ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ fಕ್ರಿಸ್ತ ರಾಜನು ಸಿಂಹಾಸನಕ್ಕೆ ಬಂದನು, ಅನಂತರ ಇವನ ತಮ್ಮನಾದ ವೆಂಕಟಪತಿಯು ಕ್ರಿ. ಶ. ೧೫೮೫ರಲ್ಲಿ ಸಿಂಹಾಸನವನ್ನು ಹತ್ತಿ ಕ್ರಿ. ಶ. ೧೬೧೪ರವರೆಗೆ ಅಳಿದನು. ಈ ರಾಜರೇ ವಿಜಯನಗರದ ಕೀಯನ್ನು ಇನ್ನೂ ಗಳಿಸಿಕೊಂಡಿದ್ದರು. ಜಿಂಜಿ ಎಂಬದು ವಿಜಯನಗರಕ್ಕೆ ಸೇರಿದ ಒಂದು ಜಹಗೀರಿ ಅಥವಾ ಪಾಳ್ಯಪಟ್ಟು, ಇದನ್ನು ಸೂರಪ್ಪನಾಯಕನೆಂಬುವನು ಕ್ರಿ. ಶ. ೧೫೫೦ ರಿಂದ ೧೫೭೫ ರವರಿಗೆ ಆಳುತ್ತಿದ್ದನು. ಸುಮಾರು ಕ್ರಿ. ಶ. ೧೫೭೮ ರಿಂದ ೧೬೧೦ ರವ ರೆಗೆ ಕೃಷ್ಣಪ್ಪನಾಯಕನೆಂಬುವನು ಆಳಿದನು. ಜಿಂಜಿಯ ವಿಚಾರವಾಗಿ ನಮಗೆ ದೊರೆಯುವ ಚರಿತ್ರಾಧಾರಗಳು ಇಷ್ಟು ಮಾತ್ರ. ವೆಲ್ಲೂರಿನ ವಿಚಾರಗಳು ಹೆಚ್ಚಾಗಿ ಶಾಸನಾದಿಗಳಿಂದ (Epigraphical Records) ತಿಳಿಯ ಬರುತ್ತವೆ. ಕ್ರಿ. ಶ. ಸುಮಾರು ೧೬ ನೆಯ ಶತಮಾನಾ ರ್ಧದವರೆಗೆ ಎಂದರೆ ಕ್ರಿ. ಶ ೧೫೪೯ ರವರೆಗೆ ಚಿನ್ನ ವೀರಪ್ಪನಾಯಕನೆಂಬುವನು ಆಳುತ್ತಿದ್ದು ದಾಗಿಯೂ, ಸುಮಾರು ಕ್ರಿ. ಶ. ೧೫೪೯ ರಿಂದ ಇವನ ಮಗ ಚಿನ್ನ ಬೊಮ್ಮನಾಯಕನು ಕ್ರಿ. ಶ. ೧೫೭೮ ರವರೆಗೆ ಆಳುತ್ತಿದ್ದು ದಾಗಿಯೂ ತಿಳಿಯ ಬರುತ್ತದೆ. ಅನಂತರ ಇವನ ಮಗ ಲಿಂಗನಾಯಕನು ಕ್ರಿ. ಶ. ೧೬೧೪ ರವರೆಗೆ ಆಳಿದನು. ಕೃಷ್ಣ ದೇವರಾಯನು ವಿಜಯನಗರದಲ್ಲಿ ಆಳುತ್ತಿದ್ದಾಗ ತಂಜಾವೂರಿನಲ್ಲಿ ವೀರಶೇಖರಚೋಳನೆಂಬುವನು ರಾಜನಾಗಿದ್ದನು. ಕೃಷ್ಣದೇವರಾಯನು ಮುಖ್ಯ ಮುಖ್ಯವಾದ ಗಡಿಗಳಲ್ಲಿ ತನ್ನ ಕಡೆಯವರನ್ನು ನೇಮಿಸುವುದಾದರೆ ತನ್ನ ರಾಜ್ಯಕ್ಕೆ ಯಾವ ತೊಂದರೆಯೂ ಬಾರದೆಂದು ಯೋಚಿಸಿ ಸಾಳ್ವನಾಯಕ (ವೀರನರಸಿಂಹ, ಚಿಲ್ಲಪ್ಪ) ನೆಂಬವನನ್ನು ಚೋಳದೇಶಗಳಿಗೆ ಸರ್ವಾಧಿಕಾರಿಯಾಗಿ ನಿಯಮಿಸಿದ್ದನು. ಸಾಳ್ವನಾಯಕನು ಮಹಾಮೇಧಾವಿಯಾಗಿದ್ದು ರಾಜ್ಯಶಾಸನ ಧುರೀಣನಾಗಿದ್ದನು. ಕೃಷ್ಣದೇವರಾಯನು ಮೃತನಾದಕೂಡಲೇ ಇವನು ದಂಗೆ ಎದ್ದನು. ಅಚ್ಯುತ ರಾಯನು ಇದನ್ನು ತಿಳಿದು ಸಸೈನ್ಯನಾಗಿ ಇವನ ಮೇಲೆ ದಂಡೆತ್ತಿ ಬಂದು ಕ್ರಿ. ಶ. ೧೫೩೫ರಲ್ಲಿ ಇವನನ್ನು ಸೋಲಿಸಿ ಕೈಸೆರೆಹಿಡಿದನು. ಇವನು ಬಿಡುಗಡೆ ಹೊಂದಿ ದನೇ ಇಲ್ಲವೇ ರಾಜ್ಯವಾಳಿದನೇ ಹೇಗೆಂಬ ವಿಚಾರದಲ್ಲಿ ಚರಿತ್ರೆಯ ಸ್ತಬ್ಧವಾಗಿದೆ ಯಾದರೂ ಸುಮಾರು ೮-೧೦ ವರ್ಷಗಳವರೆಗೆ ಪುನಃ ರಾಜ್ಯವನ್ನಾಳಿರಬೇಕೆಂದು ಊಹಿಸಲು ಅವಕಾಶವಿದೆ. ಕೆಲವುಜನ ಪಂಡಿತರು ಸಾಳ್ವನಾಯಕ, ವೀರನರಸಿಂಹ, ಚೆಲ್ಲಪ್ಪನೆಂಬ ಇವನನ್ನು ತುಳುವ ವಂಶದ ಮೂಲಪುರುಷನಿಂದ, ಪದಭ್ರಷ್ಠನಾಗಿ ಮಾಡಲ್ಪಟ್ಟ ವಿಜಯನಗರದ ಸಾಲ್ವ ರಾಜನಾಗಿರಬೇಕೆಂದು ಅಭಿಪ್ರಾಯ ಪಡು ವರು, ಇದು ನಿಜವಾಗಿದ್ದರೆ ಅಚ್ಯುತನು ದಂಗೆ ಎದ್ದಿದ್ದ ಚೆಲ್ಲಪ್ಪನನ್ನು ಅಡಗಿಸಿ,