ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪ್ಪಯ್ಯ ದೀಕ್ಷಿತ ೩೫n ನರಸಿಂಹ ದರಾನುಥ ಈ ವಯಂ ತವ ವರ್ಣನೆ - ಅಪಿ ರಾಜಾನಮಾಗ್ರವ, ಯಶೋ ಯಸ್ಯ ವಿಜೃಂಭತೇ || ನರಸಿಂಹ ಮಹೀ ಪಾಲ ಎದುಸ್ತಾ೦ ಮಕರಜಂ ಮಾರ್ಗಸಾಸ್ತವ ಸಂಜಾತಾಃ ಕಥಂ ಸುಮನಸೋsನ್ಯಥಾ | ಈ ಶ್ಲೋಕಗಳು ವಿದ್ಯಾಧರನ ಏಕಾವಳಿಯಲ್ಲಿಯೂ ದೊರೆಯುತ್ತವೆ. ಕಟು ಕಥೆಗಳ ಆಧಾರದಿಂದ ದೀಕ್ಷಿತನದೆಂದು ಹೇಳುವ ಮೇಲಣ ಶ್ಲೋಕಗಳು ಪ್ರಮಾಣ ವನ್ನಾಗಿ ಅಂಗೀಕರಿಸಲಾಗುವುದಿಲ್ಲ, ಏಕೆಂದರೆ, ವಿದ್ಯಾಧರನು ಆಗಿಹೋದ ಎಷ್ಟೋ ಕಾಲಗಳ ಅನಂತರ ದೀಕ್ಷಿತನ ಜನ್ಮಾವತರಣವಾಗಿರುವುದು, ಚಿದಂಬರದಲ್ಲಿ ದೀಕ್ಷಿತನು ಪ್ರಥಮ ಯಜ್ಞವನ್ನು ಮಾಡುವಾಗ ನರಸಿಂ ಹನು ಅವಭ್ರತದ ದಿವಸಬಂದಹಾಗೂ, ಯಜ್ಞಪಶುಗಳು ಪ್ರತ್ಯಕ್ಷವಾಗಿ ಸ್ವರ್ಗಕ್ಕೆ ಹೋಗುತ್ತಿದ್ದ ಹಾಗೂ ಜನರು ಹೇಳಿಕೊಳ್ಳವುದನ್ನು ಕೇಳಿ ಅವಭ್ರತಕ್ಕೆ ಬಂದಂತೆ ಶಿವಾನಂದನು ಹೇಳಿರುವನು ದೀಕ್ಷಿತನ ಗೌರವವನ್ನು ಹೆಚ್ಚಿಸುವುದಕ್ಕಾಗಿ ತನ್ನ ಗ್ರಂಥದಲ್ಲಿ ಕೊನೆಯವರೆಗೂ ನರಸಿಂಹನ ಸಂಬಂಧವನ್ನೇ ಹೇಳಿಕೊಂಡಿರುವನು. ಇದು ಅಸಂಗತವೆಂದು ನನಗೆ ತೋರುವುದು. ಏಕೆಂದರೆ ದೀಕ್ಷಿತನು ಕೊನೆಕೊನೆಗೆ ಉತ್ತರ ದೇಶಯಾತ್ರೆಯಲ್ಲಿ ಶೇಷಾಯುಷ್ಯವನ್ನು ಕಳೆದುದಾಗಿದೆ. ಆಗ ಈ ನರ ಸಿಂಹನ ಸಂಬಂಧವೇ ಇಲ್ಲ, ಅಲ್ಲದೆ ಈ ನೀರನರಸಿಂಹನೇ ಪದಭ್ರಷ್ಟನಾದ ಸಾಳ ರಾಜನೆನ್ನುವುದಾದರೆ ಅವನು ಕ್ರಿ. ಶ ೧೫೪೫ ಕ್ಕಿಂತಲೂ ಹೆಚ್ಚಾಗಿ ಬದುಕಿರನು. ಆ ವೇಳೆಗೆ ಅವನು ಅತ್ಯಂತ ಗಳಿತವಯಸ್ಕನಾಗಿರಬೇಕು. ಇನ್ನು ಚಂದ್ರಶೇಖರನ ವಿಚಾರ:- ಈತನು ಆಲ್ಯಾವರ, ಪೂನಾ ಒರಿಸ್ಸಾ ಮೊದಲಾದ ಪ್ರಾಂತ್ಯಗಳಿಗೆ ಅರಸನಾ ಗಿದ್ದನೆಂದೂ, ರತ್ನಖೇಟಶ್ರೀನಿವಾಸದೀಕ್ಷಿತನ ಆಶ್ರಯದಾತನೆಂದೂ ಶಿವಾನಂ ದನು ಹೇಳಿರುವನು, ಇವನು ಹೇಳುವಕಾಲವು ಮೊಗಲರಸರಾದ ಬಾಬರ ಮತ್ತು ಹುಮಾಯೂನನ ಕಾಲವಾದುದರಿಂದ ಸರಿಹೋಗದು, ಆದರೆ ಚಂದ್ರಶೇಖರ ನೆಂಬ ಪಾಂಡ್ಯರಾಜನೊಬ್ಬನಿದ್ದು ದಾಗಿ ಮೊದಲು ಹೇಳಿದೆ. ಚಂದ್ರಶೇಖರನು ಸುಮಾರು ಕ್ರಿ. ಶ. ೧೫೪೨ರಲ್ಲಿ ಮೃತನಾದನು. ಶಿವಾನಂದನು ಹೇಳುವ ಕಥೆ:-ಚಂದ್ರಶೇಖರರಾಜನು, ದೀಕ್ಷಿತನ ವಿದ್ವತ್ರತಿ ಭೆಯನ್ನು ಕೇಳಿ ತನ್ನಾ ಸ್ಥಾನದ ಪಂಡಿತರನ್ನು ಕುರಿತು ದೀಕ್ಷಿತನೊಡನೆ ವಾದ ಮಾಡುವ ಪಂಡಿತರು ಆರಾದರೂ ನಮ್ಮ ಸಭೆಯಲ್ಲಿರುವರೇ ಎಂದು ಬೆಸಗೊಂ ಡುದಕ್ಕೆ ರತ್ನಖಿ'ಟನು ವಾದಕ್ಕೆ ಒಪ್ಪಿ ದೀಕ್ಷಿತನೊಡನೆವಾದವನ್ನು ಹೂಡಿ ಪರಾಜಿ ತನಾಗಿ ತನ್ನ ಮಗಳಾದ ಮಂಗಳನಾಯಕಿಯನ್ನು ದೀಕ್ಷಿತನಿಗೆ ಮದುವೆಮಾಡಿ