ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88] ವಾಮನಭಟ್ಟ ಬಾಣ, ಶ್ರೀವರಪಂಡಿತ &qo ನಳಾಭ್ಯುದಯ:-ಇದರಲ್ಲಿ ೮ ಸರ್ಗಗಳೂ ೯ ನೆಯದರಲ್ಲಿ ಮೂರು ಶ್ಲೋಕಗಳು ಮಾತ್ರ ಇರುವುದರಿಂದ ಕಾವ್ಯವು ಪೂರ್ತಿಯಾದಂತೆ ಕಾಣಬರುವುದಿಲ್ಲ! ೯ನೆಯ ಸರ್ಗದ ಈ ಕೆಳಗಣ ಮೂರು ಶ್ಲೋಕಗಳು ಗ್ರಂಥದ ಭೂಮಿಕೆಯಕೊನೆ ಯಲ್ಲಿ ಬರೆಯಲ್ಪಟ್ಟಿರುವುವು. ಇದು ಹೆಸರಿಗೆ ತಕ್ಕಂತೆ ಪುರಾಣಪ್ರಸಿದ್ಧನಾದ ನಳನ ಕಥೆಯನ್ನು ಹೇಳುವುದಾಗಿದೆ. ಗತೇಬಹುತಿಥೇ ಕಾಲೇಪರ್ಣಾ ನಾಮಬಾಡವಃ ಪ್ರತ್ಯತ್ಯ ಕುಂಡಿನಂ ಭ್ರಮಾಂರಹಸ್ಯ ತದಭಾಷತ || ೧ || ಅಥಗಾಮೇಷದೇ ಶೇಷುವನೇಷುಪವನೇಮಚ ನಲಮನ್ನೇಷಮಾಣಾಶ್ಮೀನಾಧಿಜರ್ಗುಜಾತಯಃ || ೨ || ದಮಯಂತ್ಯು ದಿತಾಂವಚಂ ಜಗದುಸ್ತತ್ರ ತತ್ರತೇ ನಕಶ್ಚದಪಿಸರ್ವಸ್ಯಾಂ ಪೃಥಿವ್ಯಾ ಮುತ್ತರಂದ || ೩ || ಎಂಟನೆಯ ಸರ್ಗದ ಕೊನೆಯಲ್ಲಿ “ ಇತಿ ಶ್ರೀವಾಮನಭಟ್ಟ ಬಾಣಕೃತ್ ನಲಾಭ್ಯುದಯ ಅಷ್ಟಮಸ್ಸರ್ಗಃ ” ಎಂದಿರುವುದು. ಶೃಂಗಾರಭೂಷಣ-ಇದು ರೂಪಕ ಭೇದವಾದ ಭಾಣ ಜಾತಿಗೆ ಸೇರಿ ದುದು. ಇದರಲ್ಲಿ ಒಂದಂಕವಿರುವುದು. ೮೬ ಶ್ಲೋಕಗಳಿರುವುವು. ಕಥಾ ನಾಯಕನು ವಿಲಾಸ ಶೇಖರನು, ಇವನ ಗದ್ಯ ಶೈಲಿಯು ಬಾಣನ ಶೈಲಿಯನು ಹೋಲುವುದಾದರೂ ಪದ್ಯ ರಚನಾಕ್ರಮದಲ್ಲಿ ಬಾಣನನ್ನು ಮಾರಿಸಿರುವನೆಂದರೆ ಅಚ್ಚರಿಯಾಗದು. ಇವನ ಶ್ಲೋಕಗಳು ಸುಂದರವೂ ಸರಳವೂ ಆಗಿರುವುವು. ಶ್ರೀ ನ ಕ ಸ ೦ ಡಿ ತ ಇವನು ಬ್ರಾಹ್ಮಣನು. ಇವನ ಮಾತಾಪಿತೃಗಳಾರೆಂಬುದು ತಿಳಿಯದು. ಇವನು ಯಾವಾಗ ಎಲ್ಲಿದ್ದ ನೆಂಬುದು ಸ್ಪಷ್ಟವಾಗಿ ತಿಳಿಯದಾದರೂ ಕೆಳಗೆ ಹೇಳುವ ಶ್ಲೋಕಗಳಿಂದ ಕೊಂಚಮಟ್ಟಿಗೆ ಇವನ ಕಾಲವನ್ನು ತಿಳಿಯಬಹುದಾಗಿದೆ, ಹೇಗೆಂದರೆ: ಪ್ರಾಜೈಜಾಗ್ರತಿ ರಾಜ್ಯೋತಿಷ್ಯ ಪ್ರಥಿವ್ಯಾಂ ಪೃಥಿವೀಪತೇಃ ಶಾಕೇ ಮುನಿದ್ವಿವೇದೇಂದು (೧೪೨೭) ಗಣಿತೇ ವಿಕ್ರಮೋಸ್ಕಗೋಃ | ಸ್ಥಿತೇsಪಿಲೌಕಿಕೇವರ್ಷೆಚಂದ್ರಾಷ್ಟ (೮೧) ಪರಿಪೂರಿತೇ ಮಾಧವೇಮಾಸಿಕಾ ಕಾಯಾಂ ರಮೇಷಮುಪಾಗತೇ || (ಕಧಾಕೌತುಕ ೩೬-೩೮)