ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ) ವೆಂಕಟನಾಥ ಲ್ಲಾವುದಾದರೂ ದೋಷವಿರುವುದಾಗಿದ್ದ ರೂ “ಏಕೊಹಿದೋಗುಣಸನ್ನಿ ಪಾತೇ ನಿವುತಿ?” ಕನಾರ್ಹವಾದುದುದಾಗಿಯೇ ಇರುವುದು, ಎಂದುಹೇಳಿರುವಂತೆ, ಎಲ್‌ ! ಹಂಸ ! ಪ್ರಕ್ಷೀಣಾಂತ್ರರಹಸಮಯೇ ಜಾತಹರ್ಷಾಮಿದಾನೀಂ ಪ್ರತ್ಯಾಯಾಸ್ಯನ್ನನುನಯಶಃ ಪದ್ಮನೀಂ ಸ್ವಾದುವಾಚಾ || ಎಂಬಂತೆ ನೀನು ಹೊರಡುವ ಮೊದಲು ನಿನ್ನ ದಯಿತೆಯಾದ ಸದ್ವಿನಿಯ ಅನುಜ್ಞೆಯನ್ನು ಪಡೆದು ಹೊರಡಬೇಕು. ಏಕೆಂದರೆ ನಿನ್ನ ವಿರಹದಿಂದ ಬಹು ಕಾಲ ಪರಿತಪಿಸುತ್ತಿದ್ದು ಈಗತಾನೇ ಬಂದಿರುವ ಹಂಸರಾಜನಿಂದ ವಿಯೋಗ ವನ್ನನುಭವಿಸಬೇಕಾದುದಲ್ಲಾ ಎಂದು ದುಃಖಿಸುವ ಪದ್ಮನಿಗೆ ಉಪಾಯಾಂತರ ದಿಂದ ಸಾಧ್ಯವಾದಷ್ಟು ಜಾಗ್ರತೆಯಾಗಿ ಬಂದು ಪುನಃ ನಿನ್ನನ್ನು ಸೇರುವೆ ನೆಂದು ಮೆಲ್ಲನೆ ಹೇಳುವನಾಗು. ಹೀಗೆ ಹೇಳುವುದಾದರೆ ಪದ್ಮನಿಯು ಬಹುಕಾಲಕ್ಕೆ ಬಂದುಸೇರಿದ ಸ್ವಾಮಿಯನ್ನು ಇಷ್ಟು ಜಾಗ್ರತೆಯಾಗಿ ಬಿಟ್ಟುಕೊಡುವಳೇ ಹೇಗೆ ? ಎಂದು ಅನುಮಾನ ಬಂದರೆ ಶ್ರೀರಾಮನಿಗೆ ಈ ವಿಚಾರದಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಸಾಕೇತಂತ್ರೀಸ್ವನಸುಭಗಯಾ ಸ್ಮಾದಿತೀಹ್ಯಾ ನುಜ್ಞಾಂ ಮಕುರಾನ್ಮಧುಕರಗಿರಾಮ್ಮೆಥಿಲೀಸೌಹೃದೇನ || ಎಂಬಂತೆ ಹಂಸದಪ್ರಣಯಿನಿಯುಪಮ್ಮಿನಿ, ಸೀತೆಯೂ ಪದ್ವಿನಿ, ಪದ್ಮಜೆ, ಮತ್ತು ಪದ್ಮಾಲಯೆ. ಆದುದರಿಂದ ಇವರಿಲ್ವರಿಗೂ ಪರಸ್ಪರ ಮೈತ್ರಿಯು ಹುಟ್ಟಿರಲೇ ಬೇಕು. ಪ್ರಾಯಕವಾಗಿ ಹೆಂಗಸರ ಕಷ್ಟವನ್ನು ಹೆಂಗಸರು ಅರಿತು ಮರುಕಗೊ ಳ್ಳುವಂತೆ ಗಂಡಸರು ಅರಿತುಕೊಳ್ಳಲಾರರು. ಹೃದಯವನ್ನು ಸ್ತ್ರೀಯೇಕ೦ಡು ಹಿಡಿದು ಮೆಚ್ಚುವಳು. ಆದುದರಿಂದಲೇ ಯಕ್ಷನು ಮೇಘನನ್ನು ಕುರಿತು ಉಜ್ಯ ಯಿನಿಯಲ್ಲಿ ತಮ್ಮ ತಮ್ಮ ವಿಟರನ್ನು ಬೆರೆಯಲು ಸಂಕೇತಸ್ಥಳವನ್ನು ಕುರಿತು ಸಾರು ತಿರುವ ಅಭಿಸಾರಿಕೆಯರನ್ನು ಎಲೈ! ಮೇಘವೆ! ನಿನ್ನ ಗುಡುಗಿನಗರ್ಜನೆಯಿಂದ ಹೆದರಿಸಕೂಡದೆಂದೂ, ಗಾಡಾಂಧಕಾರದಲ್ಲಿ ಮಾರ್ಗಕ್ರಮಣಮಾಡಲು ಮಾರ್ಗ ದೊರಕದೇ ಹೋಗುವುದರಿಂದ ಅಂತಹರ ಬಳಿಗೆ ನಿನ್ನ ಭಾರೈಯಾದ ಮಿಂಚು ಸಹಾಯಕ್ಕೆ ಕಳುಹಿಸಿಕೊಡಬೇಕಂತ ಪ್ರಾರ್ಥಿಸಿಕೊಂಡಿರುವನು. ಹೀಗೆ ಅಪರಿಚಯ ಪಾಂಥಸ್ವಿಯರ ವಿಚಾರದಲ್ಲಿ ಇಷ್ಟು ಪ್ರೀತಿಯು ಇರುವಾಗ ಕೇವಲ ರಕ್ತಸಂಬಂಧಿ ಗಳನ್ನು ಪ್ರೀತಿಸುವುದು ಸ್ವಾಭಾವಿಕವಾದುದಾಗಿಯೇ ಇರುವುದು. ಇದಲ್ಲದೆ ಲೋಕದಲ್ಲಿ ತಮ್ಮ ಪ್ರೀತಿಪಾತ್ರರಾದ ಮಕ್ಕಳನ್ನು ಬಹುದೂರದೇಶಕ್ಕೆ ಅಥವಾ ಅಪರಿಚಯಸ್ಥಳಕ್ಕೆ ಕಳುಹಿಸಿಕೊಡಬೇಕಾದ ಸಂದರ್ಭದಲ್ಲಿ ತಾಯಿತಂದೆಗಳು ಆ (36)