ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪ್ಪಯ್ಯ ದೀಕ್ಷಿತ W ದೀಕ್ಷಿತಕೃತ ಕುವಲಯಾನಂದದ ಕೊನೆಯಲ್ಲಿ:- ಅಮುಲ ಕುವಲಯಾನಂದಮಕರೋದಪ್ಪದೀಕ್ಷಿತಃ

  • ನಿಯೋಗೌಂಕಟಪತೇರ್ನಿರೂಪಾಧಿಕೃಪಾನಿಧೇಃ ||

ಎಂಬ ಶ್ಲೋಕವೂ, ವಿಧಿರಸಾಯನವೆಂಬ ಗ್ರಂಥದಲ್ಲಿ ವೆಂಕಟಪತಿರಾಜನ ವಿಚಾರವಾಗಿಹೇಳುವ:- ಪ್ರಾಪ್ತಂ ತಪಃಯ೦ ಕಿಲ ಹದಿಹ ಕಿರ್ಯಾ ಪೂರತೀಯೋsಸ್ತಿ, ನಾಲಶೋ ನಾನಿಷ್ಟಂ ವಾನಿವರಂ ಸಿಜವಿಸತಯಾ ದೃಶ್ಯ ಈ ಕಿಂಚಿದತ್ರ!! ಕಿಂ 5 ವ್ಯಾ ಪಾರಮೇಷ ಪ್ರಥಯತಿ ಫಲಸಂಯೋಜನಾರ್ಥಂಪರೇಷಾಂ ಪ್ರಾಪ್ತ: ಪುಣ್ರಗಣ್ಯನ ವಿಬುಧ ಗಣೋ ವೆಂಕಟಕ್ಕೂಣಿಪಾಲell ಎಂಬ ಶ್ಲೋಕವು ಕಂಡುಬರುತ್ತದೆ. ಹಿಗೆ ಅಪ್ಪಯ್ಯ ದೀಕ್ಷಿತನು ಕೆಲವ್ರಕಾಲದವರೆಗೆ ವೆಂಕಟಪತಿರಾಜನ ಆಶ್ರಯ ದಲ್ಲಿದ್ದು ಆತನಿಗೆ ಉತ್ತರದೇಶದಿಂದ ತನ್ನ ಬಳಿಗೆ ಬಂದ ಮಹಾವೈಯ್ಯಾಕರಣ ಭಟ್ಕಜಿ: ದಿಕ್ಷಿತನ ಪರಿಚಯವನ್ನು ಮಾಡಿಕೊಟ್ಟ ಹಾಗೂ, ಇವನು ಶಾಸ್ತ್ರಾಧ್ಯ ಯನಕ್ಕಾಗಿ ಕಾಶಿಯನ್ನು ಬಿಟ್ಟು ದೀಕ್ಷಿತನಬಳಿಗೆ ಬಂದಹಾಗೂ ತಿಳಿಯಬರುತ್ತದೆ, ಭಟ್ಟೋಜಿಯು ಕಾಶಿಯನ್ನು ಬಿಟ್ಟು ಬರುವ ಮೊದಲೇ ಪ್ರಸಿದ್ದವಾದ 'ಸಿದ್ಧಾಂತ ಕೌಮುದಿಯನ್ನು ಬರೆದು ಮುಗಿಸಿದ್ದು ದಾಗಿಯೂ ಈ ವೇಳೆಗೆ ದೀಕ್ಷಿತನ ವಿದ್ಯಾ ವೈದುಷ್ಯವಿಚಾರವು.ಉತ್ತರದೇಶದಲ್ಲಿ ಎಲ್ಲೆಲ್ಲಿಯೂ ಹರಡಿಕೊಂಡಿದ್ದಿ ತೆಂದೂ ವೆಂಕಟ ಪತಿ ರಾಜನು ಕೇಳಿಕೊಂಡಮೇರೆ ಭಟ್ರೋಜಿಯು ತತ್ಕಸ್ತುಭವೆಂಬುದನ್ನು ಬರೆದುದಾಗಿಯೂ ಹೇಳಿದೆ. ಭಟ್ಕಜಿಯು ಆಚಾರ ದೀಕ್ಷಿತನ ವಿಚಾರವಾಗಿ ತಂತ್ರ ಸಿದ್ಧಾಂತದೀಪಿಕೆಯಲ್ಲಿ:- ಅಪ್ಪಯ್ಯ ದೀಕ್ಷಿತೇಂದ್ರಾನಶೇಷವಿದ್ಯಾಗುರೂನಹಂ ವಂದೇ ಯತ್ನತಿ ಬೋಧಾ ಬೋಧೆ ವಿದ್ವದವಿದ್ಮಭಾಜಕೋಪಾಧೀ || ಎಂದು ಕೊಂಡಾಡಿರುವುದು ಕಂಡುಬರುತ್ತದೆ ಹೀಗೆ ದೀಕ್ಷಿತನ ಕಾಲವು ಚಿನ್ನ ತಿಮ್ಮನ ಮೊದಲು ಎಂದರೆ ಕ್ರಿ. ಶ. ೧೫೪೨ ರಿಂದ ವೆಂಕಟಪತಿರಾಜನ ವರೆಗಿನ ಸುಮಾರು ೫೦ ವರ್ಷಗಳ ಕಾಲವು ರಾಜಾಶ್ರಯದಲ್ಲಿ ಕಳೆದುಹೋಗಿದೆ. ಇವನ ಆದ್ಯಂತ ಜೀವಮಾನವು ೬೨ ವತ್ಸರ ಗಳೆಂದು ಪರಿಗಣಿತವಾಗಿದೆ. ಆದುದರಿಂದ ಉಳಿದ ೨೨ ವರ್ಷಗಳು ದೀಕ್ಷಿತನ ಬಾಲ್ಯವೆಂದು ಹೇಳಲಾಗುತ್ತದೆ. ದೀಕ್ಷಿತನ ವಿದ್ವತ್ಸಭೆಯ ಪ್ರಸರಣದ ಕಾಲಕ್ಕೆ _{ ತಂತ್ರಸಿದ್ಧಾಂತದೀಪಿಕಾ, ತತ್ಪಕೌಸ್ತುಭಕಾರನು ಭಟ್ಯೂಜೀ ದೀಕ್ಷಿತನಲ್ಲ. See Bhattojee's Life = = ==