ಪುಟ:ಸಂತಾಪಕ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂತಾಪಕ.

೫೭


ಯಾರೋ ಹಿಂದುಗಡೆ ಬರುತ್ತಿದ್ದಂತೆ ಹೆಜ್ಜೆಯ ಶಬ್ದವಾಯಿತು. ಬಂದಿಯು
ತಟ್ಟನೆ ತನ್ನ ಬಳಿಯಲ್ಲಿದ್ದ ಖಡ್ಗವನ್ನು ಹಿರಿದು ಹಿಂತಿರುಗಿದನು. ದೂರ
ದಲ್ಲಿ ಯಾರೋ ಮೆಲ್ಲನೆ ನಡೆದು ಬರುತ್ತಿದ್ದಂತೆ ತೋರಿತು. ಬ೦ದಿಯೂ
ಆಗಂತುಕನೂ ಸಮೀಪದಲ್ಲಿದ್ದ ಮರದ ಹಿಂದೆ ಅವಿತುಕೊಂಡರು. ಆ ಅಪ
ರಿಚಿತ ವ್ಯಕ್ತಿಯು ಮರದ ಸಮೀಪಕ್ಕೆ ಬರಲು ಒಬ್ಬ ಸ್ತ್ರೀಯೆಂದು ಬೋಧೆ
ಯಾಯಿತು. ಬ೦ದಿಯು ನಗುತ್ತಾಹೋಗಿ " ಪಾಟಲಿ ! ಇದೇನು ಅವೇಳೆ
ಯಲ್ಲಿ ಬಂದೆ ? " ಎಂದು ಕೇಳಿದನು.
ಪಾಠಕಮಹಾಶಯ ! ಬಂದಿಯೂ ಆಗಂತುಕನೂ ಸಂತಾಪಕ ನಂದ
ಕುಮಾರರೆಂದು ನೀವು ಚೆನ್ನಾಗಿ ಬಲ್ಲಿರಷ್ಟೆ ? ಈ ಅಪರಿಚಿತವ್ಯಕ್ತಿಯು
ಕಮಲಕುಮಾರಿಯ ಸಖಿ. ಕುಮಾರಿಯ ಪತ್ರಿಕೆಯನ್ನು ಸಂತಾಪಕನಿಗೆ
ತಂದುಕೊಡಬೇಕೆಂದು ಸೆರೆಮನೆಯ ಸಮೀಪದಲ್ಲಿ ಸಮಯವನ್ನು ನಿರೀಕ್ಷಿ
ಸುತ್ತಿರಲು, ಅವಳಿಗೆ ಸಂತಾಪಕ ನಂದಕುಮಾರರ ಚರ್ಯೆಯೆಲ್ಲಾ ತಿಳಿದು
ಬಂದಿತು. ಅವರಿಬ್ಬರೂ ಮುಂದೆ ಹೊರಡಲು ಇವಳೂ ಅವರನ್ನನುಸರಿಸಿ
ಹೋದಳು. ಸಂತಾಪಕನು ಇವಳ ನಡೆಯಿಂದಲೇ ಇಂಥವಳೆಂಬುದನ್ನು
ಗ್ರಹಿಸಿ ಮಾತನಾಡಿಸಲು ಪಾಟಲಿಕೆಯು ಪ್ರತ್ಯುತ್ತರವನ್ನುಕೊಡದೆ ಕುಮಾ
ರಿಯ ಕಾಗದವನ್ನು ಅವನಕೈಗೆ ಕೊಟ್ಟು ಹಿ೦ತಿರುಗಿದಳು. ಸಂತಾಪಕನು
ನಂದಕುಮಾರನೊಡನೆ ಏನೋ ಹೇಳಿ ಕಳುಹಿಸಿ ತಾನು ಪಾಟಲಿಕೆಯನ್ನನು
ಸರಿಸಿ ಹೊರಟನು. ಮಾರ್ಗದಲ್ಲಿ ಇಬ್ಬರೂ ಏನೇನೋ ಮಾತುಗಳನ್ನಾ
ಡುತ್ತಾ ಹೋದರು. ಪಾಟಲಿಕೆಯು ದತ್ತನ ಉಪವನದ ಮಾರ್ಗವಾಗಿ
ಹೋಗಿ ಮನೆಯನ್ನು ಪ್ರವೇಶಿಸಿದಳು. ಸಂತಾಪಕನೂ ಅವಳೊಡನೆ
ಪ್ರವೇಶಿಸಿದನು. ಪಾಟಲಿಕೆಯು ಕಮಲಕುಮಾರಿಯಿದ್ದ ಕಿರುಮನೆಯ
ಬಾಗಿಲನ್ನು ತೆರೆದು ಸಂತಾಪಕನನ್ನು ಒಳಕ್ಕೆ ಕಳುಹಿಸಿ ತಾನು ಹೊರಗೆ
ನಿಂತುಕೊಂಡಳು. ಕಮಲಕುಮಾರಿಯ ಘೋರವಾದ ಅವಸ್ಥೆಯನ್ನು
ನೋಡಿದೊಡನೆಯೇ ಸಂತಾಪಕನ ಕಲ್ಲೆದೆಯೂ ಒಡೆದುಹೋಯಿತು.
ದುಃಖದಿಂದ ಅವನ ಕ೦ಠವು ರುದ್ದವಾಯಿತು ಕಣ್ಣುಗಳಲ್ಲಿ ಧಾರಾ
ಕಾರವಾಗಿ ನೀರು ಸುರಿಯಲುಪಕ್ರಮವಾಯಿತು. " ಕಮಲೆ ! ಕಮಲೆ ! "
ಎಂಬ ಮಾತೊಂದಲ್ಲದೆ ಮತ್ತಾವ ಮಾತೂ ಅವನ ಬಾಯಿಂದ ಹೊರ