ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40o ಸಂಸ್ಕೃತಕವಿಚರಿತ ಈ ಹೆಸರು ಬಂದುದರ ಕಥೆಯೊಂದಿರುವುದು. ವಿಜಯನಗರದ ಪ್ರಖ್ಯಾತರಾಜ ನಾದ ಕೃಷ್ಣದೇವರಾಯನು ಸಂಸಾರದೊಂದಿಗೆ ಕಾಂಚಿಗೆ ಹೋಗಿ ವರದರಾಜನನ್ನು ಸೇವಿಸುತ್ತಿರುವಲ್ಲಿ ಆಚಾರದೀಕ್ಷಿತರು:- ಕಾಚಿತ್ ಕಾಂಚನಗೌರಾಂಗೀಂ ವೀಕ್ಷ್ಯ ಸಾಕ್ಷಾದಿವ ಶ್ರಿಯಂ ವರದಃ ಸಂಶಯಾಪನ್ನೂ ವಕ್ಷಃಸ್ಥಲಮಕ್ಷತ || ಸಾಕ್ಷಾತ್ ಲಕ್ಷ್ಮಿಯಂತೆ ಹೇಮಾಂಗಿಯಂತಿರುವ ಸ್ತ್ರೀಯನ್ನು (ಕೃಷ್ಣ ರಾಯನ ಹೆಂಡತಿ) ಕಂಡು ವರದನು ಸಂಶಯಗ್ರಸ್ತನಾಗಿ ತನ್ನ ವಕ್ಷದಲ್ಲಿ ವಾಸಿಸು ತಿದ್ದ ಲಕ್ಷ್ಮಿಯು ಇರುವಳೋ ಇಲ್ಲವೋ ಎಂದು ನೋಡಿಕೊಂಡನಂತೆ) ಎಂದು ವರ್ಣಿಸಿದುದನ್ನು ಕೇಳಿ ಕೃಷ್ಣದೇವರಾಯನು ಸಂತೋಷಿಸಿ, ಆಚಾಲ್ಯದೀಕ್ಷಿತರನ್ನು ವಕ್ಷಸ್ಥ ಲಾಚಾರದೀಕ್ಷಿತರೆಂದು ಬಹುಮಾನಿಸಿ ಕರೆದನಂತೆ. ಈ ಶ್ಲೋಕವನ್ನು ಅಪ್ಪಯದೀಕ್ಷಿತನು ಬರೆದಿರುವ ಚಿತ್ರಮಿಾಮಾಂಸಾ ಗ್ರಂಥದಲ್ಲಿ ಸಂದೇಹಾಲಂಕಾರ ಧ್ವನಿಗೆ ಉದಾಹರಿಸಿಕೊಂಡಿರುವನು. ಆಚಾಗ್ಯದೀಕ್ಷಿತರು ಕೃಷ್ಣದೇವರಾಯನ ಮೆಚ್ಚುಗೆಯನ್ನು ಹೊಂದಿ ಅವನ ಆಶ್ರಯದಲ್ಲಿದ್ದರು, ನೀಲಕಂಠದೀಕ್ಷಿತನು ತಾನು ಬರೆದಿರುವ ನಳಚರಿತನಾಟಕದಲ್ಲಿ ಆಚಾರ್ ದೀಕ್ಷಿತರನ್ನು ಅರ್ಚ್ಚದೀಕ್ಷಿತನೆಂದು ಹೇಳಿ ಕೊಂಡಿರುವನು. ತಮಿಳುಭಾಷೆಯಲ್ಲಿ ಅರ್ಚ ಎಂದರೆ ಅಚಾಲ್ಯನೆಂದರ್ಥ. ಇವರು ಅಸೀಮವಿದ್ಯಾವಂತರೂ, ಪರಮ ಭಕ್ತಾಗ್ರೇಸರರೂ ಆಗಿದ್ದರು. ಇವರಿಗೆ ಇಬ್ಬರು ಪತ್ನಿಯರು. ಮೊದಲನೆಯ ಹೆಂಡತಿಯ ಮನೆತನದವರು ಶೈವಮತಾನುಯಾಯಿ ಗಳಾಗಿದ್ದರು. ಎರಡನೆಯ ಹೆಂಡತಿಯ ಹೆಸರು ತೋತಾರಂಬಾ, ಶ್ರೀವೈಷ್ಣವಮತ ದವರಾದ ಇವರು ಮಹಾ ಪ್ರಸಿದ್ಧರಾದ ವೈಕುಂಠಾಚಾದ್ಯರ ವಂಶಸಂಭೂತರಾದ ಶ್ರೀರಂಗರಾಜಾಚಾರರ ಮಕ್ಕಳು. ಕಾಲಕ್ರಮದಲ್ಲಿ ಇವರಿಗೆ ನಾಲ್ವರು ಗಂಡು ಮಕ್ಕಳಾದರು. ಇವರಲ್ಲಿ ಹಿರಿಯವನೇ ಶ್ರೀರಂಗರಾಜಾಧ್ವರೀ ಅಥವಾ ಶ್ರೀರಂಗ ರಾಜಮಖಿ (ಮಖಿ' ಎಂದರೆ ಯಜ್ಞಮಾಡಿದವರೆಂದು ಅರ್ಥ, ಇವನು ತಂದೆ ಯಾದ ಆಚಾರದೀಕ್ಷಿತರಲ್ಲಿ ಶಿಕ್ಷೆಯನ್ನು ಹೊಂದಿ ಮಹಾ ವಿದ್ವಾಂಸನಾಗಿದ್ದು ಅದೈತವಿದ್ಯಾಮುಕುರ, ವಿವರಣದರ್ಪಣ ಮೊದಲಾದ ಗ್ರಂಥಗಳನ್ನು ಬರೆದನು. ಇವನಿಗೆ ಇಬ್ಬರು ಗಂಡುಮಕ್ಕಳು. ಇವರಲ್ಲಿ ಹಿರಿಯವನೇ ಅಪ್ಪಯ್ಯ ದೀಕ್ಷಿತನು. ಎರಡನೆಯವನು ಅರ್ಚ್ಚಾದೀಕ್ಷಿತ, ಈ ಅರ್ಚ್ಯಾದಿಕ್ಷಿತನು ನೀಲಕಂಠವಿಜಯ ಚಂಪೂಕಾರನಾದ ದೀಕ್ಷಿತ ನೀಲಕಂಠನ ಮಾತಾಮಹನು, ಅಪ್ಪಾದೀಕ್ಷಿತನೆಂಬದು ಮೊದಲಿನ ಹೆಸರಾದರೂ ಕಾಲಕ್ರಮದಲ್ಲಿ ಅಪ್ಪಯ್ಯ ದೀಕ್ಷಿತನೆಂದು ಕರೆಯುವುದೇ ರೂಢಿಯಾದುದು. ಕಾಲ:-ದೀಕ್ಷಿತನ ಜೀವನ ಚರಿತೆಯನ್ನೂ ಕಾಲವನ್ನೂ ತಿಳಿಯಹೇಳುವ ಅಚ್ಯಯ್ಯದೀಕ್ಷಿತೇಂದ್ರವಿಜಯ”ಎಂಬ ಗ್ರಂಥವನ್ನು ಶಿವಾನಂದ* ಯೋಗೀಂದ್ರನು

  • ಪೂರಶ್ರಮದ ಹೆಸರು ಶೇಷದೀಕ್ಷಿತನೆಂದು,