ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ವೆಂಕಟನಾಥ ೫೫ ತಂತ್ರವಾದ ಈ ಶರೀರದಲ್ಲಿ ಇನ್ನೂ ಬದುಕಿರಬೇಕೆಂಬ ಆಸೆಯು ಹೆಚ್ಚುತ್ತಿರುವ ದನ್ನು ನೋಡಿ ನನ್ನ ಅಂತರಾತ್ಮವೇ ನನ್ನನ್ನು ಹಾಸ್ಯಮಾಡುವಂತಿದೆ. ಶಿಲಂ ಕಿಮನಲಂ ಭವೇದನಲ ಮೌದರಂ ಬಾಧಿ ತುಂ ಪಯಃ ಪ್ರಕೃತಿಪೂರಕಂ ಕಿಮುನಧಾರಕಂಸಾರಸಂ ಅಯತ್ನ ಮಲಮಲ್ಲ ಕಂ ಪಢಪಟಚ್ಚರಂ ಕಚ್ಚರಂ ಭಜಂತಿವಿಭುಧಾ ಮುಧಾಹ ಹಹ | ಕುತಃ ಕುಕ್ಷಿತಃ || ಕಣದಲ್ಲಿ ಬಿದ್ದಿರುವ ಅಥವಾ ಉದರಿರುವ ಕಾಳುಗಳನ್ನು ಆರಿಸಿಕೊಳ್ಳುವುದ ರಿಂದ ಕುಧೆಯು ಅಡಗದೆ ? ಕೊಳದಲ್ಲಿನ ಒಂದು ಬೊಗಸೆ ನೀರನ್ನು ಕುಡಿದು ಪ್ರಾಣ ಧಾರಣಮಾಡಿಕೊಳ್ಳಲು ಆಗದೆ ? ಅಯತ್ನದಿಂದ ಮಾರ್ಗದಲ್ಲಿ ದೊರೆಯುವುದಾದ ಯಾವುದಾದರೊಂದು ಚಿಂದಿಯೆಂದ ಮಾನವು ಮುಚ್ಚದೆ? ಅಯ್ಯೋ ! ವಿದ್ಯಾ ವಂತರಾದವರು ಈ ಹಾಳುಉದರ ಪೂರಣಕ್ಕಾಗಿ ಈ ನೀಚರಾಜಾಶ್ರಯವನ್ನು ಮಾಡುವರಲ್ಲವೆ? ಅಹಹ ! ಸುಭಾಷಿತನೀವೀ-ಇದು ನೀತಿಭೋಧಕಗ್ರಂಥ. ಇದರಲ್ಲಿ ೧೪೪ಶ್ಲೋಕಗ ಳಿದ್ದು ೧೨ ಪದ್ಧತಿಗಳಾಗಿ ವಿಂಗಡಿಸಲ್ಪಟ್ಟಿದೆ. ಇದಲ್ಲದೆ ಪ್ರತಿಹನ್ನೆರಡು ಶ್ಲೋಕ ಗಳಿಗೂ ಒಂದು ಶ್ಲೋಕವು ಹೆಚ್ಚಾಗಿಕೊಟ್ಟಿರುತ್ತದೆ. ಹನ್ನೆರಡು ಶ್ಲೋಕಗಳನ್ನು ( ಭಾವುಕ'ವೆಂದೂ ಕೊನೆಯದಾದ ಒಂದು ಶ್ಲೋಕವನ್ನು ಪ್ರಿಯ'ನೆಂದೂ ಹೇಳಲ್ಪ ಟ್ಟಿದೆ. ಮೇಲೆ ಹೇಳಿದ ಹನ್ನೆರಡು ಪದ್ಧತಿಗಳಲ್ಲಿ ಐದು ದುರ್ಜನ ಪದ್ಧತಿಯನ್ನೂ ಮದು ಸಜ್ಜನರ ಕಾವ್ಯಗಳನ್ನೂ, ಹನ್ನೊಂದನೆಯದು ಸತ್ಕವಿಗಳ ವಿಚಾರ ವನ್ನೂ ಕೊನೆಯದು ವಿವೇಚನಾಜ್ಞಾನವನ್ನೂ ಹೇಳುತ್ತದೆ. ಇದನ್ನು ಸರ್ವಜ್ಞ (?) ಸಿಂಗಪ್ಪನಾಯಕನಿಗಾಗಿ ಅವನು ಕೇಳಿಕೊಂಡಮೇರೆ ಬರೆದುದಾಗಿಯೂ ಇಂತಹು ದಾದ ಇನ್ನು ಮೂರು ಗ್ರಂಥಗಳನ್ನು ಬರೆದುದಾಗಿಯೂ ಅವು ತತ್ಸಂದೇಶ ರಹ ಸ್ಯಸಂದೇಶ, ರಹಸ್ಯಸಂದೇಶವಿವರಣವೆಂದು ಕರೆಯಲ್ಪಟ್ಟಿರುವುದಾಗಿಯೂ ತಮ್ಮ ಮತತತ್ವದ ಅಭಿಪ್ರಾಯವೆಲ್ಲವನ್ನು:- ಸತ್ರ ಸ್ಟಾ, ಭತಂ ಪ್ರಸಾದಯ ಸತಾಂ ವೃತ್ತಿ ವ್ಯವಸ್ಥಾಪಯ - ತ್ರಸ್ಯ ಬ್ರಹ್ಮವಿದಾಗಸಸ್ಸಣಮಿವ ವರ್ಗಿಕಾ೯ ಭಾವಯ ನಿ ಶೇಷಿತಿ ನಿಕ್ಷಪನಿಜಭರಂ ಸರ್ವಂಸ ಹೇ ಶ್ರೀಸಖೇ ಧರ್ಮಧಾರಯು ಚಾತಕ ಕುಶರ್ಲಿ ಧಾರಾಧಕ್ಕೆ ಕಾಂತಿನಃ | ಎಂಬ ಒಂದು ಶ್ಲೋಕದಲ್ಲಿ ಬರೆದು ಮೇಲೆ ಹೇಳಿದ ಅರಸುಮಗನಿಗೆ ಕಳುಹಿಸಿದುದಾಗಿ ಕರೆಯು ಇದೆ. ಪ್ರಕೃತ ಈ ಸಿಂಗಪ್ಪನಾಯಕನಾರೆಂಬುದನ್ನು ತಿಳಿಯಬೇಕಾಗಿದೆ,