ಪುಟ:ಸಂತಾಪಕ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೮

ಕರ್ಣಾಟಕ ಚಂದ್ರಿಕೆ.


ಡಲೇ ಇಲ್ಲ. ಕಮಲೆಯ ಕಣ್ಣಿನಿಂದಲೂ ವಾರಿಧಾರೆಯು ನಿರರ್ಗಳವಾಗಿ
ಸುರಿದು ಹಾಸಿಗೆಯೆಲ್ಲ ತೋಯ್ದು ಹೋಯಿತು. ವಿಧಿಯು ಸುಮುಖನಾಗಿ
ದ್ದಾಗ ಯಾವ ಕಿರುಮನೆಯು ನೂತನ ದಂಪತಿಗಳ ಶಯ್ಯಾಗೃಹವಾಗ
ಬೇಕಾಗಿದ್ದಿತೋ ಆ ಗೃಹವು ವಿಧಿವಕ್ರತೆಯಿಂದ ಈ ದಿನ ಭಯಂಕರವಾದ
ಪಿತೃವನವಾಗಿ ಪರಿಣಮಿಸಿತು. ಯಾವ ದಂಪತಿಗಳು ಏಕತ್ರ ಸೇರಿದೊಡ
ನೆಯೇ ಕೊನೆಮೊದಲಿಲ್ಲದ ಮಾತುಕತೆಗಳು ನಡೆಯಬೇಕಾಗಿದ್ದಿತೋ ಈ
ದಿನ ಆ ದಂಪತಿಗಳು ಸೇರಿದೊಡನೆಯೇ ವಿಧಿವಕ್ರತೆಯಿಂದ ಮಾತೇ ಹೊರ
ಡದಂತಾಗಿ ಹೋಯಿತು. ಕಮಲಕುಮಾರಿಯು ಅತಿಕಷ್ಟದಿ೦ದ ಒ೦ದು
ಪಾರ್ಶ್ವಕ್ಕೆ ತಿರುಗಿ, ಸ್ವಲ್ಪ ನೀರು ಬೇಕೆಂದು ಸಂಜ್ಞೆ ಮಾಡಿದಳು. ಸಂತಾ
ಪಕನು ಮುಮೂರ್ಷಾವಸ್ಥೆಯಲ್ಲಿದ್ದ ಆ ಕುಮಾರಿಗೆ ಸ್ವಲ್ಪಸ್ವಲ್ಪವಾಗಿ
ನೀರನ್ನು ಕುಡಿಯಿಸಿದನು. ಸಂತಾಪಕನ ಜನ್ಮದಲ್ಲಿ ಇದೊಂದೇ ಪರೋಪ
ಕಾರವು ನಡೆಯಬೇಕಾಗಿದ್ದುದು. ಅದೂ ಆಗಿಹೋಯಿತು. ಕುಮಾ
ರಿಯು ಸ್ವಲ್ಪ ಚೇತರಿಸಿಕೊಂಡು ಮಾತನಾಡತೊಡಗಿದಳು. ಮರ್ಮಭೇದಿ
ಯಾದ ಆ ಮಾತುಗಳನ್ನು ಬರೆಯುವೆವೆಂದರೆ ನಮ್ಮ ಮನವೊಪ್ಪಿದರೂ
ಲೇಖನಿಯು ಹಿಂತೆಗೆಯುತ್ತಿರುವುದು. ಆದರೂ ಅವಳು ಕಡೆಯಲ್ಲಿ ಆಡಿದ
ಮಾತುಗಳನ್ನು ಬರೆಯದಿದ್ದರೆ ಪಾಠಕರನ್ನು ವಂಚಿಸಿದಂತಾಗುವುದಾದುದ
ರಿಂದ ಅದನ್ನು ಮಾತ್ರ ತಿಳಿಸುವೆವು :- " ಇದುವರೆಗೂ .........ಸೇರಿ
.........ಆಶೆ......... ಈಗ.........ದೂರ..........ಈ ಜನ್ಮ...... .
ನಿನ್ನ ಚರಣ......ಧನ್ಯೆ......ಮು೦ದೆ......ನೀನೇ ಪತಿ......ಎಂದೆಂ
ದಿಗೂ......ದುಷ್ಕಾರ್ಯ......ಬೇಡ......ಪರೋಪಕಾರ.........
ಇರು. ಹೋಗು. " ಇಷ್ಟು ಹೇಳಿ ಕುಮಾರಿಯು ಕಣ್ಣುಗಳನ್ನು ಮುಚ್ಚಿ
ಕೊಂಡಳು. ಸಂತಾಪಕನ ಮನಸ್ಸು ಏನಾಗಿ ಹೋಯಿತೋ ನಾವುಬೇರೆ
ಕಾಣೆವು. ಅವನು ಆ ಕಿರುಮನೆಯನ್ನು ಬಿಟ್ಟು ಹೊರಕ್ಕೆ ಬಂದನು.
ಅಲ್ಲಿ ಪಾಟಲಿಕೆಯು ನಿಂತಿದ್ದಳು. ಸಂತಾಪಕನು ಅವಳೊಡನೆ ಯಾವ
ಮಾತನ್ನೂ ಆಡದೆ ಉದ್ಯಾನವನದ ಮಾರ್ಗವಾಗಿ ಹೊರಟುಹೋದನು.
ಸಂತಾಪಕನು ಹೊರಟುಹೋದ ತರುವಾಯ ಪಾಟಲಿಕೆಯು ಕಿರುಮನೆಯೊ
ಳಕ್ಕೆ ಹೋದಳು. ಕುಮಾರಿಯ ಸಂಕಟವನ್ನು ನೋಡಲಾರದೆ ದೀಪವು