ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯದೇವ (೨) ೩೩೬ ಎಂಬ ಶ್ಲೋಕವು ಪುಷ್ಟಿಕರಿಸುತ್ತದೆ ಇವನು ವಿದರ್ಭದಲ್ಲಿದ್ದು ಹರಿಮಿಶನ ಬಳಿ ವಿದ್ಯೆಯನ್ನು ಕಲಿತನು. ಇವನಿಗೆ ಪಿಯೂಷನರ್ಷ, ಪಕ್ಷಧರನೆಂಬ ಬಿರುದುಗಳಿದ್ದವು.* ಕಾಲ:-ಇವನು ಕ್ರಿ. ಶ. ೧೬ನೆಯ ಶತಮಾನದವನು, ಅಪ್ಪಯ್ಯ ದೀಕ್ಷಿತನ ಸಮಕಾಲೀನನು. ಗ್ರಂಥಗಳು:-(0) ಪ್ರಸನ್ನರಾಘವ (೨) ಚಂದ್ರಾಲೋಕ (೩) ಪಕ್ಷಧರೀಯ (೪) ರತಿಮಂಜರೀ ಪ್ರಸನ್ನರಾಘವ:-ಇದು ಏಳು ಅಂಕಗಳುಳ್ಳ ನಾಟಕ. ಇವನು ರಾಮಾಯಣ ಕಥಾಭಾಗವನ್ನು ತೆಗೆದುಕೊಂಡು, ಮುರಾರಿಯ ಅನರ್ಘರಾಘವದ ಪಡಿನೆಳಲನ್ನನು ಸರಿಸಿ ಈ ನಾಟಕವನ್ನು ಬರೆದನಾದುದರಿಂದ ಅಂಧದೇಶೀಯರು ಇವನನ್ನು “ಬಿಲ್ಲಮುರಾರಿ'ಎಂದು ಕರೆಯುವವಾಡಿಕೆ. ಮೊದಲನೆಯ ಅಂಕದಲ್ಲಿ ಬಾಣ ಮತ್ತು ರಾವಣಾಸುರರ ವಿಚಾರವೂ ಅವರು ಅವಮಾನ ಪಟ್ಟುದೂ ಬಹು ಸೊಗಸಾಗಿ ಚಿತ್ರಿತವಾಗಿದೆ. ಸೀತಾರಾಮರ ಪ್ರಣಯವಿಚಾರ, ರಾಮನಿಗೂ ಜಾಮದಗ್ನನಿಗೂ ನಡೆದ ಸಂಭಾಷಣೆ ಇವೇ ಮೊದಲಾದವು ಅತಿಮನೋಜ್ಞವಾಗಿವೆ. ಏಳನೆಯ ಅಂಕದಲ್ಲಿ ರಾಮರಾವಣರ ಯುದ್ಧ, ರಾವಣನ ಮೃತಿ, ಅಗ್ನಿ ಪೂತಳಾದ ಸೀತೆ ಯನ್ನು ಹೊಂದುವಿಕೆ ಇವನ್ನು ವಿದ್ಯಾಧರದಂಪತಿಗಳು ಹೇಳುವಂತೆ ಯೋಚಿಸಿ ಕೊನೆಯಲ್ಲಿ ಶ್ರೀರಾಮನು ಸೀತಾಲಕ್ಷ್ಮಣರೊಡನೆ ಪುಷ್ಪಕವಿಮಾನವನ್ನೇರಿ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾದ ವಿಚಾರದೊಡನೆ ಕೊನೆಗೊಂಡಿದೆ. ಇವನು ಕವಿತಾಚತುರನು ಹೇಗೋ ಹಾಗೆ ಕಲ್ಪನಾಚತುರನೆಂದೂ ಹೇಳುವುದಕ್ಕೆ ಅಡ್ಡಿ ಇರದು ಉದಾಹರಣೆಗೆ ಈ ನಾಟಕವು ಸಾಕು, ಶೈಲಿಯು ಹೃದಯಂಗಮ, ವರ್ಣನೆಗಳು ಕೇವಲ ಸ್ವಾಭಾವಿಕವಾದವು, ಮನೋಹರವಾದ ಕವಿತೆಗಳಿಂದ ಕೂಡಿ ಹೇಳುವುದಕ್ಕೂ, ಕೇಳುವುದಕ್ಕೂ, ಇಂಪಾಗಿಯೂ ಸೊಂಪಾಗಿಯೂ ಇರುವುದು. ಚಂದ್ರಾಲೋಕ:-ಇದು ಲಕ್ಷಣಗ್ರಂಥ ಬಾಲಕರ ಅವಗಾಹನೆಗೆ ಸುಲಭ ವಾಗಿ ಬರದಿರುವುದಾಗಿ:- ಅಲಂಕಾರೇಷುಬಾಲಾನಾಂ ಅವಗಾಹನ ಸಿದ್ಧಯೇ - ಲಲಿತ: ಕ್ರಿಯತೇತೇಷಾಂ ಲಕ್ಷ ಲಕ್ಷಣಸಂಗ್ರಹಃ ಎಂಬ ಗ್ರಂಥಾರಂಭ ಶ್ಲೋಕದಿಂದ ವ್ಯಕ್ತಪಡುತ್ತದೆ.

  • History cf Classical Sanskrit Literature P, 108-109

(43)