ಈ ಪುಟವನ್ನು ಪ್ರಕಟಿಸಲಾಗಿದೆ
ಸಂದೇಶದ ಕಥೆಗಳು
29
ಎದಿರುಗೊಳ್ಳಲು ತಾಯಿಯೇ ಆರತಿ ಹಿಡಿದು ನಿಂತಿದ್ದಳು. ರಣರಂಗದಲ್ಲಿ ಹೋರಾಡಿ ಜಯಗಳಿಸಿ ಬಂದ ಕೆಚ್ಚೆದೆಯ ವೀರಪುತ್ರನ ತಾಯಿಯೆಂಬ ಹೆಮ್ಮೆ ಅವಳ ಮೊಗದಲ್ಲಿ ಕಾಣುತ್ತಿತ್ತು
ಇದು ಶ್ರೀಕೃಷ್ಣನ ಮೂಲಕ ಪಾಂಡವರಿಗೆ ಕುಂತಿ ನೀಡಿದ ಸಂದೇಶ. ತಾಯಿ ತನ್ನ ಮಕ್ಕಳಿಗೆ ನೀಡಿದ ಕರ್ತವ್ಯ ಜಾಗೃತಿಯ ನಿಷ್ಠುರ ಸಂದೇಶ!!
-ಮಹಾಭಾರತ.
ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ತುಂಬ ಹಿರಿದು. ಮಕ್ಕಳನ್ನು ನಿಷ್ಠುರತೆಯಿಂದಲಾದರೂ, ಸನ್ಮಾರ್ಗದಲ್ಲಿ ತೊಡಗಿಸುವ ಜವಾಬ್ದಾರಿ ತಾಯಿಯದೇ ಆಗಿದೆ. ಇದನ್ನು ಇಂದಿನ ನಮ್ಮ ತಾಯಂದಿರು ಮನಗಾಣಬೇಕು.
ಸುಸಂಸ್ಕೃತ ಮಕ್ಕಳು, ತಾಯಿ ದೇಶಕ್ಕೆ ನೀಡುವ ದೊಡ್ಡ ಕೊಡುಗೆ ; ಸಂಪತ್ತು