ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತವಿದರಿತ [ಕ್ರಿ. ನೀಲಕಂಠನು ಬರೆದುದಾದ ನಳಚಂತನಾಟಕದ ಪ್ರಸ್ತಾವನೆಯಿಂದ ನಿರ್ಧರಿಸ ಬಹುದಾಗಿದೆ:- ಸೂತ್ರಧಾರ:-ನವನಿರ್ವಕಂ ನಲಚರಿತಂನಾನು ನಾಟಕಂ, ಕವಿರಸಿ ತಸ್ಯ ಜಗದ್ವಿದಿತಏವ, ಪಾರಿಪಾರ್ಶ್ಚಕಃ:-ಆನಿ ಸರುಕ್ಕಿಣೀಪರಿಣಯಸ್ಯಾಸಿ ಪ್ರಣೀತಾ ! ಸೂತ್ರಧಾರ:-(ವಿಹಸ್ಯ)ನ ಹಿ ನಹಿ ಅಸ್ತ್ರ ಖಲು ಸಿತ್ಯಂಯಮಪ್ಪಯ ದೀಕ್ಷಿತೋ ನಾಮಸರಸಕವಿತಾಸಾಮ್ರಾಜ್ಯ ಸಾರ್ವಭೌಮನಸ್ತತ್ರ ಜೇತಾ ಅಯಂ ತು ಮುಕುಂದವಿಲಾಸಸ್ಯಕಾವ್ಯಸ್ಯ ನಿಬಂಧಾ ಎಂದಿದೆ. ತಂತ್ರಸಿದ್ಧಾಂತದೀಪಿಕೆಯು ಪ್ರಾಯಃ ಒಂದನೆಯ ಅಪ್ಪಯ್ಯದೀಕ್ಷಿತನ ಮತ ವನ್ನು ಖಂಡಿಸಿ ಹೇಳುವ ನೂತನ ಮೂಾಮಾಂಸಾಶಾಸ್ತ್ರಕಾರರ ಮತವನ್ನು ಖಂಡಿಸಿ ಹೇಳುವುದಕ್ಕಾಗಿ ಬರೆದಿರಬೆ?ಕಾಗಿ ತೋರುತ್ತದೆ. ತಂತ್ರ ಸಿದ್ಧಾಂತದೀಪಿಕಾಕಾರನ ವಂಶಾವಳಿಯು ಹೀಗಿರುವುದು. (ಪಕ್ಕದ ಪುಟವನ್ನು ನೋಡಿ.) ತಂತ್ರ ಸಿದ್ಧಾಂತದೀಪಿಕಾಕಾರನಾದ ಮೂರನೆಯ ಅಪ್ಪಯ್ಯ ದೀಕ್ಷಿತನು ಗ್ರಂಥಾರಂಭದಲ್ಲಿ:- 11 ಅಪ್ಪಯ್ಯ ದೀಕ್ಷಿತೀಂದ್ರನಶೇಷ ವಿದ್ಯಾಗುರೂನಹಂವಂದೇ " ಎಂದು ತನ್ನ ಪಿತಾಮಹನನ್ನು ಸ್ತುತಿಸಿರುವುದು ಯೋಗ್ಯವಾಗಿದೆ. ಇದನ್ನು ಬಿಟ್ಟು ಭಟ್ಟೋಜಿಯು ಬರೆದುದೆಂದು ಹೇಳುವುದು ಸರ್ವಥಾ ಸರ್ವಸಮ್ಮತ ನಾಗದು. $ Nalacharitapataka, Balamanorama Press Edition P. 3,