ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ ವೆಂಕಟನಾಥ ೮೫ ಅಥವಾ ಅ೦ಜನೇಯನು ಹೇಳಿಬಂದಂತೆ ಶ್ರೀರಾಮನು ಸಸ್ಯನಾಗಿ ಬರುತ್ತಿರ ಬಹುದಾಗಿ ಭಾವಿಸಿ ಉತ್ತರದಿಕ್ಕಿನ ಕಡೆಗೆ ನೋಡುತ್ತಿರಬಹುದು. ಅಥವಾ ಅವಳ ಮೈಮೇಲಣ ಆಭರಣಗಳನ್ನು ನೋಡಿ ರಾಮನ ಸ್ಪರ್ಶಸುಖವಿಚಾರವಾಗಿ ಕೇಳು ತಿರಬಹುದು ಅಥವಾ ಹಿಂದೆ ತಾನುಅನುಭವಿಸಿದ ಸುಖಸಂಕಥಾವಿನೋದಗಳನ್ನು ಜ್ಞಾಪಿಸಿಕೊಳ್ಳುತ್ತಿರಬಹುದು ಅಥವಾ ಶುದ್ಧ ಮಿಂದೋಃಶ್ಚಪಚಭವನೇ ಕೌಮುದೀವಿಷ್ಟುರಂತೀ ಮಾಸೀತಾಂವಾವಿಷರರುವನ ಪಾರಿಜಾತಸ್ಯ ಶಾಖಾಂ || ಅಥವಾ ಸೂಕ್ತಿಂರಮ್ಯಾಂಗಲಪರಿಸರೇ ಸತ್ಯ ವೇಃ ಕೀರಮಾನಾಂ ವರ್ಷಕೀರ್ತಿವಕಮಲಿನೀವ್ಯಾಹತಾರ್ಧಾಮಿಕ್ಕಿಂ ಪಂಕುಷ್ಟಾ ಮಿವಬಸಲತಾಂ ಪಠ್ಯ ವೇತಾವಿವೇಣೀಂ ಮೇಘಛ ನ್ನಾ ಮಿವ ಶಶಿಕಲಾಂವಿಮ್ಮ ರುದ್ರಾಭಿ ವಾಸಾಂ ಅಥವಾ ವ್ಯಾ ಮೈ ನೇತಾಮಿವಶಶವಧೂಂಭೂತಲೇ ಜ್ಯಾಮಿವೆ.ಸ್ತಾಂ || ಎಂಬತೆ ಕಣ್ಣು ಮುಚ್ಚಿಕೊಂಡು ತನ್ನ ಆತ್ಮಾರಾಮನನ್ನು ಮನದಲ್ಲಿ ಚಿತ್ರಿಸುತ್ತಿರಬಹುದು ಅಥವಾ ಹಾಗೆ ಚಿತ್ರಿಸಿ ನೋಡಿನೋಡಿ ಕೊಂಚ ಕೊಂಚವಾಗಿ ಸುಯ ಗರೆಯಬಹುದು. ಈ ಸಂದರ್ಭದಲ್ಲಿ ಮಹಾಕವಿಕಾಳಿ ದಾಸನ ಯಕ್ಷನು ದೂತನಾದ ಮೇಘನನ್ನು ಕುರಿತು ಇಂತಹ ಸಂದರ್ಭದಲ್ಲಿ (“ಯಾಮವಾತಂಸಹಸ್ಯ?” (ಕೆಲವುಕಾಲದವರೆಗೆ ಕಾದಿರಬೇಕಾಗಿ) ಎಂದು ಪ್ರಾರ್ಥಿ ಸಿರುವನು. ಹಾಗಿಲ್ಲದಿದ್ದರೆ ಅವಳ ಸ್ವಪ್ರಾನುಭವದ ಸೌಖ್ಯಕ್ಕೂ ವಿಚ್ಛೇದನ ಉಂಟಾಗಬಹುದು ಎಂದು ಹೀಗೆ ಹೇಳಿರುವನು. ಹಂಸಸಂದೇಶಕಾರನಾದರೆ:- ಮಭೂದಸ್ಯಾಃ ಪ್ರಣಯಿನಿಮಯಿ) ಸ್ಟಫೈಲಜ್ಜಿಕಥಂಚಿತ್ ಸದ್ಯಃಕಂರಚ್ಯುತಭುಜಲತಾಗ್ರಂಧಿಗಾಠೋಪಗೂಢಂ || ಎಂದು ಹೇಳಿ, ಎಲೈ! ಹಂಸ! ಹೀಗೆ ಇರುವ ಸೀತೆಯನ್ನು ನೋಡಿ “ನಿದ್ರಾಸಮಯವು ಚಿತಂ ವಿಕ್ಷನಕ್ತಂಚರೀಣಾಂ ” ಎಂಬಂತೆ ರಾಕ್ಷಸರು ಹಗಲೆಲ್ಲವೂ ಮಲಗಿ ರಾತ್ರಿ ಯೆಲ್ಲವೂ ಎದ್ದಿ ರುವರಾದುದರಿಂದಲೂ, ನೀನು ಹೋಗುವ ವೇಳೆಗೆ ಸಂಧ್ಯಾಕಾಲವಾ ಗುವುದಾದುದರಿಂದಲೂ, ನೀನು ರಾಕ್ಷಸರಿಗೆ ಕಾಣಿಸಿಕೊಳ್ಳದಹಾಗೆ ಎಲ್ಲಿಯಾದರೂ ಅಕ್ಕ ಪಕ್ಕದ ಕಾಸಾರದಲ್ಲಿ ಆ ರಾತ್ರಿಯನ್ನು ಕಳೆದ), ಪ್ರಾತಃಕಾಲದಲ್ಲಿ ಎದ್ದು ಯಾರಿಗೂ ಕಾಣಿಸಿಕೊಳ್ಳದಂತೆ ನೀನು ಬಂದುದನ್ನು ಸೀತೆಗೆ ತಿಳಿಸುವುದಕ್ಕಾಗಿ ದಶರಥ ಮತ್ತು ಜನಕರಾಜನ ವಂಶಾವಳಿಯನ್ನು ಗಾನಮಾಡು. (ಹನುಮನೂ ಹಿಂದೆ ಹಾಗೆ ಮಾಡಿದ್ದನು) ಅವಳು ನಿನ್ನ ಗಾನವನ್ನು ಕೇಳಿ ನಿನ್ನನ್ನು