ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹರಿಚಂದ್ರ ವನು ಶಿಷ್ಯಸಮೂಹದೊಡನೆ ಬಂದಿರುವ ಸಮಾಚಾರವನ್ನು ಕೇಳಿ ಆತನ ಸಂದರ್ಶ ನಾರ್ಥಿಯಾಗಿ ಹೊರಟು ಆತನನ್ನು ಪೂಜಿಸಿದನಂತರ ಸತ್ಕೃತನಾಗಿ ಕುಳಿತುಕೊಂಡು ಮನದ ಬಯಕೆಯನ್ನು ತಿಳುಹಿಸಲು ಮುನಿವರನು ರಾಜಮಹಾಸೇನ! ಚಿಂತೆ ಯನ್ನು ಬಿಡು, ಚತುರ್ವಿಂಶತಿ ತೀರ್ಥಂಕರರಲ್ಲಿ ೧೦ನೆಯ ತೀರ್ಥಂಕರನಾದ ಧರ್ಮ ನಾಥನು ನಿನ್ನ ಉದರದಲ್ಲಿ ಜನಿಸಿ ನಿಮ್ಮ ಕುಲವನ್ನುದ್ರಿಧರಿಪನೆಂದು ಹೇಳಿದ. ರಾಜನು ಮುದಿತ ವದನನಾಗಿ ಆ ಋಷಿ ಪುಂಗವನನ್ನು ಕುರಿತು ಮಹಾತ್ಮ! ಪರಮ ಪವಿತ್ರನಾದ ಧರ್ಮನಾಥನು ಗರ್ಭಕ್ಲೇಶವನ್ನು ಅನುಭವಿಸಬೇಕಾದ ಕಾರಣ ವೇನು? ನನ್ನ ಉದರದಲ್ಲಿ ಜನ್ಮಿಸುವ ಕಾರಣವು ಹೇಗೆ? ಆತನ ಪೂರ್ವಜನ್ಮ ವೃತ್ತಾಂತವೇನು? ಎಂದು ಬೆಸಗೊಳ್ಳಲು ಮುನಿವರನು ಇಂತೆಂದನು: – ಕೇಳು ಭೂಪಾಲ  ! ಸಂಚಾಶತ್ಕೋಟಿ ವಿಸ್ತೀರ್ಣವಾದ ಈ ಭೂಮಂಡಲದಲ್ಲಿ ಧಾತಕೀಖಂಡವೆಂಬ ದ್ವೀಪವು ಇರುವುದು. ಇದರ ಒಂದು ಭಾಗದಲ್ಲಿ ಮೇರುಪರ್ವತವಿರುವುದು. ಇದರ ದಕ್ಷಿಣಭಾಗದಲ್ಲಿವಿದೇಹವೆಂಬ ರಾಜ್ಯವೂ ಅದಕ್ಕೆ ಅಲಂಕಾರಭೂತವಾದ ವತ್ಸದೇಶವೂ ಇರುವುದು, ಇದನ್ನು ಮಹಾ ಭುಜಬಲಪರಾಕ್ರಮಿಯಾದ ದಶರಥನೆಂಬುವನು ಧರ್ಮದಿಂದ ರಾಜ್ಯ ಸರಿಪಾಲನ ವನ್ನು ಮಾಡುತ್ತ ಅನೇಕ ಅ೦ತಃ ಪುರಜನರಿಂದೊಡಗೂಡಿ ಶೈಲಾರಾಮವನನದೀ ತೀರಗಳಲ್ಲಿ ಮನಬಂದಂತೆ ವಿಹರಿಸುತ್ತ ಅವರಿಂದ ಸೇವಿತನಾಗಿರಲು ಒಂದಾನೊಂದು ಚಂದ್ರಗ್ರಹಣದ ದಿವಸ ರಾಹುಗ್ರಸ್ತನಾದ ಚಂದ್ರನನ್ನು ನೋಡಿ ಅಹಹ! ಇದೆಂತಹ ಅಚ್ಚರಿ! ಮಹಾಮಹಿಮರಾದ ದೇವತೆಗಳಿಂದ ಮಾನ್ಯನಾಗಿ ಸುಖಶಾಂತಿದಾಯಕ ನಾದ ಲೋಕಪೂಜ್ಯನಾದ ಚಂದ್ರನಿಗೆ ಇಂತಹ ವಿಪತ್ತು ಸಂಭವಿಸುವುದಾದರೆ ನಮ್ಮಂತಹ ಹುಲುಮಾನವರ ಪಾಡೇನು? ಆಯುಷ್ಯವಾದರೊ ಛಿದ್ರಘಟದಲ್ಲಿನ ನೀರಿನಂತೆ ಕಳೆದು ಹೋಗುತ್ತಿರುವುದು. ಅಭಿಮಾನಪುರಸ್ಸರವಾದ ಯೌವನವು ಗತವಾಗಿ ಹೋಗಿ ಜರಾಂಗನೆಯ ಪ್ರಹರಗಳಿಗೆ ಸಿಲುಕಿ ದೇಹವು ಜರ್ಜರಿತ ವಾಗಿಯೆ ಹೋಗುವುದು. ಹುಟ್ಟಿದವರಿಗೆ ಸಾವು ತಪ್ಪದು. ಒಂದು ದಿವಸವಿಲ್ಲ ದಿದ್ದರೆ ಮತ್ತೊಂದು ದಿವಸ ಸಾಯಲೇಬೇಕಾಗುವುದು. ಆದುದರಿಂದ ಈ ನಶ್ವರ ವಾದ ಭೋಗಗಳನ್ನು ತೊರೆದು ವಿಷಯೋಪಲಾಲಸತೆಯನ್ನು ಮರೆತು ಇಂದ್ರಿಯ ಪಾಟವವು ಸುಷ್ಟು ವಾಗಿರುವಾಗಲೇ ಪರಮಾರ್ಥಸಿದ್ದಿಗಾಗಿ ಯತ್ನಿಸುವುದು ಪ್ರತಿಯೊಬ್ಬ ವಿವೇಕಿಯ ಕರ್ತವ್ಯವೆಂದು ಯೋಚಿಸಿ ದೃಢಮನಸ್ಕನಾಗಿ ತನ್ನ ಮಗನಾದ ಅತಿರಥನಿಗೆ ರಾಜ್ಯಾಭಿಷೇಕವನ್ನು ಮಾಡಿ ತಪೋವನಕ್ಕೆ ಹೋಗಿ ಅಲ್ಲಿ ಸಿದ್ಧಪುರುಷರನ್ನು ಸೇವಿಸಿ ಸರ್ವಸಂನ್ಯಾನದಿಂದ ಈ ಕಳೇಬರವನ್ನು ಬಿಟ್ಟು 'ಸರ್ವಾರ್ಥಸಿದ್ದಿಯನ್ನು ಹೊಂದಿದನು. ಇಂತಹ ಪೂತಚರಿತನು ಧರ್ಮರಕ್ಷಣಾ (2)