ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ಅಪ್ಪಯ್ಯ ದೀಕ್ಷಿತ ೩ ಅವನ ಪ್ರಾರ್ಥನೆಯನ್ನು ಮನ್ನಿಸಿ, ರಾಜ್ಯವನ್ನು ಹಿಂದಕ್ಕೆ ಕೊಟ್ಟಿದ್ದರೂ ಇರ ಬಹುದು, ಹೇಗಾದರೂ ಇರಲಿ! ಕ್ರಿ. ಶ ೧೫೪೯ ಕ್ಕೆ ಮುಂಚೆಯೇ ತಂಜಾವೂರು ನಾಯಕರ ನೂತನ ವಂಶಾವಳಿಯು ಸ್ಥಾಪಿತವಾಗಿದ್ದು ದಾಗಿ ಹೇಳಬಹುದಾಗಿದೆ ಸೆವ್ವಪ್ಪನಾಯಕನೂ ಮತ್ತು ಅಚ್ಯುತರಾಯನೂ ಇಬ್ಬರೂ ಪಡ್ಡ ಕರು, (ಅಕ್ಕತಂಗಿಯರನ್ನು ಮದುವೆ ಮಾಡಿಕೊಂಡವರು) ಅಚ್ಯುತನು ಚೋಳ ರಾಜ್ಯ ವನ್ನು ಸ್ತ್ರೀಧನವಾಗಿ ಸೆವ್ವಪ್ಪನಿಗೆ ಕೊಟ್ಟಿದ್ದನು, ಸೆವ್ವಪ್ಪನು ತಂಜಾವೂರಿನಲ್ಲಿ ಕ್ರಿ. ಶ. ೧೫೭೭ ರವರೆಗೆ ಆಳಿದನಂತರ ಇವನ ಮಗ ಅಚ್ಯುತಪ್ಪನು ಕ್ರಿ. ಶ. ೧೫೯೭ರ ವರೆಗೂ ಆಳಿದುದಾಗಿ ಗೊತ್ತಾಗುತ್ತದೆ. ಕೃಷ್ಣದೇವರಾಯನು ವಿಜಯನಗರವನ್ನಾಳುತ್ತಿದ್ದಾಗ ಮಧುರೆಯಲ್ಲಿ ಶ್ರೀವಲ್ಲಭದೇವಪಾಂಡ್ಯನೆಂಬವನು ಆಳುತ್ತಿದ್ದನು. ಅನಂತರ ಚಂದ್ರಶೇಖರ ಪಾಂಡ್ಯನೆಂಬುವನು ಸಿಂಹಾಸನಕ್ಕೆ ಬಂದನು. ಇವನ್ನು ಅಚ್ಯುತದೇವರಾಯನ ಸಮಕಾಲೀನನು, ಚಂದ್ರಶೇಖರಪಾಂಡ್ಯನು ರಾಜ್ಯ ನಿರ್ವಹಣ ಮಾಡಲು ಅಸಮರ್ಥ ನಾಗಿರುವುದನ್ನು ತಿಳಿದು ತಂಜಾವೂರಿನ ವೀರಶೇಖರಚೋಳನು ಕ್ರಿ. ಶ ೧೫೩೭ ರಲ್ಲಿ ಪದಚ್ಯುತನನ್ನಾಗಿ ಮಾಡಿ ಓಡಿಸಿಬಿಟ್ಟನು. ಚಂದ್ರಶೇಖರಪಾಂಡ್ಯನು ರಾಜ್ಯವನ್ನು ಬಿಟ್ಟೋಡಿ ಅಚ್ಯುತದೇವರಾಯನ ಬಳಿಗೆ ಬಂದು ರಕ್ಷಣೆಯನ್ನು ಪ್ರಾರ್ಥಿಸಿದನು. ಅಚ್ಯುತದೇವರಾಯನು ವೀರಶೇಖರನನ್ನು ಮೂದಲಿಸಿ ಚಂದ್ರ ಶೇಖರಪಾಂಡ್ಯನಿಗೆ ರಾಜ್ಯವನ್ನು ಕೊಡಿಸುವಂತೆ ನಾಗಮನಾಯಕನನ್ನು ಕಳುಹಿ ಸಿದನು. ಯುದ್ದದಲ್ಲಿ ವೀರಶೇಖರನು ವೀರಸ್ವರ್ಗವನ್ನು ಹೊಂದಲು ಚಂದ್ರ ಶೇಖರ ಪಾಂಡ್ಯನಿಗೆ ಪುನಃ ಮಧುರೆರಾಜ್ಯವು ದೊರೆಯಿತು. ಸಂತಾನಹೀನನಾದ ಚಂದ್ರಶೇಖರಪಾಂಡ್ಯನು ರಾಜ್ಯವನ್ನು ನಾಗಮನಾಯಕನ ಮಗ ವಿಶ್ವನಾಥ ನಾಯಕನಿಗೆ ಕೊಟ್ಟು ಸುಮಾರು ಕ್ರಿ. ಶ. ೧೫೪೨ರಲ್ಲಿ ಪರಲೋಕವಾಸಿಯಾದನು, ಈ ರೀತಿ ಮಧುರೆಯ ನಾಯಕನಂಶವು ಸ್ಥಾಪಿತವಾದುದು. ಕಾಲಕ್ರಮದಲ್ಲಿ ಸದಾಶಿವನಿಗೆ ಪ್ರತಿಯಾಗಿ ರಾಜ್ಯಸೂತ್ರವನ್ನು ನಡೆಯಿಸುತ್ತಿದ್ದ ರಾಮರಾಜನ ದಾಯಾದಿ (cousins) ವಿಠಲ ಮತ್ತು ಚಿನ್ನ ತಿಮ್ಮ ಇವರು ದಕ್ಷಿಣದಿಕ್ಕಿನ ಸರ್ವ ಸ್ವಾಮಿತ್ವವನ್ನು ಹೊಂದಿದ್ದ ರಾದುದರಿಂದ ವಿಶ್ವನಾಥನ ಅಧಿಕಾರವು ಕೇವಲ ನಾಮ ಮಾತ್ರವಾಗಿದ್ದಿತು. ಮೇಲಣ ಹೇಳಿಕೆಯ ಸಮರ್ಥನಕ್ಕಾಗಿ ವಂಶಾವಳಿಯನ್ನು ಬರೆದು ತೋರುವೆವು.