ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

] ಪ್ರತಾಪ ರುದ್ರ (೨) 464 ಪ್ರತಾಪ ರುದ್ರನ ನಿಜವಾದ ಹೆಸರು ನಂದ”ನೆಂದೂ, ಪ್ರತಾಪರುದ್ರನೆಂಬ ಹೆಸರು ನಾಮಾಂತರವೆಂದೂ ಇವನು ಶೈವಮತಾವಲಂಬಿಯಾಗಿಜೈನರನೇಕರನ್ನು ಕೊಲ್ಲಿಸಿದನಾದುದರಿಂದ ರುದ್ರನೆಂಬುದು ನಾಶಸೂಚಕಾರ್ಥವಾದುದರಿಂದ ಇವ ನನ್ನು ಪ್ರತಾಪರುದ್ರನೆಂದು ಕರೆದಿರುವುದಾಗಿಯೂ ಮೆ|| ಸ್ಟರ್ಲಿಂಗರವರು ಒಕ್ಕಣಿ ಸಿರುವರು. ಇದೊಂದು ಸೋಜಿಗ! ವೇದದಲ್ಲಿ ರುದ್ರನೆಂಬ ಶಬ್ದಕ್ಕೆ ಅನೇಕಾರ್ಥಗಳಿ ರುವುವು. ಮೆ|| ಸ್ಟರ್ಲಿಂಗರವರ ಹೇಳಿಕೆಯ ಬದಲು ಇವನು ರಣಧೀರನಾಗಿದ್ದು ಶತ್ತು ನಿಗ್ರಹವನ್ನು ಮಾಡುತ್ತಿದ್ದನಾದುದರಿಂದ ಮಹಾಪ್ರತಾಪಶಾಲಿಯೆಂದೂ ಪ್ರತಾಪರುದ್ರನೆಂದೂ ಏಕಕರೆಯಿಸಿ ಕೊಂಡಿರಬಾರದು ? ಶಬ್ದ ಗಳ ಭಿನ್ನಾರ್ಥ ಕಲ್ಪನೆಯಿಂದ ಹೆಸರಿನ ನಿಜತ್ವವನ್ನು ಸಾಧಿಸುವುದು ಬಹು ಸಾಹಸದ ಕೆಲಸವೆಂದು ತೋರುತ್ತದೆ. ಪ್ರತಾಪ ರುದ್ರನ ಆಸ್ಥಾನ ಪಂಡಿತನಾದ ವಿದ್ಯಾನಾಥನು ತನ್ನ ಆಶ್ರಯದಾತನ ಚರಿತವನ್ನು ಬರೆದು ಆತನ ಕಲ್ಯಾಣಗುಣವರ್ಣನೆಯನ್ನು ಮಾಡಿ ಅವುಗಳನ್ನು ಬೇಕಾದ ಉದಾಹರಣೆಗಳಿಂದ ಸಮರ್ಥಿಸಿರುವ ಪ್ರತಾಪರುದ್ರೀಯ ಎಂಬ ಅಲಂಕಾರಗ್ರಂಥದಲ್ಲಿ ಪ್ರತಾಪ ರುದ್ರನ ಹೆಸರನ್ನು ಹೇಳುವಾಗ ನಂದನೆಂಬ ಹೆಸರೂ ಪ್ರತಾಪ ರುದ್ರನಿಗೆ ಇದ್ದಿತಾಗಿ ಹೇಳಬಹುದಾಗಿದ್ದಿತು. ಹಾಗೆ ಎಲ್ಲಿಯೂ ಹೇಳಿರುವುದಿಲ್ಲವಾದುದರಿಂದ ಬಹುಜನ ಸಮ್ಮತವಾದ ಪ್ರತಾಪರುದ್ರನೆಂಬ ಹೆಸರಿ ನಿಂದಲೇ ಕರೆಯಬೇಕಾಗಿರುವುದು, ಯಂ, ಕೃಷ್ಣಮಾಚಾರ್ರವರು. ಕ್ರಿ. ಶ. ೧೨೯೪-೧೩೨೫ರವರೆಗೆ ಓರಂಗ ಲ್ಲಿನಲ್ಲಿ ಆಳಿದವನು ರುದ್ರದೇವನೆಂದು ಮಾತ್ರ ಹೇಳಿರುವುದು ಹೊರ್ತು ಅವನು ಕಾಕತೀಯ ಅರಸನೆಂದಾಗಲಿ ಅವನಿಗೆ ಪ್ರತಾಪರುದ್ರನೆಂಬ ಹೆಸರಿದ್ದಿ ತಂದಾಗಲಿ ಹೇಳಿರುವುದಿಲ್ಲ€t. ಪ್ರತಾಪರುದ್ರನು ರಣಧೀರನಾಗಿದ್ದಂತೆ ಕಲಾಭಿಜ್ಞನಾಗಿದ್ದು ದಾಗಿ:- ವಾಣೀಂಮುಖೇನಗೋತ್ರಾಭ್ಯಾಂಶ್ರಿಯಂದೋಷ್ಟಾಚ ಮೇದಿನೀಂ ಮಾನಯಂಸ್ತುಲ್ಯ ತಾಂಧತ್ತೆ ತಾಸುರುದ್ರನರೇಶ್ವರಃ | ಚಾತುರ್ಯಂಕಿಮುವರ್ಣ್ಯತೇ ಗುಣನಿಧೇಃ ಶ್ರೀವೀರರುದ್ರಪ್ರಭೋ - ರ್ಯನೊನ ವಿರುದ್ಧಯೋರಪಿಮಹದಿಣೀಶಿಯೋಮಾರ್ಜನಂ ಕಿಂಚಾಭ್ಯಾ೦ಸದ್ಯ ಶೋಪಚಾರಲಲಿತಾಂತತ್ವಾದಶರುತ್ತವೆ ರ್ನಿಸ್ಥಾಪತ್ಯ ಮಿಮಾಂಭುವಂಸನ ಪತಿರ್ಧತೇದಿಶಾಂಜಿತ್ಪರಃ || ಎಂಬ ಶ್ಲೋಕಗಳಿಂದ ತಿಳಿಯಬರುತ್ತದೆ. …

  • Asiatic Researches Vol. XV act, and Rev• Taylors Hand

Rool of Hindu Mythology and Philosophy P. 77-79. | Classical Sanskrit Literature P. 103. 3 ಪ್ರತಾಪ ರುದ್ರೀಯ ಪುಟ ೧೧-೧೮ ಕ್ಕೂ, ೧೯:೩೭.