ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ [ಕ್ರಿಸ್ತ be ' ಎಂದು ತಿರುಗಿಸಿ ಹೇಳಿದುದನ್ನು ಕೇಳಿ ರಾಜನು ಸಂತುಷ್ಟನಾಗಿರಲು, ಕಾಲ ಕ್ರಮದಲ್ಲಿ ದೆಹಲಿಯ ಚಕ್ರವರ್ತಿಗೂ ಇವನಿಗೂ ಕೊಳಗುಳ ಒದಗಿ ಪ್ರತಾಪ ರುದ್ರನು ಸೋತು ಸೊರೆಗೊಯ್ಯಲ್ಪಟ್ಟು ಮೂರು ವರ್ಷಗಳು ಕಾರಾಗೃಹವನ್ನನುಭ ವಿಸಿ ಅನಂತರ ಮುಕ್ತನಾಗಿ ತನ್ನ ರಾಜ್ಯಕ್ಕೆ ಬಂದು ತನ್ನ ವಿಚಾರವಾಗಿ ಬರೆದಿರುವ ಪ್ರತಾಪರುದ್ರೀಯವೆಂಬ ಗ್ರಂಥವನ್ನು ನೋಡಿ, ಕಡುಸಂತಸಗೊಂಡು ವಿದ್ಯಾನಾಥ ನಿಗೆ ಬೇಕಾದಷ್ಟು ಧನಕನಕ ವಸ್ತ್ರಾದಿಗಳನಿತ್ತು ರಾಜ್ಯಭಾರವನ್ನು ತನ್ನ ತಮ್ಮ ನಾದ ಅನುದೇವನಿಗೆ ವಹಿಸಿ ತಾನು ವಿರಕ್ತನಾದನು. ವಿದ್ಯಾನಾಥನು ಈರೀತಿ ದೊರೆತ ದ್ರವ್ಯದಿಂದ ಮಗಳ ವಿವಾಹವನ್ನು ಸಾಂಗವಾಗಿ ನೆರವೇರಿಸಿ ಸುಖದಿಂದಿರು ತಿರ್ದು ಕಾಲಕ್ರಮದಲ್ಲಿ ಅನಮದೇವನ ರಾಜ್ಯ ಸಮಯದಲ್ಲಿ ತನ್ನ ೫೫ನೆಯ ವಯಸ್ಸಿನಲ್ಲಿ ಮೃತನಾದನು. ಇವನು ಕ್ರಿ. ಶ. ೧೪ನೆಯ ಶತಮಾನದವನು, 'ಇವನು ಪ್ರತಾಪರುದ್ರೀಯವೆಂಬ ಅಲಂಕಾರಗ್ರಂಥವಲ್ಲದೆ ಪ್ರತಾಪರುದ್ರ ಕಲ್ಯಾಣವೆಂಬ ನಾಟಕವನ್ನೂ ಬರೆದಿರುವನು ಇದರಲ್ಲಿ ೫ ಅಂಕಗಳಿರುವವು ಕಥಾ ನಾಯಕನ ವಿಚಾರವಾಗಿ ಸೂತ್ರಧಾರನು:- ತಂ ಸುಜಾತಂ ಸಮುದ್ಭಕ್ಷ್ಯ ಕ್ಕೊಣ್ಯಾಂ ರವಿವಿಧೋದಿತಂ - ಪ್ರತಾಪರುದ್ರ ಇತ್ಯಾಖ್ಯಾ ಮಕರೋತ್ಸಾಕತೀಶ್ವರಃ || ೧-೧೧ ವಿಷರ್ವಿಕ ವೀರಸ್ಯ ಕಾಕತೀಯಕುಲೇ ಸ್ಥಿತಂ ಅವತಾರವನುಂ ಜಾತಾ ವೀರರುದ್ರಂ ಪ್ರಚಕ್ಷತೇ || ೧-೧೨. ಎಂದೂ, ಕವಿಯ ವಿಚಾರವಾಗಿ:- ತೇಜಃ ಪರ್ಯಾಪಹಾರಯೋಃ | ಕಿಂಕಿಂ ಸಂಬೋಧನಂ ಮತಂ ಕಿಮಾಶೀರ್ವಾದದಿಷಯೋ ವಿದ್ಯಾನಾಥಕೃತಿಶ್ಚ ಕಾ || ೧-110, ಎಂದೂ ಹೇಳಿಕೊಂಡಿರುವನು. ಈ ನಾಟಕದಲ್ಲಿ ಪಾರ್ವತೀ ಪರಮೇಶ್ವರರ ವಿವಾಹಸಂಬಂಧವನ್ನು ಸೂಚಿಸು ವುದಾದ ಮಂಗಳಾಚರಣೆಯ ಮೂಲಕ ನಾಟಕಾರಂಭವನ್ನು ಮಾಡಿ, ಪ್ರತಾಪ ರುದ್ರನ ದಿಗ್ವಿಜಯ ಮತ್ತು ರಾಜ್ಯ ಪ್ರಾಪ್ತಿಯನ್ನು ಹೇಳಿ ಮುಗಿಸಿರುವನು ಪ್ರತಾಪರುದ್ರ ಕಲ್ಯಾಣ-ಎಂಬದು ಪ್ರತಾಪರುದ್ರನು ರಾಜ್ಯಲಕ್ಷ್ಮಿಯನ್ನು ವರಿಸಿ ಚಿಟ್ಟಾಭಿಷಿಕ್ತನಾದನೆಂಬುದು ಈ ನಾಟಕದ ಕಥಾವಸ್ತು. ಇದನ್ನು ಪ್ರತಾಪ ರುದ್ರಯದಲ್ಲಿ ನಾಟಕೋದಾಹರಣ ಪ್ರಕರಣದಲ್ಲಿ:- 1 Dekkan Poets P. 44:48