ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್] ಲೋಲಂಬರಾಜ, ಕೃಷ್ಣ ಮಿಶ್ರ ೧೪೭ - - - - -- --- ಲೋ ಲ೦ ಬ ರಾ ಜ ಫಿ

  • ಇವನು ಬ್ರಾಹ್ಮಣನು, ದಕ್ಷಿಣದೇಶಸ್ಥನು, ಚಿಕ್ಕತನದಲ್ಲಿಯೇ ತಾಯಿ

ತಂದೆಗಳನ್ನು ಕಳೆದುಕೊಂಡು ಅಣ್ಣನ ಪೋಷಣೆಯಲ್ಲಿರುತ್ತಿದ್ದು ಅತ್ತಿಗೆಯ ಬೈಗ ಳನ್ನು ಸಹಿಸಲಾರದೆ ಕುಪಿತನಾಗಿ ಮನೆಯನ್ನು ಬಿಟ್ಟು ದೇಶಾಟನವನು ಮಾಡುತ್ತ ಸಪ್ತಶೃಂಗಕ್ಕೆ ಹೋಗಿ “ಹರಿವಿಲಾಸ” ಎಂಬ ಗ್ರಂಥವನ್ನು ಬರೆದನು ಕೃಷ್ಣನು ನಂದನ ಮನೆಯಲ್ಲಿ ಬೆಳೆದುದು ಮೊದಲು ಉದ್ದವನಬಳಿಗೆ ಹೋದನೆಂಬ ವರೆಗಿನಕಥೆಯು ಬರೆಯಲ್ಪಟ್ಟಿರುವುದು. ಇವನು ಹರಿಹರ ರಾಜನ ಆಸ್ಥಾನದ ಇದ್ದು ದಾಗಿ ತಿಳಿಯಬರುತ್ತದೆ, ಈ ರಾಜನು ಯಾರೆಂದಾಗಲಿ ಎಲ್ಲಿ ಆಳಿದವನೆಂಬು ದಾಗಲಿ ತಿಳಿಯಬರುವುದಿಲ್ಲ. ಇವನು ಭೋಜರಾಜನ ಸಮಕಾಲೀನನೆಂದು ತಿಳಿ ಯಬರುವುದರಿಂದ ಇವನು ಕ್ರಿ. ಶ.೧೧ ನೆಯ ಶತಮಾನದವನೆಂದು ಹೇಳಬೇ ಕಾಗಿದೆ. ಭಾಷೆಯು ಸರಳವಾಗಿಯ ಶೈಲಿಯು ಮೋಹಕರವಾಗಿಯೂ ಕಥಾ ಸಂವಿಧಾನಚತುರತೆಯು ರಸಿಕಾಹ್ಲಾದಕರವಾಗಿಯೂ ಇರುವುದು. ಕೃಷ್ಣ ಮಿ ಶ್ರ - ' (ಪುರಾಕಿಲವಿದ್ದ೦ದಲಲಾನುಭೂತೊsಖಿಲವಿದ್ರೋಧದಿಪಾರದೃತೈವಾ ಸಿ೦ತ್ಮಸ್ಥ ಮಿಶ್ರಾತ್ಯೋದಂಡಿ ” ಎಂಬುದರಿಂದ ಇವನು ಸಂನ್ಯಾಸಿಯಾಗಿರಬೇ ಕೆಂದು ಬೋಧೆಯಾಗುವುದು. ಇವನು ಔತ್ತರೇಯನೆಂದೂ, ವಂಗಿಯನಾಗಿರ ಬಹುದೆಂದೂ ಊಹಿಸಬಹುದಾಗಿದೆ. ಇವನ ಮಾತಾಪಿತೃಗಳಾರೆಂಬುದು ತಿಳಿ ಯದು. ಗಂಧಪ್ರಸ್ತಾವನದಿಂದ ಕೃಷ್ಣ ಮಿಶನು ತನ್ನ ಶಿಷ್ಯನಾದ ಗೋಪಾಲಭೂಪಾ ಹಿನಿಗೆ ಶಾಂತರಸಯುಕ್ತವಾದ ಈ ಗ್ರಂಥವನ್ನು ರಚಿಸಿಕೊಟ್ಟಂತೆಯೂ ಈ ಗೋವಾ ಲನು ತನ್ನ ಮಿತ್ರನಾದ ಚಂದ್ರವಂಶದ ಕಿರಿವರ್ಮನ ರಾಜ್ಯಾಭಿಷೇಕ ಸಮಯ ದಲ್ಲಿ ಇದನ್ನು ಅಭಿನಯಿಸಿದುದಾಗಿಯೂ ತಿಳಿಯಬರುತ್ತದೆ. ಕಾಲ:-ಕಿರಿವರ್ಮನು ಚಾಂಡಿಲ್ಯ (ಚಂದೇಲ)ವಂಶದವನೆಂದೂ ಕ್ರಿ ಶ. ೧೦೯೮ರ ಸುಮಾರಿನಲ್ಲಿ ರಾಜ್ಯವಾಳಿದುದಾಗಿಯೂ ಕೆಲವು ಶಾಸನಗಳಿಂದ ತಿಳಿಯ ಬರುತ್ತದೆ. ಈ ಕಿರಿವರ್ಮನು ಎಲ್ಲಿ ಆಳಿದನೆಂಬ ವಿಚಾರವು ಸರಿಯಾಗಿ ತಿಳಿಯು ವಂತಿಲ್ಲ ಕಿರಿವರ್ಮನು ಚೇದಿಕೇಶವನಾಳುತ್ತಿದ್ದ ಕಲಚೂರಿವಂಶದ ಕರ್ಣರಾಜ ನಿಂದ ಪರಾಚಿತನಾಗಿ ರಾಜ್ಯವು ಕೈಬಿಟ್ಟು ಹೋಗಲು ಕಿರಿವರ್ಮನ ಸೇನಾನಿಯಾದ ಗೋಪಾಲನು ಅದನ್ನು ತಿಳಿದು ಕರ್ಣರಾಜನ ಮೇಲೆ ದಂಡೆತ್ತಿ ಕಿರಿವರ್ಮನಿಗೆ $ ೬೦ರಿಬರಾಜೀಯವೆಂಬ ವೈದ್ಯಗ್ರಂಥಕಾರನು ಇವನಲ್ಲ.