ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩e ಸಂಸ್ಕೃತಕಏಚರಿತೆ fಕಿಸ್ತ ಅಪ್ಸರೆಯರ ಹಾವಭಾವವಿಲಾಸ ಸಂಪೂರ್ಣವಾದ ಮನೋಹರ ವಾಕ್ಯ ಗಳಿಂದಲೂ, ವಿಶಾಲನೇತಗಳ ಅಪಾಂಗವಿ ಕ್ಷಣದಿಂದಲೂ, ಹುಬ್ಬುಗಳನ್ನು ತಿರು ಗಿಸುವುದರಿಂದಲೂ, ಭುಜದ ಮೇಲಿನಿಂದ ಜಾರಿಹೋಗುತ್ತಿರುವ ಸೆರಗನ್ನು ಸರಿ ಮಾಡಿಕೊಂಡು ಮೇಲಕ್ಕೆಳೆದು ಕೊಳ್ಳುವಾಗ ಉಂಟಾಗುವ ಬಳೆಗಳ ಮಂಜುಳ ಧನಿಗಳಿಂದಲೂ ಇವೇ ಮೊದಲಾದ ಅನೇಕ ವ್ಯಾಪಾರಂಗಳಿಂದ ಎಷ್ಟು ವಿಧವಾಗಿ ಅವನ ತಪಸ್ಸಿಗೆ ವಿಘ್ನವನ್ನುಂಟು ಮಾಡಿದರೂ ಆ ತಪಸ್ವಿಯು ಕೊಂಚವಾದರೂ ಮನೋವಿಕಾರವನ್ನು ಹೊಂದಲಿಲ್ಲ. ಸ್ತ್ರೀಯರ ಚೇತನ ಪ್ರಕೃತಿಕಾಠಿನ್ಯ ವಿಚಾರದಲ್ಲಿ:- ಶೇತೇ ಯಾ ಕಿಲ ಹಂಸತೂಲಶಯನೇ ನಿದ್ರಾತಿ ಸಾ ಸ್ಥಂಡಿಲೇ ವತ್ತೇ ಯಾ ಮೃದುಲಂ ದುಕೂಲವಬಲಾ ಗ್ರಹಾತಿ ಸಾ ವಲಿಂ ಯಾ ಮ ಚಂದನಪಂಕಲೆ:ಪಶಿಶಿರೇ ಧಾರಾಗೃಹೇವರ ತೇ ಪಂಚಾನಾಮುದಿತೋಷ್ಣಾಂ ಹುತಭುಜಾಂ ಸಾ ಮಧ್ಯಮಾಸೇವ|| ೪-೨ ಆಹಾ ! ಯಾವ ಪಾರ್ವತಿಯು ಪೂರ್ವದಲ್ಲಿ ಹಂಸತೂಲಿಕಾತಲ್ಪದ ಮೇಲೆ ಮಲಗುತ್ತಿದ್ದಳೋ ಅವಳು ಈಗ ಸ್ಥ೦ಡಿಲದಲ್ಲಿ (ನೆಲದಮೇಲೆ) ಶಯನಮಾಡುತ್ತಾಳೆ. .ಯವಳು ಅತಿಮೃದುವಾದ ದುಕೂಲ (ವಸ್ತ್ರಗಳನ್ನು ಧರಿಸುತ್ತಿದ್ದಳೋ ಅಂಥವಳು ಈಗ ನಾರುಬಟ್ಟೆಗಳನ್ನು ಧರಿಸುತ್ತಾಳೆ, ಯಾವಳು ಅತ್ಯಂತ ಶೀತಲಚಂದನಾದಿ ಗಳನ್ನು ಲೇಪಿಸಿಕೊಂಡು ಧಾರಾಗೃಹದಲ್ಲಿ(ನೀರಿನಮನೆ)ವಾಸಿಸುತ್ತಿದ್ದಳೋ ಅವಳು ಈಗ ಪಂಚಾಗ್ನಿಗಳ ಮಧ್ಯದಲ್ಲಿ ತಪಸ್ಸನ್ನು ಮಾಡುತ್ತಿರುವಳು, ಪಾರ್ವತಿಯ ಸತ್ವಪರಿಕ್ಷೆಗಾಗಿ ವೇಷಾಂತರದಿಂದ ಬಂದ ಈಶ್ವರನು ಪಾರ್ವ ತಿಯನ್ನು ಕುರಿತು, ಎಲ್ ಮುಗುದೆ ! ನೀನು ಅಪೇಕ್ಷಿಸುವ ವರನ ಇರವನ್ನು ಆಳು:- ಆಲೀ ಪೋ ಭಸಿತಂ ವಿಭೂಷಿತಮಹಿರ್ಮಾಸಃ ಪಿರ್ತಣಂ ವನೇ ವೇತಾಲಾಃ ಪರಿಚಾರಕಾಃ ಪ್ರತಿದಿನಂ ವೃತ್ತಿಶ್ಚ ಭಿಕ್ಕಾ ಮಯಾ ಇತ್ತ ಯಸ್ಯ ಶುಭೇತರಾಣಿ ಚರಿತಾನ್ಯಾ ಖಂತಿ ಸರ್ವಜನಾ ಸಸ್ಮಿನ್ಸ್‌ರವಶಾಸ್ಮತಿವ ರುಚಿಂ ರ್ಬಾ ತಿ ಕಿಂ ಮಹೇ ೪-೧೨ ಅವನು (ಮೈಗೆ) ಬಳಿದುಕೊಳ್ಳುವುದು ಬೂದಿ. ಅವನ ಆಭರಣಗಳೊ ಸರ್ಪಗಳು, ವಾಸಸ್ಥಳವು ಶಶಾನ, ಭೂತವೇಶಾಲಾದಿಗಳು ಪರಿಚಾರಕರು, ಜೀವ ನವು ಪ್ರತಿದಿನದ ಭಿಕ್ಷಾಟನದಿಂದ, ಇಂತಹ ಅಮಂಗಳಕರನಾದ ಆ ಶಂಕರನಲ್ಲಿ ಮೂಢಳಾಗಿ ಹೇಗೆ ತಾನೇ ನಿನು ಮನಸ್ಸನ್ನಿಟ್ಟಿರುವೆ! ಈ ವಿಚಾರದಲ್ಲಿ ನಾನೇನು ತಾನೇ ಹೇಳಲಿ ! -