿತು. ಇವೆರಡು ಕಾಗದಗಳನ್ನೂ ಆದಿನ ರಾತ್ರಿಕಾಲದಲ್ಲಿ
ನಂದಕುಮಾರಮಿತ್ರನು ಉನ್ಮತ್ತನಾಗಿ ಸರೋವರದಬಳಿ ಹಾಡುತ್ತಿದ್ದಾಗ